ಜೈಲಲ್ಲಿ ರೌಡಿಶೀಟರ್ ಸ್ನೇಹ ಬೆಳೆಸಿದ ದರ್ಶನ್: ವೈರಲ್ ಫೋಟೋದಲ್ಲಿ ಇರುವ ನಾಗ ಯಾರು?

ರೇಣುಕಾಸ್ವಾಮಿ ಮರ್ಡರ್​ ಕೇಸ್​ನಲ್ಲಿ ಜೈಲು ಪಾಲಾಗಿರುವ ದರ್ಶನ್​ ಈಗ ನಟೋರಿಯಸ್​ ವ್ಯಕ್ತಿಗಳ ಸಹವಾಸ ಮಾಡಿರುವುದಕ್ಕೆ ಸಾಕ್ಷಿ ಸಿಕ್ಕಿದೆ. ಜೈಲಿನಲ್ಲಿ ಇರುವ ರೌಡಿಶೀಟರ್​ಗಳ ಜೊತೆ ದರ್ಶನ್​ಗೆ ಸ್ನೇಹ ಬೆಳೆದಿದೆ. ಅವರ ಜೊತೆ ಹಾಗಾಗಿ ಟೀ ಕುಡಿದು, ಸಿಗರೇಟ್​ ಸೇದುತ್ತಾ ಕಾಲ ಕಳೆಯುತ್ತಿರುವ ದರ್ಶನ್​ ಫೋಟೋ ಲಭ್ಯವಾಗಿದೆ. ಈ ನಟೋರಿಯಸ್​ ವ್ಯಕ್ತಿಗಳ ಬಗ್ಗೆಯೂ ಮಾಹಿತಿ ಸಿಕ್ಕಿದೆ.

ಜೈಲಲ್ಲಿ ರೌಡಿಶೀಟರ್ ಸ್ನೇಹ ಬೆಳೆಸಿದ ದರ್ಶನ್: ವೈರಲ್ ಫೋಟೋದಲ್ಲಿ ಇರುವ ನಾಗ ಯಾರು?
ದರ್ಶನ್ ವೈರಲ್ ಫೋಟೋ
Follow us
ಮದನ್​ ಕುಮಾರ್​
|

Updated on: Aug 25, 2024 | 4:57 PM

ನಟ ದರ್ಶನ್ ಮೇಲೆ ಗಂಭೀರ ಆರೋಪ ಇದೆ. ರೇಣುಕಾ ಸ್ವಾಮಿ ಹತ್ಯೆ ಕೇಸ್​ನಲ್ಲಿ ದರ್ಶನ್​ ಎ2 ಆರೋಪಿ ಆಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಜೈಲು ಸೇರಿದ ದರ್ಶನ್, ಅಲ್ಲಿಯೂ ರೌಡಿಶೀಟರ್​ಗಳ ಸಹವಾಸ ಮಾಡಿದ್ದಾರಾ ಎಂಬ ಅನುಮಾನ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಒಂದೇ ಒಂದು ಫೋಟೋ. ಈ ಫೋಟೋದಲ್ಲಿ ದರ್ಶನ್​ ಅವರು ರೌಡಿಶೀಟರ್​ ನಾಗನ ಜೊತೆ ಕುಳಿತು ಸಿಗರೇಟ್​ ಸೇದುತ್ತಾ ಇರುವುದು ಕಾಣಿಸಿದೆ. ಅಂದಹಾಗೆ, ದರ್ಶನ್​ ಜೊತೆ ಫೋಟೋದಲ್ಲಿ ಇರುವುದು ನಟೋರಿಯಸ್​ ಕ್ರಿಮಿನಲ್​ ವಿಲ್ಸನ್​ ಗಾರ್ಡನ್​ ನಾಗ.

ಯಾರು ಈ ನಾಗ? ವಿಲ್ಸನ್ ಗಾರ್ಡನ್ ನಾಗ ಎಂಬ ಆತ ಬೆಂಗಳೂರು ದಕ್ಷಿಣ ವಿಭಾಗದ ರೌಡಿಶೀಟರ್. ಸಿದ್ದಾಪುರ ಮಹೇಶ್ ಕೊಲೆ ಪ್ರಕರಣದಲ್ಲಿ ನಾಗ ಜೈಲುಪಾಲಾಗಿದ್ದಾನೆ. ಕಳೆದ ಆಗಸ್ಟ್​ನಲ್ಲಿ ಕೋರ್ಟ್​ಗೆ ವಿಲ್ಸನ್ ಗಾರ್ಡನ್ ನಾಗ ಶರಣಾಗಿದ್ದ. ಆತನ ವಿರುದ್ಧ ಕೋಕಾ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿತ್ತು. ದರ್ಶನ್​ ಜೈಲಿಗೆ ಹೋದಾಗ ವಿಲ್ಸನ್ ಗಾರ್ಡನ್ ನಾಗನ ಭೇಟಿಗೆ ಮುಂದಾಗಿದ್ದರು. ಈಗ ನಾಗನ ಜೊತೆ ಟೀ, ಸಿಗರೇಟ್ ಶೇರ್ ಮಾಡುತ್ತಿರುವ ದರ್ಶನ್ ಫೋಟೋ ಹೊರಬಂದಿದೆ.

ವೈರಲ್​ ಆಗಿರುವ ಫೋಟೋದಲ್ಲಿ ದರ್ಶನ್ ಪಕ್ಕದಲ್ಲೇ ಕುಳಿತಿರುವ ಮತ್ತೊಬ್ಬ ಆರೋಪಿ ನಾಗರಾಜ್. ಈತ ದರ್ಶನ್​ ಮ್ಯಾನೇಜರ್​. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ 11ನೇ ಆರೋಪಿಯಾಗಿ ನಾಗರಾಜ್​ ಜೈಲು ಸೇರಿದ್ದಾನೆ. ದರ್ಶನ್​ ಮಾಡುವ ಪಾರ್ಟಿ ಸೇರಿದಂತೆ ಎಲ್ಲ ಕಡೆಗಳಲ್ಲೂ ಈಗ ಜೊತೆಗಿರುತ್ತಿದ್ದ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದಾಗ ಕಾಲಿನಿಂದ ಒದ್ದಿದ್ದು ಇದೇ ನಾಗ. ಹಾಗಾಗಿ ರೇಣುಕಾಸ್ವಾಮಿ ಬರ್ಬರ ಹತ್ಯೆ ಕೇಸ್​ನಲ್ಲಿ ನಾಗನದ್ದು ಪ್ರಮುಖ ಪಾತ್ರವಿತ್ತು ಎನ್ನಲಾಗಿದೆ.

2 ದಿನದ ಹಿಂದೆ ಸೆಂಟ್ರಲ್ ಜೈಲಿನ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಸ್ಪೆಷಲ್ ಬ್ಯಾರಕ್​ನಿಂದ ಆಚೆ ಕುಳಿತಿರುವ ಕೊಲೆ ಆರೋಪಿ ದರ್ಶನ್, ವಿಲ್ಸನ್ ಗಾರ್ಡನ್ ನಾಗ ಹಾಗೂ ಸಹಚರರು ಸಿಗರೇಟ್, ಟೀ ಕಪ್ ಹಿಡಿರುವುದು ತಿಳಿದುಬಂದಿದೆ. ದರ್ಶನ್​ ಮಂದಹಾಸ ಬೀರುತ್ತಾ, ಚೇರ್ ಮೇಲೆ ಕುಳಿತು ಹಾಯಾಗಿ ಮಾತನಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಜೈಲಿನಲ್ಲಿರುವ ದರ್ಶನ್​ಗಾಗಿ 2 ಬ್ಯಾಗ್ ಹಿಡಿದು ಬಂದ ರಚಿತಾ ರಾಮ್​

ದರ್ಶನ್​, ವಿಲ್ಸನ್​ ಗಾರ್ಡನ್​ ನಾಗ ಮತ್ತು ಮ್ಯಾನೇಜರ್​ ನಾಗರಾಜ್ ಜೊತೆ ಇರುವ ಮತ್ತೋರ್ವ ವ್ಯಕ್ತಿ ಶ್ರೀನಿವಾಸ್ ಅಲಿಯಾಸ್​ ಕುಳ್ಳ ಸೀನಾ ಕೂಡ ರೌಡಿಶೀಟರ್! ಕೋಣನಕುಂಟೆ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿರೋ ಕುಳ್ಳ ಸೀನಾ ತಲಘಟ್ಟಪುರ ಠಾಣಾ ವ್ಯಾಪ್ತಿಯ ಕೊಲೆ ಕೇಸ್​ನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.