ಜೈಲಿನಲ್ಲಿ ದರ್ಶನ್ಗೆ ಸಿಕ್ತು ಟಿವಿ ಆದರೆ ಬೇಕಾಗಿದ್ದು ಸಿಗಲಿಲ್ಲ
Darshan Thoogudeepa: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್, ಜೈಲಿನಲ್ಲಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಇದೀಗ ಅವರಿರುವ ಬ್ಯಾರಕ್ಗೆ ಟಿವಿ ಒಂದನ್ನು ಜೈಲು ಸಿಬ್ಬಂದಿ ಅಳವಡಿಸಿದ್ದಾರೆ. ದರ್ಶನ್ ಟಿವಿಗಾಗಿ ಮನವಿ ಮಾಡಿ ಪಡೆದುಕೊಂಡಿದ್ದಾರೆ. ಟಿವಿ ಬಂದಿದೆಯಾದರೂ ದರ್ಶನ್ ಬಯಸಿದ್ದು ಅವರಿಗೆ ಸಿಕ್ಕಿಲ್ಲ.

ನಟ ದರ್ಶನ್ (Darshan), ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್, ನ್ಯಾಯಾಲಯಕ್ಕೆ ತಿಳಿಸಿರುವಂತೆ ಅವರು ಜೈಲಿನಲ್ಲಿ ಸಾಕಷ್ಟು ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದರಂತೆ. ಈ ಹಿಂದೆ ಹಾಸಿಗು, ದಿಂಬು, ಬಾಚಣಿಗೆ, ಕನ್ನಡಿ ಇನ್ನೂ ಕೆಲವು ವಸ್ತುಗಳನ್ನು ಕೊಡಿಸುವಂತೆ, ಬ್ಯಾರಕ್ ಬದಲಾಯಿಸುವಂತೆ, ವಾಕಿಂಗ್ಗೆ ಅವಕಾಶ ಕೊಡಿಸುವಂತೆ ಮನವಿ ಮಾಡಿದ್ದರು. ಜೈಲಿನಲ್ಲಿ ವ್ಯವಸ್ಥೆಗಳು ಸರಿಯಿಲ್ಲವೆಂದು ದೂರು ಸಹ ನೀಡಿದ್ದರು. ಈ ಬಗ್ಗೆ ಹಲವು ದಿನಗಳ ವಿಚಾರಣೆ ನಡೆದ ಬಳಿಕ ದರ್ಶನ್ಗೆ ಕೆಲವು ಸವಲತ್ತುಗಳು ಸಿಕ್ಕಿವೆ. ಇದೀಗ ದರ್ಶನ್ ಬ್ಯಾರಕ್ಗೆ ಟಿವಿ ಸಹ ಅಳವಡಿಸಲಾಗಿದೆ.
ದರ್ಶನ್ ಅವರು ಟಿವಿ ನೀಡುವಂತೆ ಕೇಳಿದ್ದರು, ಅದರಂತೆ ಈಗ ದರ್ಶನ್ ಇರುವ ಬ್ಯಾರಕ್ಗೆ ಟಿವಿ ನೀಡಲಾಗಿದೆ. ದರ್ಶನ್ ಬೇಡಿಕೆಯಂತೆ ಟಿವಿ ಬಂದಿದೆಯಾದರೂ ದರ್ಶನ್ ಅವರಿಗೆ ಬೇಕಾದ್ದು ಸಿಕ್ಕಿಲ್ಲ. ದರ್ಶನ್ಗೆ ನೀಡಲಾಗಿರುವ ಟಿವಿಯಲ್ಲಿ ಕೇವಲ ಮನೊರಂಜನಾ ಚಾನೆಲ್ಗಳು ಮಾತ್ರ ಪ್ರಸಾರ ಆಗುವಂತೆ ಜೈಲು ಸಿಬ್ಬಂದಿ ಬದಲಾವಣೆ ಮಾಡಿದ್ದಾರೆ. ದರ್ಶನ್ಗೆ ನೀಡಲಾಗಿರುವ ಟಿವಿಯಲ್ಲಿ ಯಾವುದೇ ನ್ಯೂಸ್ ಚಾನೆಲ್ ಬರುತ್ತಿಲ್ಲ. ಇದರಿಂದಾಗಿ ಹೊರಗೆ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ದರ್ಶನ್ಗೆ ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ:The Devil Movie Review: ‘ದಿ ಡೆವಿಲ್’ ರಾಜಕೀಯ ಸಮರದಲ್ಲಿ ದರ್ಶನ್ ವರ್ಸಸ್ ದರ್ಶನ್
‘ಡೆವಿಲ್’ ಸಿನಿಮಾ ಬಿಡುಗಡೆ ಅಪ್ಡೇಟ್ಸ್ ಸೇರಿದಂತೆ ಇತರೆ ವಿಷಯಗಳು ಸಹ ದರ್ಶನ್ ಅವರನ್ನು ಸದ್ಯಕ್ಕೆ ತಲುಪುತ್ತಿಲ್ಲ. ಇದು ಸಹಜವಾಗಿಯೇ ದರ್ಶನ್ಗೆ ಬೇಸರ ತಂದಿರಲಿಕ್ಕೆ ಸಾಧ್ಯವಿದೆ. ದರ್ಶನ್ ಪ್ರಸ್ತುತ ಕೇವಲ ಮನೊರಂಜನಾ ಚಾನೆಲ್ಗಳನ್ನು ಮಾತ್ರವೇ ನೋಡಬೇಕಿದೆ. ಹಾಡುಗಳು, ಸಿನಿಮಾ, ಧಾರಾವಾಹಿ ಇನ್ನಿತರೆಗಳನ್ನು ಮಾತ್ರವೇ ನೋಡಬೇಕಿದೆ. ‘ಡೆವಿಲ್’ ಸಿನಿಮಾದ ರಿಲೀಸ್ ಮತ್ತು ಸಿನಿಮಾಕ್ಕೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ನೋಡುವ ತವಕ ದರ್ಶನ್ಗೆ ಇದ್ದಂತಿತ್ತು, ಆದರೆ ಜೈಲು ಸಿಬ್ಬಂದಿಯ ಕಠಿಣ ನಿಯಮದಿಂದಾಗಿ ಅದು ತಪ್ಪಿದೆ.
ದರ್ಶನ್ ಅವರು ತಮಗೆ ಜೈಲಿನಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಈ ಹಿಂದೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಒಂದು ಹಂತದಲ್ಲಂತೂ ನನಗೆ ಇಲ್ಲಿ ಇರಲು ಆಗುತ್ತಿಲ್ಲ ‘ನನಗೆ ವಿಷ ಕೊಟ್ಟುಬಿಡಿ’ ಎಂದು ಸಹ ನ್ಯಾಯಾಧೀಶರ ಬಳಿ ಕೇಳಿ ಕೊಂಡಿದ್ದರು. ದರ್ಶನ್ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಜೈಲಿಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತಂಡವೊಂದನ್ನು ಕಳಿಸಿ ವೀಕ್ಷಣೆ ನಡೆಸಿ ವರದಿ ತರಿಸಿಕೊಂಡಿತ್ತು. ಬಳಿಕ ದರ್ಶನ್ ಮನವಿ ಮಾಡಿದ್ದ ಸೌಲಭ್ಯಗಳಲ್ಲಿ ಕೆಲವನ್ನು ಕೊಡಿಸಲಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




