ದರ್ಶನ್ ತೂಗುದೀಪ: ವಿಚಾರಣೆ ವೇಳೆ ದಾಸ ಬಾಯ್ಬಿಟ್ಟ ವಿಚಾರಗಳೇನು?

Darshan Thoogudeepa: ರೇಣುಕಾ ಸ್ವಾಮಿ ಕೊಲೆ ಕೇಸ್​ಗೆ ಸಂಬಂಧಿಸಿ ದರ್ಶನ್ ಅವರು ಜೂನ್ 11ರಂದು ಬಂಧನಕ್ಕೆ ಒಳಗಾದರು. ಸೆಪ್ಟೆಂಬರ್ 11ಕ್ಕೆ ದರ್ಶನ್ ಬಂಧನಕ್ಕೆ ಒಳಗಾಗಿ ಮೂರು ತಿಂಗಳು ಕಳೆಯಲಿದೆ. ಈಗ ಅವರು ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಪ್ರಕರಣದ ವಿಚಾರಣೆ ನಡೆದಿದೆ.

ದರ್ಶನ್ ತೂಗುದೀಪ: ವಿಚಾರಣೆ ವೇಳೆ ದಾಸ ಬಾಯ್ಬಿಟ್ಟ ವಿಚಾರಗಳೇನು?
Darshan
Edited By:

Updated on: Aug 29, 2024 | 9:58 AM

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಅವರನ್ನು ಆರಂಭದಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿತ್ತು. ಆದರೆ, ಅವರು ಅಲ್ಲಿ ಸಿಗರೇಟ್ ಸೇದುತ್ತಾ ಸಮಯ ಕಳೆಯುತ್ತಿರುವ ಫೋಟೋ ವೈರಲ್ ಆಗಿತ್ತು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಇದರಿಂದ ಎಚ್ಚೆತ್ತ ಸರ್ಕಾರ ಈ ಪ್ರಕರಣದಲ್ಲಿ ತನಿಖೆಗೆ ಆದೇಶಿಸಿದೆ. ಈಗಾಗಲೇ ಮೂರು ಎಫ್​ಐಆರ್​ ದಾಖಲು ಮಾಡಲಾಗಿದ್ದು, ಎರಡು ಪ್ರಕರಣಗಳಲ್ಲಿ ದರ್ಶನ್ ಅವರನ್ನು ಎ1 ಆರೋಪಿ ಮಾಡಲಾಗಿದೆ. ದರ್ಶನ್ ಅವರನ್ನು ಈ ಪ್ರಕರಣದಲ್ಲಿ ವಿಚಾರಣೆ ಕೂಡ ಮಾಡಲಾಗಿದೆ.

ದರ್ಶನ್ ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ಅವರ ವಿಚಾರಣೆಗೆ ಕೋರ್ಟ್​ನಿಂದ ಪೊಲೀಸರು ವಿಶೇಷ ಅನುಮತಿ ಪಡೆದಿದ್ದರು. ವಿಚಾರಣೆ ವೇಳೆ ಹಲವು ವಿಚಾರಗಳನ್ನು ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ರಚಿತಾ ರಾಮ್ ಅವರನ್ನು ದರ್ಶನ್ ಭೇಟಿ ಮಾಡಿದ್ದರು. ಈ ವೇಳೆ ನಡೆದ ಘಟನೆ ಇದು ಎನ್ನಲಾಗಿದೆ.

‘ನಾನು ರಚಿತಾ ರಾಮ್ ಅವರನ್ನು ಭೇಟಿ ಮಾಡಿ ಬರುತ್ತಿದ್ದೆ. ಆಗ ನಾಗ ಆ್ಯಂಡ್ ಗ್ಯಾಂಗ್​ನವರು ಕ್ರಿಕೆಟ್ ಆಡುತ್ತಿದ್ದರು. ನನ್ನನ್ನು ಕರೆದರು. ನಾನು ಅವರು ಹಾಕಿದ ಚೇರ್ ಮೇಲೆ ಕುಳಿತು ಕ್ರಿಕೆಟ್ ನೋಡುತ್ತಿದ್ದೆ. ನಾಗನ ಹುಡುಗರೇ ಟೀ-ಸಿಗರೇಟ್ ನೀಡಿದರು. ಫೋಟೋ ಯಾರು ತೆಗೆದರು ಗೊತ್ತಿಲ್ಲ’ ಎಂದು ದರ್ಶನ್ ಹೇಳಿದ್ದಾರಂತೆ. ಈ ಮೂಲಕ ತಮ್ಮ ತಪ್ಪಿಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಿಂದ ಮುಂಜಾನೆಯೇ ದರ್ಶನ್ ಶಿಫ್ಟ್; ಬಳ್ಳಾರಿ ಜೈಲು ತಲುಪೋದು ಎಷ್ಟು ಗಂಟೆ?

ವಿಡಿಯೋ ಕಾಲ್ ವಿಚಾರವಾಗಿಯೂ ದರ್ಶನ್ ವಿಚಾರಣೆ ಮಾಡಿದ್ದಾರೆ. ‘ಕಾಲ್ ಮಾಡಿಕೊಂಡು ನನ್ನ ಬಳಿ ಒಬ್ಬರು ಬಂದರು. ದರ್ಶನ್ ಸರ್ ಇದಾರೆ ಎಂದು ಹೇಳಿಕೊಂಡು ಬಂದರು. ನನ್ನ ಕಡೆ ಮೊಬೈಲ್ ತಿರುಗಿಸಿದಾಗ ವಿಶ್ ಮಾಡಿದೆ ಅಷ್ಟೇ. ನನ್ನ ಬಳಿ ಮೊಬೈಲ್ ಇಲ್ಲ, ನಾನು ಮೊಬೈಲ್ ಬಳಕೆ ಮಾಡುತ್ತಿಲ್ಲ’ ಎಂದು ದರ್ಶನ್ ಹೇಳಿರುವುದಾಗಿ ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:33 am, Thu, 29 August 24