‘ಡೆವಿಲ್’ಗೆ ಮಲ್ಟಿಪ್ಲೆಕ್ಸ್ ಬುಕಿಂಗ್ ಓಪನ್ ಯಾವಾಗ? ಸಿಂಗಲ್ ಸ್ಕ್ರೀನ್ಗಳು ಸೋಲ್ಡ್ಔಟ್
ನಟ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ಡಿಸೆಂಬರ್ 11ರಂದು ಬಿಡುಗಡೆಯಾಗಲಿದೆ. ದರ್ಶನ್ ಜೈಲಿನಲ್ಲಿದ್ದರೂ, ಸಿನಿಮಾಗೆ ಭರ್ಜರಿ ಅಡ್ವಾನ್ಸ್ ಬುಕಿಂಗ್ ಸಿಕ್ಕಿದೆ. ಅಭಿಮಾನಿಗಳು ಸ್ವತಃ ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಲ್ಟಿಪ್ಲೆಕ್ಸ್ ಬುಕಿಂಗ್ ಇಂದಷ್ಟೇ ಆರಂಭವಾಗುವ ಸಾಧ್ಯತೆ ಇದ್ದು, 'ಡೆವಿಲ್' ಮೊದಲ ದಿನದ ಗಳಿಕೆ ಬಗ್ಗೆ ಕುತೂಹಲ ಹೆಚ್ಚಿದೆ.

ನಟ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ರಿಲೀಸ್ಗೆ ಇನ್ನು ಬಾಕಿ ಇರೋದು ಕೇವಲ ಎರಡು ದಿನ ಮಾತ್ರ. ಆದಾಗ್ಯೂ ಸಿನಿಮಾಗೆ ಮಲ್ಟಿಪ್ಲೆಕ್ಸ್ ಬುಕಿಂಗ್ ಓಪನ್ ಆಗಿಲ್ಲ. ಇಂದು ಅದು ಓಪನ್ ಆಗುವ ಸಾಧ್ಯತೆ ಇದೆ. ‘ಡೆವಿಲ್’ ಸಿನಿಮಾ ರಿಲೀಸ್ ಆಗುವ ಸಂದರ್ಭದಲ್ಲಿ ದರ್ಶನ್ ಅವರು ಜೈಲಿನಲ್ಲಿ ಇರೋದು ಫ್ಯಾನ್ಸ್ಗೆ ಬೇಸರ ಮೂಡಿಸಿದೆ.
ಮಿಲನ ಪ್ರಕಾಶ್ ಅವರು ‘ಡೆವಿಲ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದ್ದು, ಕೊಟ್ಯಾಂತರ ವೀಕ್ಷಣೆ ಕಂಡಿದೆ. ಅಡ್ವಾನ್ಸ್ ಬುಕಿಂಗ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಟಿಕೆಟ್ ದರ 400 ರೂಪಾಯಿ ಇದ್ದರೂ ಬುಕಿಂಗ್ ಮಾಡುತ್ತಿದ್ದಾರೆ. ಡಿಸೆಂಬರ್ 11ರ ಬೆಳಿಗ್ಗೆ 6.30ರ ಶೋ ಬಹುತೇಕ್ ಹೌಸ್ಫುಲ್ ಆಗಿದೆ.
ಇನ್ನು, ಮಲ್ಟಿಪ್ಲೆಕ್ಸ್ನಲ್ಲಿ ಇನ್ನೂ ಬುಕಿಂಗ್ ಓಪನ್ ಆಗಿಲ್ಲ. ಇಂದು ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಮಲ್ಟಿಪ್ಲೆಕ್ಸ್ ಬುಕಿಂಗ್ ಆರಂಭ ಆಗಬಹುದು. ಇದಾದ ಬಳಿಕ ಚಿತ್ರದ ಅಡ್ವಾನ್ಸ್ ಬುಕಿಂಗ್ಗೆ ಮತ್ತಷ್ಟು ಮೆರಗು ಸಿಗಲಿದೆ. ಈ ಸಿನಿಮಾ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಸಲಿದೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: 10 ಗಂಟೆಯಲ್ಲಿ ‘ಡೆವಿಲ್’ ದಾಖಲೆ ಮುರಿದ ‘ಮಾರ್ಕ್’ ಟ್ರೇಲರ್
‘ಡೆವಿಲ್’ ಸಿನಿಮಾದ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾರೆ. ಹೀಗಾಗಿ, ಸಿನಿಮಾ ಪ್ರಚಾರದ ಜವಾಬ್ದಾರಿಯನ್ನು ಅಭಿಮಾನಿಗಳೇ ವಹಿಸಿಕೊಂಡಿದ್ದಾರೆ. ಅವರು ವಿವಿಧ ಕಡೆಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ. ಸಿನಿಮಾಗೆ ಪ್ರೀ ರಿಲೀಸ್ ಈವೆಂಟ್ ಮಾಬೇಕಿತ್ತು ಎಂಬುದು ಫ್ಯಾನ್ಸ್ ಕೋರಿಕೆ ಆಗಿತ್ತು.
ದರ್ಶನ್ ಬಗ್ಗೆ ಹರಿದಾಡಿದೆ ಸುದ್ದಿ
ನಟ ದರ್ಶನ್ ಅವರು ಜೈಲಿನಲ್ಲಿ ಇದ್ದಾರೆ. ಅವರು ಅಲ್ಲಿ ಸಹ ಕೈದಿಗಳ ಜೊತೆ ಕಿರಿಕ್ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ಅವರು ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದಾರಂತೆ. ಇತ್ತೀಚೆಗೆ ಜೈಲಿನಲ್ಲಿ ದೊಡ್ಡ ಜಗಳ ಕೂಡ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:57 am, Tue, 9 December 25




