ಮನೆ ಊಟದ ವಿಚಾರ; ಮ್ಯಾಜಿಸ್ಟ್ರೇಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್​ಗೆ ದರ್ಶನ್ ಮೇಲ್ಮನವಿ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅವರಿಗೆ ಮನೆಯಿಂದ ಆಹಾರ, ಹಾಸಿಗೆ, ಪುಸ್ತಕಗಳನ್ನು ತರಿಸಿಕೊಳ್ಳಲು ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿ ಅದನ್ನು ಹಿಂಪಡೆದಿದ್ದರು. ಈಗ ದರ್ಶನ್ ಪರ ವಕೀಲರು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದಾರೆ.

ಮನೆ ಊಟದ ವಿಚಾರ; ಮ್ಯಾಜಿಸ್ಟ್ರೇಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್​ಗೆ ದರ್ಶನ್ ಮೇಲ್ಮನವಿ
ದರ್ಶನ್
Follow us
Ramesha M
| Updated By: ರಾಜೇಶ್ ದುಗ್ಗುಮನೆ

Updated on: Jul 30, 2024 | 2:07 PM

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಸೇರಿ ಅನೇಕರು ಅರೆಸ್ಟ್ ಆಗಿದ್ದಾರೆ. ಅವರಿಗೆ ಜೈಲಿನ ಊಟ ದೇಹಕ್ಕೆ ಒಗ್ಗುತ್ತಿಲ್ಲ. ಭೇದಿ, ಅತಿಸಾರ ಮತ್ತಿತ್ಯಾದಿ ಸಮಸ್ಯೆ ಉಂಟಾಗುತ್ತಿದೆ, ಜೊತೆಗೆ ದೇಹದ ತೂಕ ಇಳಿಕೆ ಆಗುತ್ತಿದೆ ಎಂದು ಅವರ ಪರ ವಕೀಲರು ಹೇಳಿದ್ದರು. ಹೀಗಾಗಿ ಅವರು ಮನೆ ಊಟ, ಬಟ್ಟೆಗಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಅರ್ಜಿಯನ್ನು ರಿಜೆಕ್ಟ್ ಮಾಡಿತ್ತು. ಈಗ ಮನೆ ಊಟ, ಬಟ್ಟೆ, ಹಾಸಿಗೆಗಾಗಿ ಮತ್ತೆ ಹೈಕೋರ್ಟ್​ಗೆ ನಟ ದರ್ಶನ್ ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ.

ಹೈಕೋರ್ಟ್​ನಲ್ಲಿ ಅರ್ಜಿ

ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಮೊದಲು ಮನೆಯಿಂದ ಊಟ, ಬಟ್ಟೆ, ಹಾಸಿಗೆ ಪಡೆಯಲು ಅನುಮತಿ ನಿರಾಕರಿಸಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರಶ್ನಿಸಿ ನಟ ದರ್ಶನ್ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೈಕೋರ್ಟ್ ಎದುರು ದರ್ಶನ್ ಅವರ ಪರ ವಕೀಲರು ಯಾವ ರೀತಿಯ ವಾದ ಮಂಡಿಸುತ್ತಾರೆ ಎಂಬುದನ್ನು ನೋಡಬೇಕಿದೆ.

ಅರ್ಜಿ ಹಿಂಪಡೆದಿದ್ದರು..

ದರ್ಶನ್​ಗೆ ಮನೆ ಊಟ ಹಾಗೂ ಹಾಸಿಗೆ ನೀಡಬೇಕು ಎಂದು ದರ್ಶನ್ ಪರ ವಕೀಲರು ಈ ಮೊದಲು ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಈ ಅರ್ಜಿಯನ್ನು ತಾಂತ್ರಿಕ ಕಾರಣ ನೀಡಿ ದರ್ಶನ್ ಪರ ವಕೀಲರು ಹಿಂಪಡೆದಿದ್ದರು. ಪ್ರಕರಣದ ಕುರಿತಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ಆದೇಶ ಪ್ರಶ್ನಿಸಬೇಕಿದೆ. ಈ ಹಿನ್ನೆಲೆಯಲ್ಲಿ ಹಳೆಯ ಅರ್ಜಿಯನ್ನು ವಾಪಸ್ ಪಡೆದು ಕೊಳ್ಳಲಾಗಿತ್ತು. ಈಗ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ: ‘ತುಂಬಾ ಹಿಂದಿನಿಂದಲೂ ಥಿಯೇಟರ್​ಗೆ ಜನ ಬರ್ತಿಲ್ಲ; ದರ್ಶನ್ ಫ್ಯಾನ್ಸ್​ ಸಿನಿಮಾ ನೋಡಲ್ಲ ಎಂಬ ಹೇಳಿಕೆ ಬಗ್ಗೆ ರಾಜ್ ಬಿ ಶೆಟ್ಟಿ ಮಾತು

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಸೇರಿ ಅನೇಕರು ಬಂಧನಕ್ಕೆ ಒಳಗಾಗಿದ್ದಾರೆ. ಶೀಘ್ರವೇ ದರ್ಶನ್ ಅವರ ನ್ಯಾಯಾಂಗ ಬಂಧನ ಪೂರ್ಣಗೊಳ್ಳಲಿದೆ. ಅವರನ್ನು ಮತ್ತೆ ಪೊಲೀಸರು ಕೋರ್ಟ್ ಎದುರು ಹಾಜರುಪಡಿಸಲಿದ್ದಾರೆ. ಈಗಾಗಲೇ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಕೆ ಆಗದ ಕಾರಣ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!
ರಾಜ್ಯಾಧ್ಯಕ್ಷ ರೇಸ್​ನಲ್ಲಿ ಸೋಮಣ್ಣ ಇದ್ದಾರಾ? ಸಿದ್ದೇಶ್ವರ್ ಏನಂದ್ರು ನೋಡಿ
ರಾಜ್ಯಾಧ್ಯಕ್ಷ ರೇಸ್​ನಲ್ಲಿ ಸೋಮಣ್ಣ ಇದ್ದಾರಾ? ಸಿದ್ದೇಶ್ವರ್ ಏನಂದ್ರು ನೋಡಿ
ಗುಡ್ಡದ ತುತ್ತ ತುದಿಯಲ್ಲಿ ಕಾಡ್ಗಿಚ್ಚು: ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಗುಡ್ಡದ ತುತ್ತ ತುದಿಯಲ್ಲಿ ಕಾಡ್ಗಿಚ್ಚು: ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಜಮ್ಮು-ಕಾಶ್ಮೀರದ ಸೋನಾಮಾರ್ಗ್​ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ
ಜಮ್ಮು-ಕಾಶ್ಮೀರದ ಸೋನಾಮಾರ್ಗ್​ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ
Weekly Horoscope: ಫೆಬ್ರವರಿ 10 ರಿಂದ 16ರವರೆಗಿನ ವಾರ ಭವಿಷ್ಯ
Weekly Horoscope: ಫೆಬ್ರವರಿ 10 ರಿಂದ 16ರವರೆಗಿನ ವಾರ ಭವಿಷ್ಯ
Daily Devotional: ಗುರು ನೇರ ಸಂಚಾರ ಈ ರಾಶಿಯವರಿಗೆ ಅದೃಷ್ಟ
Daily Devotional: ಗುರು ನೇರ ಸಂಚಾರ ಈ ರಾಶಿಯವರಿಗೆ ಅದೃಷ್ಟ
Daily Horoscope: ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಕಲಹ ಸಾಧ್ಯತೆ
Daily Horoscope: ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಕಲಹ ಸಾಧ್ಯತೆ
ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಕಿಚ್ಚ ಸುದೀಪ್ ನಾಯಕತ್ವದ ಪಡೆ ಹೇಗಿದೆ ನೋಡಿ
ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಕಿಚ್ಚ ಸುದೀಪ್ ನಾಯಕತ್ವದ ಪಡೆ ಹೇಗಿದೆ ನೋಡಿ
ಟಿವಿ9 ಜೊತೆ ಕನ್ನಡದಲ್ಲೇ ಮಾತು ಆರಂಭಿಸಿದ ಚಾಹಲ್; ವಿಡಿಯೋ ನೋಡಿ
ಟಿವಿ9 ಜೊತೆ ಕನ್ನಡದಲ್ಲೇ ಮಾತು ಆರಂಭಿಸಿದ ಚಾಹಲ್; ವಿಡಿಯೋ ನೋಡಿ
ಗೆಳತಿ ರಕ್ಷಿತಾಗೆ ಕೊಟ್ಟ ಮಾತಿನಂತೆ ರಾಣಾ ಆರತಕ್ಷತೆಗೆ ಆಗಮಿಸಿದ ನಟ ದರ್ಶನ್
ಗೆಳತಿ ರಕ್ಷಿತಾಗೆ ಕೊಟ್ಟ ಮಾತಿನಂತೆ ರಾಣಾ ಆರತಕ್ಷತೆಗೆ ಆಗಮಿಸಿದ ನಟ ದರ್ಶನ್