AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿಗೆ ಪೂರ್ಣಗೊಳ್ಳಲಿದೆ ದರ್ಶನ್ ನ್ಯಾಯಾಂಗ ಬಂಧನದ ಅವಧಿ; ಆರೋಪಿಗಳಿಗೆ ಪ್ರಮುಖ ದಿನ

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಅವರು ಹಾಯಾಗಿ ಇದ್ದರು. ಈ ಕಾರಣಕ್ಕೆ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ. ದರ್ಶನ್ ಅವರನ್ನು ಹೈ ಸೆಕ್ಯೂರಿಟಿ ಸೆಲ್​ನಲ್ಲಿ ಇಡಲಾಗಿದೆ. ದರ್ಶನ್ ಅವರನ್ನು ಸಾಮಾನ್ಯ ಕೈದಿಯಂತೆ ಟ್ರೀಟ್ ಮಾಡಲಾಗುತ್ತಿದೆ. ಇಂದಿಗೆ ದರ್ಶನ್ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ.

ಇಂದಿಗೆ ಪೂರ್ಣಗೊಳ್ಳಲಿದೆ ದರ್ಶನ್ ನ್ಯಾಯಾಂಗ ಬಂಧನದ ಅವಧಿ; ಆರೋಪಿಗಳಿಗೆ ಪ್ರಮುಖ ದಿನ
ದರ್ಶನ್
Shivaprasad B
| Edited By: |

Updated on:Sep 09, 2024 | 7:02 AM

Share

ನಟ ದರ್ಶನ್ ಹಾಗೂ ಗ್ಯಾಂಗ್ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿ ಇದ್ದಾರೆ. ಈ ಪ್ರಕರಣ ನಡೆದು ಮೂರು ತಿಂಗಳು ಕಳೆಯುತ್ತಾ ಬಂದಿವೆ. ಇಂದಿಗೆ (ಸೆಪ್ಟೆಂಬರ್ 9) ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ. ಕೋರ್ಟ್​ನಲ್ಲಿ ಇದರ ವಿಚಾರಣೆ ಇಂದು ನಡೆಯಲಿದೆ. ಕೆಲವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ದರ್ಶನ್ ಇನ್ನೂ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಹೀಗಾಗಿ, ಎಲ್ಲರ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಇಂದು ಬೆಂಗಳೂರಿನ 24ನೇ ACMM ಕೋರ್ಟ್​ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಲೆ ಆರೋಪಿಗಳ ವಿಚಾರಣೆ ನಡೆಯಲಿದೆ. ಆರೋಪಿಗಳ ಪರ ವಕೀಲರಿಗೆ ಚಾರ್ಜ್​ಶೀಟ್​ ಪ್ರತಿ ಸಲ್ಲಿಕೆ ಆಗಲಿದೆ. ದೋಷಾರೋಪ ಪಟ್ಟಿ ಸಿಕ್ಕರೆ ಅನೇಕ ವಿಚಾರಗಳು ರಿವೀಲ್ ಆಗಲಿವೆ. ದರ್ಶನ್ ವಿರುದ್ಧ ಇರುವ ಆರೋಪಗಳು ಈಗಾಗಲೇ ಸಂಚಲನ ಸೃಷ್ಟಿ ಮಾಡಿವೆ. ಅದರ ಜೊತೆ ಮತ್ತೊಂದಿಷ್ಟು ವಿಚಾರಗಳು ಹೊರ ಬರುತ್ತವೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಜೂನ್ 8ರಂದು ರೇಣುಕಾ ಸ್ವಾಮಿ ಹತ್ಯೆ ನಡೆಯಿತು. ಆ ಬಳಿಕ ಶವವನ್ನು ರಾಜ ಕಾಲುವೆಗೆ ಎಸೆಯಲಾಯಿತು. ದರ್ಶನ್ ಅವರು ಜೂನ್ 9ರಂದು ಮನೆಯಲ್ಲಿ ನಡೆದ ಪೂಜೆಯಲ್ಲಿ ಭಾಗವಹಿಸಿ, ನಂತರ ಮೈಸೂರಿಗೆ ತೆರಳಿದ್ದರು. ಜೂನ್ 10ರಂದು ‘ಡೆವಿಲ್’ ಸಿನಿಮಾ ಶೂಟ್​ನಲ್ಲಿ ಭಾಗವಹಿಸಿದ್ದರು. ಜೂನ್ 11ರಂದು ದರ್ಶನ್ ಅರೆಸ್ಟ್ ಆದರು. ಈಗ ಸುಮಾರು ಮೂರು ತಿಂಗಳಿಂದ ದರ್ಶನ್ ಜೈಲಿನಲ್ಲಿ ಇದ್ದಾರೆ. ಜೈಲಿನ ಜೀವನ ಅವರಿಗೆ ಕಷ್ಟಕರವಾಗುತ್ತಿದೆ.

ಇದನ್ನೂ ಓದಿ: ನಟ ದರ್ಶನ್​ಗೆ ನಿತ್ಯ ತಣ್ಣೀರು ಸ್ನಾನ; ದಾಸನಿಗೆ ಅರಿವಾಗುತ್ತಿದೆ ಜೈಲಿನ ವಾಸ್ತವತೆ

ಆರಂಭದಲ್ಲಿ ದರ್ಶನ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಯಿತು. ಆ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಆರಂಭದಲ್ಲಿ ದರ್ಶನ್ ಬೆಂಗಳೂರು ಜೈಲಿನಲ್ಲಿ ಹಾಯಾಗಿಯೇ ಇದ್ದರು. ಆದರೆ, ಈಗ ಹಾಗಿಲ್ಲ. ಪರಿಸ್ಥಿತಿ ಬದಲಾಗಿದೆ. ಅವರು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಬಳ್ಳಾರಿ ಜೈಲು ಅವರಿಗೆ ಒಗ್ಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:57 am, Mon, 9 September 24