‘ಇನ್ನಾದರೂ ವಿಲನ್ ಆಗೋಣ’; ಬರ್ತ್ಡೇ ದಿನ ಸರ್ಪ್ರೈಸ್ ಕೊಟ್ಟ ದರ್ಶನ್
ದರ್ಶನ್ ಅವರು ಸಂಭ್ರಮದಿಂದ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಜನ್ಮದಿನಕ್ಕೆ ಹೊಸ ಹೊಸ ಸಿನಿಮಾ ಘೋಷಣೆ ಆಗುತ್ತಿದೆ. ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಆರ್ಆರ್ ನಗರದ ನಿವಾಸದಲ್ಲಿ ದರ್ಶನ್ ಹೇಳಿಕೆ ನೀಡಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ವಿಲನ್ ಶೇಡ್ ಇರಲಿದೆ.
ನಟ ದರ್ಶನ್ (Darshan Thoogudeepa) ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನದ ಸಂಭ್ರಮ. ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯಗಳು ಬರುತ್ತಿವೆ. ದರ್ಶನ್ ಮನೆಯಲ್ಲಿ ಮಧ್ಯರಾತ್ರಿಯೇ ಫ್ಯಾನ್ಸ್ ಜಮಾಯಿಸಿದ್ದಾರೆ. ಅಭಿಮಾನಿಗಳಿಗೆ ಹ್ಯಾಂಡ್ಶೇಕ್ ಮಾಡಿದ್ದಾರೆ. ಅಭಿಮಾನಿಗಳು ದರ್ಶನ್ ಮಾತಿನಂತೇ ಅಕ್ಕಿ ಹಾಗೂ ಧಾನ್ಯಗಳನ್ನು ತಂದು ನೀಡಿದ್ದಾರೆ. ಇವುಗಳು ಒಳ್ಳೆಯ ಕೆಲಸಕ್ಕೆ ಬಳಕೆ ಆಗಲಿದೆ. ದರ್ಶನ್ ಅವರು ಬರ್ತ್ಡೇ ದಿನ ‘ಡೆವಿಲ್’ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
‘ಡೆವಿಲ್’ ಚಿತ್ರದ ಫಸ್ಟ್ ಲುಕ್ ಇಂದು ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಅವರು ಹೇಳೋ ಡೈಲಾಗ್ ಗಮನ ಸೆಳೆದಿದೆ. ‘ನಮ್ಮ ಮನೆಯಲ್ಲೊಂದು ಪುಟ್ಟ ಪಾಪು ಇರುವುದು. ಫೋಟೋ ತೆಗೆದರೆ ಅದಕೆ ಬಲು ಕೋಪ ಬರುವುದು. ಫೋಟೋ ತೆಗೆದ ಪಾಪು ಕೈಯ ಮುರಿದು ಬಿಡುವುದು. ಸರ್ಸು ಪಾಪು ಹೆಸರು ಕೇಳಲ್ವ? ಡೆವಿಲ್’ ಎಂದು ದರ್ಶನ್ ಡೈಲಾಗ್ ಹೇಳಿದ್ದರು. ಇದರಲ್ಲಿ ಅವರ ಲುಕ್ ನೋಡಿದವರಿಗೆ ವಿಲನ್ ಶೇಡ್ ಕಂಡಿತ್ತು. ಚಿತ್ರದ ಟೈಟಲ್ ಕೂಡ ವಿಲನ್ ಲುಕ್ನಲ್ಲಿದೆ. ದರ್ಶನ್ ಅವರು ಈ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.
ಆರ್ಆರ್ ನಗರದ ನಿವಾಸದಲ್ಲಿ ದರ್ಶನ್ ಹೇಳಿಕೆ ನೀಡಿದ್ದಾರೆ. ‘25 ವರ್ಷದ ಪ್ರಯಾಣ ಸುಲಭದಲ್ಲಿ ಇರಲಿಲ್ಲ. ತುಂಬಾ ಸ್ಟ್ರಗಲ್ ಆದಮೇಲೆ ಈ ಸಕ್ಸಸ್ ಸಿಕ್ಕಿದೆ. ಡೆವಿಲ್ ಚಿತ್ರದಲ್ಲಿ ವಿಲನಿಶ್ ಲುಕ್ ಇರಲಿದೆ. ಇಷ್ಟು ದಿನ ಒಳ್ಳೆಯವರಾಗಿದ್ದು ಸಾಕು. ಇನ್ನಾದರೂ ವಿಲನ್ ಆಗೋಣ ಅಂತ’ ಎಂದಿದ್ದಾರೆ ದರ್ಶನ್. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ.
ಫೆಬ್ರವರಿ 17ರಂದು ಬೆಳ್ಳಿ ಪರ್ವ ಮಾಡಲಾಗುತ್ತಿದೆ. ದರ್ಶನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 25 ವರ್ಷ ಕಳೆದು ತುಂಬಿದ ಹಿನ್ನೆಲೆಯಲ್ಲಿ ಈ ಆಚರಣೆ ನಡೆಯುತ್ತಿದೆ. ‘ನಮ್ಮ ಎಲ್ಲಾ ಸ್ಟಾರ್ಸ್ ನಾಳೆ ಬೆಳ್ಳಿ ಪರ್ವದಲ್ಲಿ ಭಾಗಿಯಾಗುತ್ತಿದ್ದಾರೆ. ನಮ್ಮ ಇಂಡಸ್ಟ್ರಿಯಲ್ಲಿ ಎಲ್ಲರೂ ದೊಡ್ಡ ಸ್ಟಾರ್ಗಳೇ’ ಎಂದಿದ್ದಾರೆ ಅವರು. ‘ಕಾಟೇರ’ ಸಿನಿಮಾ ಇತ್ತೀಚೆಗೆ ಅವರಿಗೆ ದೊಡ್ಡ ಗೆಲುವು ತಂದುಕೊಟ್ಟಿದೆ. ಆದರೆ, ಈ ಸಕ್ಸಸ್ ಅವರ ಕರಿಯರ್ ಗ್ರಾಫ್ನಲ್ಲಿ ಏನೂ ಬದಲಾವಣೆ ತಂದುಕೊಟ್ಟಿಲ್ಲವಂತೆ.
ಇದನ್ನೂ ಓದಿ: ಐತಿಹಾಸಿಕ ಚಿತ್ರಕ್ಕಾಗಿ ಕೈ ಜೋಡಿಸಿದ ದರ್ಶನ್-ತರುಣ್; ‘ಕಾಟೇರ’ ಬಳಿಕ ಸಿಂಧೂರ ಲಕ್ಷ್ಮಣನ ಕಥೆ
ದರ್ಶನ್ ಹೊಸಬರಿಗೆ ಕಿವಿಮಾತು ಹೇಳಿದ್ದಾರೆ. ‘ಹೊಸಬರೆಲ್ಲ ಫೀಲ್ಡ್ಗೆ ಇಳಿದು ಪ್ರಚಾರ ಮಾಡಬೇಕು. ನಾವೇ ಬರ್ತಿಲ್ವ. ಯಾವುದನ್ನೂ ಗ್ರ್ಯಾಂಟೆಡ್ ಆಗಿ ತಗೋಳೋ ಹಾಗಿಲ್ಲ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ