exclusive ಚಿತ್ರ: ಕೊಲೆಗೆ ಮುನ್ನ ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್​ನಲ್ಲಿ ಮೌನವಾಗಿ ಕೂತ ದರ್ಶನ್

|

Updated on: Sep 05, 2024 | 10:26 AM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪ ಪಟ್ಟಿ ಸಲ್ಲಿಕೆ ಆಗಿದ್ದು, ಆರೋಪ ಪಟ್ಟಿಯ ಕೆಲವು ಮಹತ್ವದ ಮಾಹಿತಿಯ ಜೊತೆಗೆ ಕೆಲವು ಚಿತ್ರಗಳು ಸಹ ಇದೀಗ ಬಹಿರಂಗಗೊಂಡಿದೆ. ಕೊಲೆ ಮಾಡುವ ಮುನ್ನ ಪಾರ್ಟಿ ಮಾಡಿ ಮತ್ತೇರಿಸಿಕೊಂಡಿದ್ದ ಸ್ಟೋನಿ ಬ್ರೂಕ್​ಗೆ ದರ್ಶನ್ ಹಾಗೂ ಗ್ಯಾಂಗ್ ಅನ್ನು ಕರೆದುಕೊಂಡು ಬಂದು ಸ್ಥಳ ಮಹಜರು ಮಾಡಿರುವ ಚಿತ್ರ ಇದೀಗ ವೈರಲ್ ಆಗಿದೆ.

exclusive ಚಿತ್ರ: ಕೊಲೆಗೆ ಮುನ್ನ ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್​ನಲ್ಲಿ ಮೌನವಾಗಿ ಕೂತ ದರ್ಶನ್
Follow us on

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಬಹುಪಾಲು ಮುಗಿಸಿರುವ ಪೊಲೀಸರು ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯ ಕೆಲ ಪ್ರಮುಖ ಅಂಶಗಳು ಒಂದೊಂದಾಗಿ ಹೊರಗೆ ಬರುತ್ತಿವೆ. ಇದೀಗ ಪೊಲೀಸರು ರಿಟ್ರೈವ್ ಮಾಡಿರುವ ಕೆಲವು ಚಿತ್ರಗಳು ಹಾಗೂ ಕೆಲ ವಿಡಿಯೋಗಳು ಸಹ ಬಹಿರಂಗಗೊಳ್ಳುತ್ತಿವೆ. ಹತ್ಯೆಗೆ ಮುನ್ನ ರೇಣುಕಾ ಸ್ವಾಮಿ ಕೈಮುಗಿದು ಬೇಡಿಕೊಂಡಿದ್ದ ಚಿತ್ರ ಇದೀಗ ವೈರಲ್ ಆಗಿದೆ. ಅದರ ಬೆನ್ನಲ್ಲೆ ದರ್ಶನ್​ರ ಚಿತ್ರವೊಂದು ಸಹ ವೈರಲ್ ಆಗಿದೆ.

ಕೊಲೆ ನಡೆದು, ದರ್ಶನ್​ ಹಾಗೂ ಇತರೆ ಆರೋಪಿಗಳ ಬಂಧನ ಆದ ಬಳಿಕ, ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ಸ್ಥಳ ಮಹಜರು ಮಾಡುವಾಗಿನ ಚಿತ್ರವೊಂದು ಇದೀಗ ವೈರಲ್ ಆಗಿದೆ. ಚಿತ್ರದಲ್ಲಿ ನಟ ದರ್ಶನ್, ಆರೋಪಿಗಳಾದ ವಿನಯ್, ಪ್ರದೋಶ್ ಅವರುಗಳು ಸಹ ಇದ್ದಾರೆ. ವಿಶೇಷವೆಂದರೆ ಆರೋಪಿಗಳ ಜೊತೆಗೆ ನಟ ಚಿಕ್ಕಣ್ಣ ಸಹ ಚಿತ್ರದಲ್ಲಿದ್ದಾರೆ.

ಕೊಲೆ ಮಾಡುವ ಮುನ್ನ ಆರೋಪಿ ದರ್ಶನ್ ಸೇರಿ ಇನ್ನೂ ಕೆಲವರು ಬೆಂಗಳೂರಿನ ಸ್ಟೋನಿ ಬ್ರೂಕ್ ಹೋಟೆಲ್​ನಲ್ಲಿ ಬಿಂದಾಸ್ ಆಗಿ ಪಾರ್ಟಿ ಮಾಡಿದ್ದರು. ಆ ಪಾರ್ಟಿಯಲ್ಲಿ ದರ್ಶನ್, ವಿನಯ್, ಪ್ರದೋಶ್ ಹಾಗೂ ಚಿಕ್ಕಣ್ಣ ಇನ್ನಿತರರು ಭಾಗಿಯಾಗಿದ್ದರು. ದರ್ಶನ್ ಅನ್ನು ಬಂಧಿಸಿದ ಬಳಿಕ ಸ್ಟೋನಿ ಬ್ರೂಕ್​ಗೆ ಕರೆತಂದಿದ್ದ ಪೊಲೀಸರು ಅಲ್ಲಿ ಪಾರ್ಟಿ ನಡೆದ ಸ್ಥಳದಲ್ಲಿಯೇ ಅನುಕ್ರಮದಲ್ಲಿ ಆರೋಪಿಗಳನ್ನು ಕೂರಿಸಿ ಸ್ಥಳ ಮಹಜರು ಮಾಡಿದ್ದರು. ಸ್ಥಳ ಮಹಜರಿನ ಚಿತ್ರ ಇದೀಗ ಟಿವಿ9ಗೆ ದೊರೆತಿದೆ.

ಇದನ್ನೂ ಓದಿ:ದರ್ಶನ್​ ವಿಚಾರದಲ್ಲಿ ಪೊಲೀಸರು ನಡೆದುಕೊಂಡ ಬಗ್ಗೆ ಚೇತನ್​ ನೇರ ಅಭಿಪ್ರಾಯ

ಸ್ಟೋನಿ ಬ್ರೂಕ್​ನಲ್ಲಿ ದರ್ಶನ್ ಹಾಗೂ ಗೆಳೆಯರು ಪಾರ್ಟಿ ಮಾಡಿದ್ದ ಜಾಗದಲ್ಲಿಯೇ ಅವರನ್ನೆಲ್ಲ ಕೂರಿಸಿ ಪೊಲೀಸ್ ಸಿಬ್ಬಂದಿಯೊಬ್ಬರು ಅವರ ಮುಂದೆ ಕೂತು ಲ್ಯಾಪ್​ಟಾಪ್​ನಲ್ಲಿ ಎಲ್ಲ ಅಂಶಗಳನ್ನು ನೋಟ್ ಮಾಡಿಕೊಳ್ಳುತ್ತಿರುವ ದೃಶ್ಯ ಚಿತ್ರದಲ್ಲಿ ಸೆರೆಯಾಗಿದೆ. ದರ್ಶನ್ ಸಪ್ಪಗೆ ಮುಖ ಮಾಡಿ ಕೂತಿರುವುದು ಚಿತ್ರದಲ್ಲಿ ಕಾಣುತ್ತಿದೆ. ಮಾತ್ರವಲ್ಲದೆ ಚಿತ್ರದಲ್ಲಿ ನಟ ಚಿಕ್ಕಣ್ಣ ಸಹ ದರ್ಶನ್​ರ ಪಕ್ಕ ಕೂತಿದ್ದಾರೆ. ಚಿಕ್ಕಣ್ಣ ಸಹ ತೀವ್ರ ಆತಂಕದಲ್ಲಿರುವುದು ತಿಳಿಯುತ್ತಿದೆ. ಸ್ಟೋನಿ ಬ್ರೂಕ್ ಮಾಲೀಕ ವಿನಯ್ ಸಹ ಚಿತ್ರದಲ್ಲಿದ್ದು ಆ ವ್ಯಕ್ತಿ ಸಹ ಆತಂಕದಲ್ಲಿದ್ದಾನೆ. ಇತರೆ ಕೆಲವು ಪೊಲೀಸ್ ಸಿಬ್ಬಂದಿ ಸಹ ಚಿತ್ರದಲ್ಲಿದ್ದಾರೆ.

ಸ್ಟೋನಿ ಬ್ರೂಕ್​ನಲ್ಲಿ A2 ದರ್ಶನ್, A3 ಪವನ್, A10 ವಿನಯ್, A11 ನಾಗರಾಜ್​, A14 ಪ್ರದೋಷ್ ಅವರುಗಳನ್ನು ಸ್ಟೋನಿ ಬ್ರೂಕ್​ಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು. ನಟ ಚಿಕ್ಕಣ್ಣ ಸಹ ಕೊಲೆ ನಡೆದ ದಿನ ಪಾರ್ಟಿಯಲ್ಲಿದ್ದ ಕಾರಣ ಅವರನ್ನೂ ಸಹ ಮಹಜರಿಗೆ ಕರೆಸಲಾಗಿತ್ತು. ಆದರೆ ಪ್ರಕರಣದಲ್ಲಿ ಚಿಕ್ಕಣ್ಣ ಹೇಳಿಕೆಯನ್ನಷ್ಟೆ ದಾಖಲಿಸಿದ್ದು, ಕೊಲೆ ಪ್ರಕರಣದಲ್ಲಿ ಅವರನ್ನು ಆರೋಪಿ ಮಾಡಲಾಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ