AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್​’ ಗೆದ್ದಾಗಲೂ ಸೌತ್ ಸಿನಿಮಾ ಬಗ್ಗೆ ಹಗುರವಾಗಿ ಮಾತನಾಡಿದ್ದ ಅರ್ಷದ್​ ವಾರ್ಸಿ

ಯಶ್​ ನಟನೆಯ ‘ಕೆಜಿಎಫ್​’ ಸಿನಿಮಾ ಉತ್ತರ ಭಾರತದಲ್ಲೂ ಸಖತ್​ ಸದ್ದು ಮಾಡಿತ್ತು. ಆ ಸಿನಿಮಾದ ಗೆಲುವಿನ ಬಳಿಕ ಬಾಲಿವುಡ್​ನ ಅನೇಕರು ಪ್ರತಿಕ್ರಿಯೆ ನೀಡಿದ್ದರು. ಅರ್ಷದ್​ ವಾರ್ಸಿ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಬಹಳ ಉಡಾಫೆಯಾಗಿ ಮಾತನಾಡಿದ್ದರು. ಆ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಈಗ ವೈರಲ್​ ಮಾಡಲಾಗುತ್ತಿದೆ.

‘ಕೆಜಿಎಫ್​’ ಗೆದ್ದಾಗಲೂ ಸೌತ್ ಸಿನಿಮಾ ಬಗ್ಗೆ ಹಗುರವಾಗಿ ಮಾತನಾಡಿದ್ದ ಅರ್ಷದ್​ ವಾರ್ಸಿ
ಅರ್ಷದ್​ ವಾರ್ಸಿ, ಯಶ್​
ಮದನ್​ ಕುಮಾರ್​
|

Updated on:Aug 25, 2024 | 3:06 PM

Share

ಬಾಲಿವುಡ್​ ನಟ ಅರ್ಷದ್​ ವಾರ್ಸಿ ಅವರು ಅನಗತ್ಯವಾಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ‘ಪ್ರಭಾಸ್​ ಅವರು ಕಲ್ಕಿ 2898 ಎಡಿ ಸಿನಿಮಾದಲ್ಲಿ ಜೋಕರ್​ ರೀತಿ ಕಾಣ್ತಾರೆ’ ಎಂದು ಹೇಳಿಕೆ ನೀಡಿದ ಅರ್ಷದ್​ ವಾರ್ಸಿ ವಿರುದ್ಧ ಸೌತ್​ ಸಿನಿಮ ಮಂದಿ ಗರಂ ಆಗಿದ್ದಾರೆ. ಇಷ್ಟು ವರಟಾಗಿ ಅರ್ಷದ್ ವಾರ್ಸಿ ಮಾತನಾಡಬಾರದಿತ್ತು ಎಂಬುದು ಎಲ್ಲರ ಅಭಿಪ್ರಾಯ. ಈಗ ಅರ್ಷದ್​ ವಾರ್ಸಿ ಅವರ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಹೆಚ್ಚಾಗಿದೆ. ಅವರ ಹಳೇ ವಿಡಿಯೋಗಳನ್ನು ಕೂಡ ಹುಡುಕಿ ತಂದು ವೈರಲ್​ ಮಾಡಲಾಗುತ್ತಿದೆ. ‘ಕೆಜಿಎಫ್’ ಸಿನಿಮಾ ಗೆದ್ದಾಗಲೂ ಅರ್ಷದ್​ ವಾರ್ಸಿ ಅವರು ದಕ್ಷಿಣ ಭಾರತದ ಸಿನಿಮಾ ಕುರಿತು ಹಗುರಾಗಿ ಮಾತನಾಡಿದ್ದರು.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅರ್ಷದ್​ ವಾರ್ಸಿ ಅವರಿಗೆ ‘ಕೆಜಿಎಫ್​’ ಸಿನಿಮಾದ ಕ್ರೇಜ್​ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ ಅವರು ಇಡೀ ದಕ್ಷಿಣ ಭಾರತದ ಸಿನಿಮಾಗಳನ್ನು ಒಂದೇ ತಕ್ಕಡಿಯಲ್ಲಿ ಇಟ್ಟು, ಇಂಥ ಸಿನಿಮಾಗಳಲ್ಲಿ ಬುದ್ಧಿವಂತಿಕೆ ಏನೂ ಇರುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

All my servants watch Hindi dubbed south movies. You don’t need much brain to watch them. – Arshad Warsi byu/raaz9658 inBollyBlindsNGossip

‘ನಮ್ಮ ಮನೆಯಲ್ಲಿ ಕೆಲಸ ಮಾಡುವ ಎಲ್ಲರೂ ಕೂಡ ಹಿಂದಿಗೆ ಡಬ್​ ಆಗಿರುವ ದಕ್ಷಿಣ ಭಾರತದ ಸಿನಿಮಾಗಳನ್ನು ನೋಡುತ್ತಾರೆ. ಅವು ಸಖತ್​ ಮನರಂಜನೆ ನೀಡುತ್ತವೆ. ರಜನಿಕಾಂತ್​ ಅವರು ಅಷ್ಟು ದೊಡ್ಡ ಸ್ಟಾರ್​ ಆಗಿದ್ದಾರೆ ಎಂದರೆ ಏನೋ ಕಾರಣ ಇರಲೇಬೇಕು. ಹೆಚ್ಚು ಯೋಚಿಸುವ ಅಗತ್ಯ ಇಲ್ಲ. ಬುದ್ಧಿ ಉಪಯೋಗಿಸಬೇಕಿಲ್ಲ. ವಾಹನಗಳು ಹಾರುತ್ತವೆ, ಜನಗಳು ಹಾರುತ್ತಾರೆ. ನೀವು ನೋಡುತ್ತಾ ಇರಿ. ಪಾಪ್​ ಕಾರ್ನ್​ ತಿಂದು, ಸಿನಿಮಾ ನೋಡಿ ಮನೆಗೆ ಹೋಗಿ’ ಎಂದಿದ್ದರು ಅರ್ಷದ್​ ವಾರ್ಸಿ.

ಇದನ್ನೂ ಓದಿ: ದುಡಿದ ಹಣ ಕಳೆದುಕೊಂಡೆವು, ನೀವು ಜಾಗೃತೆ: ಬಾಲಿವುಡ್ ನಟ ಅರ್ಷದ್ ವಾರ್ಸಿ

ಅರ್ಷದ್​ ವಾರ್ಸಿ ಅವರ ಈ ಹೇಳಿಕೆ ಕೂಡ ವಿವಾದಕ್ಕೆ ಕಾರಣ ಆಗಿದೆ. ‘ಓಹ್.. ಬಾಲಿವುಡ್​ ನಿರ್ದೇಶಕ ರೋಹಿತ್​ ಶೆಟ್ಟಿಯ ಸಿನಿಮಾಗಳ ಬಗ್ಗೆ ಅರ್ಷದ್ ಹೇಳುತ್ತಿರುಬಹುದು’ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ‘ಇಂಥ ಹೇಳಿಕೆಗಳಿಂದ ನಿಮ್ಮ ಮೇಲಿರುವ ಗೌರವ ಕಡಿಮೆ ಆಗುತ್ತಿದೆ’ ಎಂದು ಕೂಡ ಜನರು ಕಮೆಂಟ್​ ಮಾಡಿದ್ದಾರೆ. ಒಟ್ಟಾರೆಯಾಗಿ ಅರ್ಷದ್​ ವಾರ್ಸಿ ಅವರ ಮಾತುಗಳಿಂದ ಸೌತ್​ ವರ್ಸಸ್​ ಬಾಲಿವುಡ್ ಎಂಬ ಚರ್ಚೆ ಮತ್ತೆ ಜೀವ ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:06 pm, Sun, 25 August 24

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!