ಅಪ್ಪ-ಅಮ್ಮ ಸತ್ರೂ ಓಕೆ, ದರ್ಶನ್ ಜೈಲಲ್ಲಿರೋದನ್ನ ನೋಡೋಕಾಕ್ತಿಲ್ಲ; ಫ್ಯಾನ್ಸ್ ಅಂಧಾಭಿಮಾನ
ನಟ ದರ್ಶನ್ ಅವರ ‘ಡೆವಿಲ್’ ಸಿನಿಮಾ 10 ಕೋಟಿ ಗಳಿಸಿ ಉತ್ತಮ ಆರಂಭ ಕಂಡಿದೆ. ಆದರೆ, ದರ್ಶನ್ ಜೈಲಿನಲ್ಲಿರುವಾಗ ಸಿನಿಮಾ ಬಿಡುಗಡೆಯಾದದ್ದು ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಕೆಲವರು "ತಂದೆ-ತಾಯಿ ಸತ್ತರೂ ಇಷ್ಟು ಬೇಸರವಾಗುವುದಿಲ್ಲ" ಎಂದು ಹೇಳಿದ್ದು ವೈರಲ್ ಆಗಿದೆ. ಇದು ಅಭಿಮಾನವಲ್ಲ, ಅಂಧಾಭಿಮಾನ ಎಂದು ಹಲವರು ಟೀಕಿಸಿದ್ದಾರೆ.

ನಟ ದರ್ಶನ್ (Darshan) ಅವರ ನಟನೆಯ ‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ತೆರೆಗೆ ಬಂದಿದೆ. ಈ ಸಿನಿಮಾ ಮೊದಲ ದಿನ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಾ ಇದೆ. ಈ ಸಿನಿಮಾ ರಿಲೀಸ್ ಆಗುವ ಸಂದರ್ಭದಲ್ಲಿ ದರ್ಶನ್ ಅವರು ಜೈಲಿನಲ್ಲಿದ್ದರು. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕೆಲವರು ಅಭಿಮಾನ ಇನ್ನೂ ಒಂದು ಹಂತ ಮುಂದಕ್ಕೆ ಹೋಗಿದೆ. ‘ತಂದೆ ತಾಯಿ ಸತ್ತಿದ್ದರೂ ಇಷ್ಟು ಬೇಸರ ಆಗುತ್ತಿರಲಿಲ್ಲ. ದರ್ಶನ್ ಜೈಲಿನಲ್ಲಿರೋದು ಬೇಸರ ಮೂಡಿಸದೆ’ ಎಂದು ಅಭಿಮಾನಿ ಹೇಳಿರುವ ವಿಡಿಯೋ ವೈರಲ್ ಆಗಿದೆ.
ನೆಚ್ಚಿನ ನಟ ನಮ್ಮ ಜೊತೆ ಇಲ್ಲ ಎಂದಾಗ ಅಭಿಮಾನಿಗಳಿಗೆ ಬೇಸರ ಆಗೋದು ಸಹಜ. ಅಭಿಮಾನ ಇರುವ ಯಾರಿಗಾದರೂ ಬೇಸರ ಆಗಿಯೇ ಆಗುತ್ತದೆ. ಅದರಲ್ಲೂ ಅವರ ಸಿನಿಮಾ ರಿಲೀಸ್ ಆಗುತ್ತಿರುವಾಗ ಆ ಹೀರೋ ಅಲ್ಲಿಲ್ಲ ಎಂದರೆ ಅಷ್ಟು ಸಂಭ್ರಮ ಇರೋದಿಲ್ಲ. ಆದರೆ, ದರ್ಶನ್ ಅಭಿಮಾನಿಗಳು ಈ ವಿಷಯದಲ್ಲಿ ಅಂಧಾಭಿಮಾನ ತೋರಿಸಿದ್ದಾರೆ.
‘ನನ್ನ ಜನ್ಮಕೊಟ್ಟ ತಂದೆ-ತಾಯಿಯನ್ನು ಕಳೆದುಕೊಂಡರೂ ಅಷ್ಟು ಬೇಸರ ಆಗುತ್ತಿರಲಿಲ್ಲ. ದರ್ಶನ್ ಇಲ್ಲದೆ ಸಿನಿಮಾ ನೋಡುತ್ತಿರುವುದು ಬೇಸರ ಆಗಿದೆ. ಅಭಿಮಾನ ಎಂದರೆ ಇದೇ. ತಾಯಿ ಋಣ ಆದರೂ ತಿರಿಸಬಹುದು. ಇವರ ಅಭಿಮಾನ ತೀರಿಸೋಕೆ ಆಗಲ್ಲ’ ಎಂದನು ಅಭಿಮಾನಿ.
ತಿಕ್ಕಲು ನನ್ ಮಕ್ಕಳು , ದರಿದ್ರ ನೋಡೋಕೆ.
ಅದಕ್ಕೆ ಈ ಡಿಬಾಸ್ ಅಭಿಮಾನಿಗಳಿಗೆ ಯಾರು ಹೆಣ್ಣು ಕೊಡ್ತಾ ಇಲ್ಲ. ಪದಗಳೇ ಸಾಲಲ್ಲ ಇವರಿಗೆ ಬೈಯೋಕೆ 🤡 https://t.co/ep64X7dITM pic.twitter.com/aYMcrp5SIW
— 🚨 ಅಗ್ನಿ ಐಪಿಎಸ್ 🚨 (Parody) (@IPSAgni108) December 11, 2025
View this post on Instagram
ನಿಮಗೆ ಏನು ಮಾಡಿದ್ದಾನೆ ಎಂದು ಕೇಳಿದಾಗ, ‘25 ವರ್ಷದಿಂದ ಅವರನ್ನು ನೋಡುತ್ತಿದ್ದೇನೆ. ಚಿಕ್ಕ ವಯಸ್ಸಿನಿಂದ ಅವರನ್ನು ನೋಡಿ ಬೆಳೆದಿದ್ದೇನೆ. ಎಡಗೈಗೆ ಕೊಟ್ಟಿದನ್ನು ಅವರು ಬಲಗೈ ಹೇಳೋದಿಲ್ಲ. ಹೀಗಿರುವಾಗ ಅವರು ಮಾಡಿದ್ದನ್ನು ನಾವು ಹೇಳಬಾರದು. ಅವರು ಇಲ್ಲ ಎಂಬುದು ಒಂದೇ ನೋವು. ಮತ್ಯಾವ ನೋವು ಇಲ್ಲ’ ಎಂದು ಅಭಿಮಾನಿ ಹೇಳಿದ್ದಾನೆ.
ಇದನ್ನೂ ಓದಿ: ಮೊದಲ ದಿನ ‘ಡೆವಿಲ್’ ಸಿಡಿಲಬ್ಬರದ ಕಲೆಕ್ಷನ್; ದರ್ಶನ್ ಫ್ಯಾನ್ಸ್ ಫುಲ್ ಖುಷ್ ಮತ್ತೋರ್ವ ಅಭಿಮಾನಿ ವಿಜಯಲಕ್ಷ್ಮೀ ಅವರನ್ನು ದೇವರು ಎಂದು ಕರೆದಿದ್ದಾನೆ. ‘ಆರ್ಆರ್ ನಗರದಲ್ಲಿರುವ ದೇವತೆ ವಿಜಯಲಕ್ಷ್ಮೀ’ ಎಂದಿದ್ದಾನೆ. ಈ ಎಲ್ಲಾ ವಿಡಿಯೋಗಳು ವೈರಲ್ ಆಗಿವೆ. ಇದನ್ನು ಅಭಿಮಾನ ಎಂದು ಹೇಳುವುದಿಲ್ಲ, ಅಂಧಾಭಿಮಾನ ಎನ್ನುತ್ತಾರೆ ಎಂದು ಅನೇಕರು ಬುದ್ಧಿವಾದ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




