Roberrt Piracy : ‘ರಾಬರ್ಟ್​’ ಚಿತ್ರದ 3 ಸಾವಿರ ಪೈರಸಿ ಲಿಂಕ್​ ಪತ್ತೆ! ದರ್ಶನ್​ ಸಿನಿಮಾ ಮೇಲೆ ಕಿಡಿಗೇಡಿಗಳ ಕಣ್ಣು

ಎಷ್ಟೇ ಕಷ್ಟಪಟ್ಟು ಸಿನಿಮಾ ಮಾಡಿದರೂ ಪೈರಸಿ ಹಾವಳಿಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡಬೇಕು. ದರ್ಶನ್​ ನಟನೆಯ ರಾಬರ್ಟ್ ಚಿತ್ರಕ್ಕೂ ಈ ಸಮಸ್ಯೆ ಎದುರಾಗಿದೆ.

Roberrt Piracy : ‘ರಾಬರ್ಟ್​’ ಚಿತ್ರದ 3 ಸಾವಿರ ಪೈರಸಿ ಲಿಂಕ್​ ಪತ್ತೆ! ದರ್ಶನ್​ ಸಿನಿಮಾ ಮೇಲೆ ಕಿಡಿಗೇಡಿಗಳ ಕಣ್ಣು
ದರ್ಶನ್​ - ಆಶಾ ಭಟ್​

Updated on: Mar 12, 2021 | 3:53 PM

‘ಡಿ ಬಾಸ್’​ ದರ್ಶನ್​ ನಟನೆಯ ‘ರಾಬರ್ಟ್​’ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಈ ಚಿತ್ರಕ್ಕೆ ಫುಲ್​ ಮಾರ್ಕ್ಸ್​ ನೀಡುತ್ತಿದ್ದಾರೆ. ಇದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಆದರೂ ಈ ನಡುವೆ ಒಂದು ತಲೆ ನೋವು ಶುರು ಆಗಿದೆ. ಪೈರಸಿ ಹಾವಳಿ ವಿರುದ್ಧ ಚಿತ್ರತಂಡ ಹಗಲು-ರಾತ್ರಿ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಶಿವರಾತ್ರಿ ಪ್ರಯುಕ್ತ ಗುರುವಾರ (ಮಾ.11) ರಾಬರ್ಟ್​ ಸಿನಿಮಾ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆ ಆಗಿತ್ತು. ಒಂದು ದಿನ ಕಳೆಯುವುದರೊಳಗೆ ಪೈರಸಿ ಕಾಟ ಶುರುವಾಗಿದೆ. ಕೆಲವು ಕಿಡಿಗೇಡಿಗಳು ಈ ಸಿನಿಮಾವನ್ನು ಮೊಬೈಲ್​ನಲ್ಲಿ ಚಿತ್ರಿಸಿ, ಆನ್​ಲೈನ್​ಗೆ ಅಪ್​ಲೋಡ್​ ಮಾಡುತ್ತಿದ್ದಾರೆ. ಇದು ಚಿತ್ರತಂಡದ ಗಮನಕ್ಕೂ ಬಂದಿದ್ದು, ಇಂಥ ಖಧೀಮರ ವಿರುದ್ಧ ಸಮರ ಸಾರಿದೆ. ಅಚ್ಚರಿ ಏನೆಂದರೆ, ಮೂರು ಸಾವಿರಕ್ಕೂ ಅಧಿಕ ಪೈರಸಿ ಲಿಂಕ್​ಗಳು ಪತ್ತೆ ಆಗಿವೆ!

ಪೈರಸಿ ಮಾಡುವವರಿಗೆ ಸೂಕ್ತ ಶಿಕ್ಷೆ ಕೊಡಿಸಲಾಗುವುದು ಅಂತ ಸಿನಿಮಾ ಬಿಡುಗಡೆಗಿಂತ ಮುನ್ನವೇ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಖಡಕ್​ ಎಚ್ಚರಿಕೆ ನೀಡಿದ್ದರು. ಈಗ ಅವರ ತಂಡ ಪೈರಸಿ ಲಿಂಕ್​ಗಳನ್ನು ಡಿಲಿಟ್​ ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಯಾವುದೇ ಕಾರಣಕ್ಕೂ ಇಂಟರ್​ನೆಟ್​ನಲ್ಲಿ ರಾಬರ್ಟ್​ ಸಿನಿಮಾದ ಪೈರಸಿ ಕಾಪಿ ಲಭ್ಯವಾಗಬಾರದು ಎಂದು ಹರಸಾಹಸ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಈ ಸಿನಿಮಾ ಪೈರಸಿ ಕಾಟ ಎದುರಿಸುತ್ತಿರುವುದು ಡಿ ಬಾಸ್​ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಅದೇನೇ ಇದ್ದರೂ ಕಲೆಕ್ಷನ್​ ವಿಚಾರದಲ್ಲಿ ‘ರಾಬರ್ಟ್​’ ಹಿಂದೆ ಬಿದ್ದಿಲ್ಲ. ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರು ಬಾಕ್ಸ್​ ಆಫೀಸ್​ ಸುಲ್ತಾನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮೊದಲ ದಿನವೇ 17 ಕೋಟಿ ರೂ. ಕಲೆಕ್ಷನ್​ ಆಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ 3.12 ಕೋಟಿ ರೂ. ಆದಾಯ ಬಂದಿದೆ. ಶುಕ್ರವಾರ ಕೂಡ ಅನೇಕ ಶೋಗಳು ಹೌಸ್​ಫುಲ್​ ಆಗಿವೆ. ವೀಕೆಂಡ್​ನಲ್ಲೂ ಭರ್ಜರಿ ಕಲೆಕ್ಷನ್​ ಆಗುವ ನಿರೀಕ್ಷೆ ಇದೆ. ಆದರೆ ಪೈರಸಿ ವಿರುದ್ಧ ಚಿತ್ರತಂಡ ಹಗಲು-ರಾತ್ರಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: Roberrt Telugu Collection: ತೆಲುಗು ನೆಲದಲ್ಲಿ ತೊಡೆತಟ್ಟಿದ ‘ರಾಬರ್ಟ್​’! ಆಂಧ್ರ-ತೆಲಂಗಾಣದಲ್ಲಿ ಎಷ್ಟು ಕೋಟಿ ಕಲೆಕ್ಷನ್​?

Roberrt 1st Day Collection: ‘ರಾಬರ್ಟ್​’ ಚಿತ್ರಕ್ಕೆ ಮೊದಲ ದಿನವೇ ಯಾವ ಯಾವ ಜಿಲ್ಲೆಗಳಿಂದ ಎಷ್ಟು ಕಲೆಕ್ಷನ್​? ಇಲ್ಲಿದೆ ರಿಪೋರ್ಟ್​

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us