Darshan: ದರ್ಶನ್-ವಿಜಯಲಕ್ಷ್ಮಿ ವಿವಾಹ ಆಮಂತ್ರಣ ಪತ್ರ ಹೇಗಿತ್ತು ನೋಡಿ..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಆಮಂತ್ರಣದ ಫೋಟೋ ವೈರಲ್ ಆಗಿದೆ. 19-05-2003ನೇ ರಂದು ಇವರ ಮದುವೆ ಧರ್ಮಸ್ಥಳದ ವಸಂತ್​ ಮಹಲ್​ನಲ್ಲಿ ನಡೆದಿತ್ತು. ವಿಜಯಲಕ್ಷ್ಮಿ ಕೆಮಿಕಲ್​ ಇಂಜಿನಿಯರ್ ಓದಿದ್ದಾರೆ​. ದರ್ಶನ್​-ವಿಜಯಲಕ್ಷ್ಮಿ ಪುತ್ರನ ಹೆಸರು ವಿನೀಶ್​.

Darshan: ದರ್ಶನ್-ವಿಜಯಲಕ್ಷ್ಮಿ ವಿವಾಹ ಆಮಂತ್ರಣ ಪತ್ರ ಹೇಗಿತ್ತು ನೋಡಿ..
ದರ್ಶನ್-ವಿಜಯಲಕ್ಷ್ಮಿ
Follow us
ರಾಜೇಶ್ ದುಗ್ಗುಮನೆ
|

Updated on: Feb 16, 2024 | 7:46 AM

ನಟ ದರ್ಶನ್ (Darshan Thoogudeepa) ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನದ ಸಂಭ್ರಮ. ಫೆಬ್ರವರಿ 15ರ ಮಧ್ಯರಾತ್ರಿ ಅವರ ಮನೆಯ ಎದುರು ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ಅವರ ಫ್ಯಾನ್ಸ್ ಆಗಮಿಸಿ ದರ್ಶನ್​ಗೆ ಶುಭಾಶಯ ಕೋರಿದ್ದಾರೆ. ಅಭಿಮಾನಿಗಳ ಜೊತೆ ಸಂಭ್ರಮದಿಂದ ಬರ್ತ್​ಡೇ ಆಚರಣೆ ಮಾಡಿಕೊಂಡಿದ್ದಾರೆ ದರ್ಶನ್. ಅವರ ಬರ್ತ್​ಡೇ ಸಂದರ್ಭದಲ್ಲಿ ದರ್ಶನ್ ಅವರ ಮದುವೆ ಆಮಂತ್ರಣ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅವರ ಆಮಂತ್ರಣ ಪತ್ರ ಹೇಗಿತ್ತು ಎಂಬುದರ ಝಲಕ್ ಇಲ್ಲಿದೆ.

2003ರಲ್ಲಿ ಧರ್ಮಸ್ಥಳದಲ್ಲಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಮದುವೆ ಆದರು. ವಿಜಯಲಕ್ಷ್ಮಿ ಕೆಮಿಕಲ್​ ಇಂಜಿನಿಯರ್ ಓದಿದ್ದಾರೆ​. ದರ್ಶನ್​-ವಿಜಯಲಕ್ಷ್ಮಿ ಪುತ್ರನ ಹೆಸರು ವಿನೀಶ್​. ದರ್ಶನ್​-ವಿಜಯಲಕ್ಷ್ಮಿ ದಾಂಪತ್ಯಕ್ಕೆ 20 ವರ್ಷಗಳು ಕಳೆದಿವೆ. ಈ ಪಯಣದಲ್ಲಿ ಈ ದಂಪತಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ.

ವಿವಾಹ ಆಮಂತ್ರಣ ಪತ್ರದಲ್ಲೇನಿದೆ?

19-05-2003ನೇ ಸೋಮವಾರ ಬೆಳಿಗ್ಗೆ 9:10ರಿಂದ 9:50ರವರೆಗಿನ ಮಿಥುನ ಲಗ್ನದಲ್ಲಿ ನಾವು ವಿವಾಹವಾಗುತ್ತಿದ್ದೇವೆ. ಧರ್ಮಸ್ಥಳದ ವಸಂತ್​ ಮಹಲ್​ನಲ್ಲಿ ಮದುವೆ ನಡೆಯಲಿದೆ. ಎಲ್ಲರೂ ಮದುವೆಗೆ ಆಗಮಿಸಬೇಕು ಎಂದು ಆಮಂತ್ರಣ ಕೋರುತ್ತಿದ್ದೇನೆ ಎಂಬುದಾಗಿ ಆಮಂತ್ರಣ ಪತ್ರದಲ್ಲಿ ಇದೆ.

ಇದನ್ನೂ ಓದಿ: ದರ್ಶನ್​ಗೆ ಹಸು ಸಾಕುವ ಹವ್ಯಾಸ ಬಂದಿದ್ದು ಹೇಗೆ? ಎಲ್ಲವನ್ನೂ ಹೇಳಿಕೊಂಡಿದ್ದ ಚಾಲೆಂಜಿಂಗ್ ಸ್ಟಾರ್

ಗಮನ ಸೆಳೆದ ‘ಡೆವಿಲ್’ ಲುಕ್

ದರ್ಶನ್ ಅವರ ‘ಡೆವಿಲ್’ ಲುಕ್ ಸಾಕಷ್ಟು ಗಮನ ಸೆಳೆದಿದೆ. ದರ್ಶನ್ ಅವರ ಹೊಸ ಅವತಾರ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಕ್ಲೀನ್ ಶೇವ್​ನಲ್ಲಿ ಅವರು ಪ್ರೇಕ್ಷಕರ ಎದುರು ಬಂದಿದ್ದಾರೆ. ಈ ಸಿನಿಮಾದ ಮೊದಲ ಗ್ಲಿಂಪ್ಸ್ ನೋಡಿದ ಎಲ್ಲರಿಗೂ ಸಿನಿಮಾ ಸೂಪರ್ ಹಿಟ್ ಆಗುವ ಮುನ್ಸೂಚನೆ ಸಿಕ್ಕಿದೆ. ಈ ಚಿತ್ರದ ಟೀಸರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಮಧ್ಯರಾತ್ರಿ ಈ ಟೀಸರ್ ರಿಲೀಸ್ ಆಗಿದೆ.

‘ಕಾಟೇರ’ ಯಶಸ್ಸು

ಕಳೆದ ವರ್ಷ ಡಿಸೆಂಬರ್ ಅಂತ್ಯಕ್ಕೆ ರಿಲೀಸ್ ಆದ ‘ಕಾಟೇರ’ ದೊಡ್ಡ ಗೆಲುವು ಕಂಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿ ಭರ್ಜರಿ ವೀಕ್ಷಣೆ ಕಾಣುತ್ತಿದೆ. ಈ ಸಿನಿಮಾದ ಯಶಸ್ಸು ದರ್ಶನ್​ ಬರ್ತ್​ಡೇ ಖುಷಿಯನ್ನು ಹೆಚ್ಚಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ