ನಿರ್ದೇಶಕ ದಿನಕರ್ ತೂಗುದೀಪ ಅವರು ನಿರ್ದೇಶಕನಾಗಿ, ನಟನಾಗಿ, ನಿರ್ಮಾಪಕನಾಗಿ, ಬರಹಗಾರನಾಗಿ ಗುರುತಿಸಿಕೊಂಡಿದ್ದಾರೆ. ಇವರು ‘ನವಗ್ರಹ’ ಸಿನಿಮಾ ನಿರ್ದೇಶನ ಮಾಡಿ ಭರ್ಜರಿ ಯಶಸ್ಸು ಕಂಡರು. ಈ ಚಿತ್ರದಲ್ಲಿ ದರ್ಶನ್ ಅವರು ನೆಗೆಟಿವ್ ಪಾತ್ರ ಮಾಡಿದ್ದರು. ಆ ಬಳಿಕ ದರ್ಶನ್ ನಟನೆಯ ‘ಸಾರಥಿ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ಈ ಹಿಟ್ ಕಾಂಬಿನೇಷನ್ ಮತ್ತೊಮ್ಮೆ ಒಂದಾಗೋಕೆ ರೆಡಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
‘ರಾಯಲ್’ ಸಿನಿಮಾ ಹೆಸರಿನ ಚಿತ್ರವನ್ನು ದಿನಕರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿ ನಡೆದಿದೆ. ಈ ವೇಳೆ ಅವರಿಗೆ ದರ್ಶನ್ ಕುರಿತು ಪ್ರಶ್ನೆ ಎದುರಾಗಿದೆ. ದಿನಕರ್ ಹಾಗೂ ದರ್ಶನ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಮಾತಿದೆ. ಈ ಬಗ್ಗೆ ಮಾತನಾಡಿದ ಅವರು, ‘ಅಣ್ಣ ತಮ್ಮ ಬೇರೆ ಆಗಿದ್ದೀವಿ ಎಂದು ಯಾರು ಹೇಳಿದ್ದಾರೆ? ಗಂಡ ಹೆಂಡತಿ ಮಧ್ಯೆ ಹೇಗೆ ಜಗಳವೋ ಹಾಗೆ ಅಣ್ಣ ತಮ್ಮ ಎಂದಮೇಲೆ ಜಗಳ ಇದ್ದೇ ಇರುತ್ತದೆ’ ಎಂದಿದ್ದಾರೆ ಅವರು.
ಹಾಗಂತ ಇವರು ಯಾವಾಗಲೂ ಜಗಳ ಆಡುತ್ತಾನೇ ಇರೋದಿಲ್ಲ. ‘ನಾವು ಮಾತನಾಡುತ್ತಲೇ ಇರುತ್ತೇವೆ. ತಿಂಗಳಿಗೊಮ್ಮೆ ಆಗೊಮ್ಮೆ ಈಗೊಮ್ಮೆ ನಮ್ಮ ಮಧ್ಯೆ ಮಾತುಕತೆ ನಡೆಯುತ್ತಾ ಇರುತ್ತದೆ. ಅತ್ತಿಗೆ ವಿಜಯಲಕ್ಷ್ಮೀ ಜೊತೆ ಯಾವಾಗಲೂ ಕಾಂಟ್ಯಾಕ್ಟ್ನಲ್ಲಿದ್ದೇನೆ. ಈ ಸಿನಿಮಾಗೆ ದರ್ಶನ್ ಸಾಥ್ ಕೊಡಬಹುದು. ಸದ್ಯ ಅವರಿಗೆ ಬೆನ್ನು ನೋವಿದೆ. ಇದರ ಟ್ರೀಟ್ಮೆಂಟ್ಗಾಗಿ ಮೈಸೂರಿಗೆ ಹೋಗಿದ್ದೇವೆ. ಅಜಯ್ ಹೆಗಡೆ ಎರಡು ಬಾರಿ ಟ್ರೀಟ್ಮೆಂಟ್ ಮಾಡಿದ್ದಾರೆ. ಈ ಕಾರಣಕ್ಕೆ ಅಲ್ಲಿಯೇ ಟ್ರೀಟ್ಮೆಂಟ್ ನಡೆಯುತ್ತಿದೆ’ ಎಂದು ದಿನಕರ್ ಮಾಹಿತಿ ನೀಡಿದ್ದಾರೆ
‘ದರ್ಶನ್ಗೆ ನಾನು ಸಿನಿಮಾ ಮಾಡೋದು ಖಚಿತ. ನಿರ್ಮಾಪಕರ ಲಿಸ್ಟ್ ದರ್ಶನ್ ಕಡೆಗಿದೆ. ಅವರಿಗೆ ಸಿನಿಮಾ ಮಾಡಬೇಕು ಅಂದಾಗ ಕಥೆ ಕೇಳೋಲ್ಲ. ದರ್ಶನ್ ನನಗಿಂತ ಇಂಡಸ್ಟ್ರಿಯಲ್ಲಿ ಸೀನಿಯರ್’ ಎಂದು ಖುಷಿ ಹೊರಹಾಕಿದ್ದಾರೆ ದಿನಕರ್.
ಇದನ್ನೂ ಓದಿ: ನೋವಿನಲ್ಲೂ ಅಭಿಮಾನಿಗಳನ್ನು ನೋಡಿ ನಗುತ್ತಾ ಕೈ ಬೀಸಿದ ದರ್ಶನ್
ಸಂಕ್ರಾಂತಿ ಬಳಿಕ ದರ್ಶನ್ ನಟನೆಯ ‘ಡೆವಿಲ್’ ಶೂಟಿಂಗ್ ಆರಂಭ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ದರ್ಶನ್ ಇನ್ನೂ ಬೆನ್ನು ನೋವಿನಿಂದ ಬಳಲುತ್ತಿದ್ದು, ಶೂಟಿಂಗ್ ಮತ್ತೆ ವಿಳಂಬ ಆಗುತ್ತದೆಉಏ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:41 am, Sat, 28 December 24