ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಸಿನಿಮಾ ರಾಬರ್ಟ್ ಸದ್ಯ ತೆರೆ ಮೇಲೆ ಬರುವುದಕ್ಕೆ ಸಿದ್ಧವಾಗಿದ್ದು, ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್ನಲ್ಲಿ ರಾಬರ್ಟ್ ಅಬ್ಬರ ಜೋರಾಗಿದೆ. ಮಾಸ್ ಮಾಹರಾಜನ ದರ್ಶನಕ್ಕೆ ಡಿ ಬಾಸ್ ಭಕ್ತಗಣ ಕಾದು ಕುಳಿತಿದ್ದು, ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ದರ್ಶನ್‌ಗೆ ಟಾಲಿವುಡ್‌ನ ಖ್ಯಾತ ನಿರ್ದೆಶಕ ಸುಕುಮಾರ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಇನ್ನೊಂದು ಕಡೆ ಪವರ್ ಸ್ಟಾರ್ ಪವನ್ ಕಲ್ಯಾಣ್‌ಗೆ ಅತ್ತಾರೀಂಟಿಕಿ ದಾರೇದಿ ಸಿನಿಮಾ ನಿರ್ಮಾಣ ಮಾಡಿದ್ದ, ನಿರ್ಮಾಪಕ ಬಿವಿಎನ್ ಪ್ರಸಾದ್ ಕೂಡ ಈಗ ದಾಸನಿಗಾಗಿ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಈ ಸಂಬಂಧ ಹೈದರಾಬಾದ್‌ನಲ್ಲಿ ನಡೆದ ರಾಬರ್ಟ್ ಸಿನಿಮಾದ ಬಿಡುಗಡೆಗೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಈ ಬಗ್ಗೆ ಖಚಿತವಾದ ಮಾಹಿತಿ ಹೊರಬಿದ್ದಿದೆ.
ರಾಬರ್ಟ್ ಸಿನಿಮಾದ ಬಿಡುಗಡೆಗೂ ಮುನ್ನ ಕಾರ್ಯಕ್ರಮದಲ್ಲಿ ಟಾಲಿವುಡ್‌ನ ದೊಡ್ಡ ನಿರ್ಮಾಪಕ ಬಿವಿಎನ್ ಪ್ರಸಾದ್ ಕೂಡ ಆಗಮಿಸಿದ್ದು, ಸಿನಿಮಾ ಬಗ್ಗೆ ಮಾತಾಡಿದ ಪ್ರಸಾದ್, ಮುಂದಿನ ಸಿನಿಮಾ ದರ್ಶನ್‌ಗೆ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.
ಸುಕುಮಾರ್ ನಿರ್ದೇಶನ ಇರುವ ಚಿತ್ರಕ್ಕೆ ಪ್ರಸಾದ್ ಬಂಡವಾಳ ಹಾಕುತ್ತಿರುವುದರಿಂದ ಖಚಿತಗೊಂಡಿದ್ದು, ಆ ಮೂಲಕ ಇದೇ ಮೊದಲ ಬಾರಿಗೆ, ದರ್ಶನ್ ಬೇರೆ ಭಾಷೆಯ ನಿರ್ದೇಶಕರ ಜೊತೆ ಕೆಲಸ ಮಾಡುವ ಸವಾಲು ತೆಗೆದುಕೊಂಡಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ಮೂಡಿ ಬರಲಿದೆ ಎನ್ನುವುದು ಮುತ್ತಿನ ನಗರಿಯಿಂದ ಕೇಳಿ ಬಂದಿರುವ ಮಾತು.
ಇತ್ತೀಚೆಗೆ ದರ್ಶನ್ ನೀಡಿದ್ದ ಸಂದರ್ಶನದಲ್ಲಿ ವೀರಮದಕರಿ ಸಿನಿಮಾ ತೆರೆಗೆ ಬರುವುದು ತಡವಾಗಲಿದೆ ಎಂದು ಹೇಳಿದ್ದು, ಹೀಗಾಗಿ ನಡುವೆ ಸಿಗುವ ಅಂತರದಲ್ಲಿ ಬೇರೆ ಸಿನಿಮಾ ಮಾಡುತ್ತೇನೆ ಎಂದು ಹಿಂಟ್ ಕೊಟ್ಟಿದ್ದಾರೆ. ಅಕ್ಟೋಬರ್ ಅಷ್ಟರಲ್ಲಿ ಮತ್ತೆ ದೊಡ್ಡ ಪರದೆ ಮೇಲೆ ಬರುತ್ತೇನೆ ಎಂದು ಹೇಳಿದರು. ಆ ಸಿನಿಮಾ ಬೇರೆ ಯಾವುದೂ ಅಲ್ಲ, ಸುಕುಮಾರ್ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಬರಲಿರುವ ಸಿನಿಮಾನೇ ಎನ್ನುವುದು ಈಗ ಪಕ್ಕಾ ಆಗಿದೆ. ಹೀಗಾಗಿ ದಚ್ಚು ಅಭಿಮಾನಿಗಳು ಈಗ ಸಿಕ್ಕಾಪಟ್ಟೆ ಪುಳಕಿತರಾಗಿದ್ದಾರೆ.
ಇದನ್ನೂ ಓದಿ: ರಾಬರ್ಟ್ ಪ್ರೀ ರಿಲೀಸ್.. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಡಿ ಬಾಸ್ ದರ್ಶನ್!
Published On - 6:39 pm, Sat, 27 February 21