‘ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ’: ‘ಕಾಟೇರ’ ಗೆಲ್ಲಿಸಿದ ಪ್ರೇಕ್ಷಕರಿಗೆ ದರ್ಶನ್​ ಧನ್ಯವಾದ

‘ಕಾಟೇರ’ ಸಿನಿಮಾದಲ್ಲಿ ದರ್ಶನ್​ ಅವರು ಎರಡು ಶೇಡ್​ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಯಸ್ಸಾದ ವ್ಯಕ್ತಿಯ ಗೆಟಪ್​ನಲ್ಲಿ ಅವರು ಎಂಟ್ರಿ ನೀಡುತ್ತಾರೆ. ಅದೇ ಫೋಟೋವನ್ನು ಹಂಚಿಕೊಂಡು ದರ್ಶನ್​ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಸಿನಿಮಾದಲ್ಲಿ ರೈತರ ಕಹಾನಿ ಇದೆ.

‘ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ’: ‘ಕಾಟೇರ’ ಗೆಲ್ಲಿಸಿದ ಪ್ರೇಕ್ಷಕರಿಗೆ ದರ್ಶನ್​ ಧನ್ಯವಾದ
ದರ್ಶನ್

Updated on: Dec 31, 2023 | 8:31 AM

ನಟ ದರ್ಶನ್​ ಅಭಿನಯದ ‘ಕಾಟೇರ’ ಸಿನಿಮಾ (Kaatera Movie) ಸೂಪರ್​ ಹಿಟ್​ ಆಗಿದೆ. ಈ ಸಿನಿಮಾಗೆ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ದರ್ಶನ್​ ನಟನೆಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ನಿರ್ದೇಶಕ ತರುಣ್​ ಸುಧೀರ್​ (Tharun Sudhir) ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಹೇಳಿದ ಸಂದೇಶವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿರುವ ‘ಕಾಟೇರ’ ಸಿನಿಮಾ ಭರ್ಜರಿ ಕಲೆಕ್ಷನ್​ ಮಾಡುತ್ತಿದೆ. ಈ ಗೆಲುವಿಗೆ ಕಾರಣರಾದ ಅಭಿಮಾನಿಗಳಿಗೆ ದರ್ಶನ್​ (Darshan) ಅವರು ಧನ್ಯವಾದ ಅರ್ಪಿಸಿದ್ದಾರೆ.

‘ಏನೆಂದು ನಾ ಹೇಳಲಿ.. ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯೆಲ್ಲಿ? ಧನ್ಯೋಸ್ಮಿ ಸೆಲೆಬ್ರಿಟಿಸ್.. ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆಯಿಂದ ನಮ್ಮ ಕಾಟೇರ ಚಿತ್ರತಂಡದ ಮನ ತುಂಬಿದೆ. ಮಾತುಗಳೇ ಬರುತ್ತಿಲ್ಲ’ ಎಂದು ದರ್ಶನ್​ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ‘ಕಾಟೇರ’ ಮೂಲಕ ಗೆದ್ದಿರುವ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

‘ಕಾಟೇರ’ ಸಿನಿಮಾದಲ್ಲಿ ದರ್ಶನ್​ ಅವರು ಎರಡು ಶೇಡ್​ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಯಸ್ಸಾದ ವ್ಯಕ್ತಿಯ ಗೆಟಪ್​ನಲ್ಲಿ ಅವರು ಎಂಟ್ರಿ ನೀಡುತ್ತಾರೆ. ಅದೇ ಫೋಟೋವನ್ನು ಹಂಚಿಕೊಂಡು ದರ್ಶನ್​ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಸಿನಿಮಾದಲ್ಲಿ ರೈತರ ಕಹಾನಿ ಇದೆ. ಮೇಲು-ಕೀಳು ಮಾಡಬಾರದು ಎಂಬ ಸಂದೇಶ ಇದೆ.

ಇದನ್ನೂ ಓದಿ: Kaatera Movie Review: ಸಂಘರ್ಷದ ಕಥೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡುವ ‘ಕಾಟೇರ’

ದರ್ಶನ್​ ಜೊತೆ ‘ಕಾಟೇರ’ ಸಿನಿಮಾದಲ್ಲಿ ಅನೇಕ ಕಲಾವಿದರು ನಟಿಸಿದ್ದಾರೆ. ಮಾಲಾಶ್ರೀ ಅವರ ಮಗಳು ಆರಾಧನಾ ನಾಯಕಿ ಆಗಿದ್ದಾರೆ. ಹಿರಿಯ ಕಲಾವಿದರಾದ ಶ್ರುತಿ, ವೈಜನಾಥ ಬೀರಾದಾರ, ಅವಿನಾಶ್​, ವಿನೋದ್​ ಆಳ್ವಾ, ಜಗಪತಿ ಬಾಬು, ಕುಮಾರ್​ ಗೋವಿಂದ್​ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ವೀಕೆಂಡ್​ನಲ್ಲಿ ‘ಕಾಟೇರ’ ಅಬ್ಬರಿಸುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us