‘ಡೆವಿಲ್’ಗೆ ಮಲ್ಟಿಪ್ಲೆಕ್ಸ್ ಬುಕಿಂಗ್ ಓಪನ್ ಯಾವಾಗ? ಸಿಂಗಲ್ ಸ್ಕ್ರೀನ್​ಗಳು ಸೋಲ್ಡ್​ಔಟ್

ನಟ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ಡಿಸೆಂಬರ್ 11ರಂದು ಬಿಡುಗಡೆಯಾಗಲಿದೆ. ದರ್ಶನ್ ಜೈಲಿನಲ್ಲಿದ್ದರೂ, ಸಿನಿಮಾಗೆ ಭರ್ಜರಿ ಅಡ್ವಾನ್ಸ್ ಬುಕಿಂಗ್ ಸಿಕ್ಕಿದೆ. ಅಭಿಮಾನಿಗಳು ಸ್ವತಃ ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಲ್ಟಿಪ್ಲೆಕ್ಸ್ ಬುಕಿಂಗ್ ಇಂದಷ್ಟೇ ಆರಂಭವಾಗುವ ಸಾಧ್ಯತೆ ಇದ್ದು, 'ಡೆವಿಲ್' ಮೊದಲ ದಿನದ ಗಳಿಕೆ ಬಗ್ಗೆ ಕುತೂಹಲ ಹೆಚ್ಚಿದೆ.

‘ಡೆವಿಲ್’ಗೆ ಮಲ್ಟಿಪ್ಲೆಕ್ಸ್ ಬುಕಿಂಗ್ ಓಪನ್ ಯಾವಾಗ? ಸಿಂಗಲ್ ಸ್ಕ್ರೀನ್​ಗಳು ಸೋಲ್ಡ್​ಔಟ್
ದರ್ಶನ್

Updated on: Dec 09, 2025 | 11:53 AM

ನಟ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ರಿಲೀಸ್​ಗೆ ಇನ್ನು ಬಾಕಿ ಇರೋದು ಕೇವಲ ಎರಡು ದಿನ ಮಾತ್ರ. ಆದಾಗ್ಯೂ ಸಿನಿಮಾಗೆ ಮಲ್ಟಿಪ್ಲೆಕ್ಸ್ ಬುಕಿಂಗ್ ಓಪನ್ ಆಗಿಲ್ಲ. ಇಂದು ಅದು ಓಪನ್ ಆಗುವ ಸಾಧ್ಯತೆ ಇದೆ. ‘ಡೆವಿಲ್’ ಸಿನಿಮಾ ರಿಲೀಸ್ ಆಗುವ ಸಂದರ್ಭದಲ್ಲಿ ದರ್ಶನ್ ಅವರು ಜೈಲಿನಲ್ಲಿ ಇರೋದು ಫ್ಯಾನ್ಸ್​ಗೆ ಬೇಸರ ಮೂಡಿಸಿದೆ.

ಮಿಲನ ಪ್ರಕಾಶ್ ಅವರು ‘ಡೆವಿಲ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದ್ದು, ಕೊಟ್ಯಾಂತರ ವೀಕ್ಷಣೆ ಕಂಡಿದೆ. ಅಡ್ವಾನ್ಸ್ ಬುಕಿಂಗ್​ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಟಿಕೆಟ್ ದರ 400 ರೂಪಾಯಿ ಇದ್ದರೂ ಬುಕಿಂಗ್ ಮಾಡುತ್ತಿದ್ದಾರೆ. ಡಿಸೆಂಬರ್ 11ರ ಬೆಳಿಗ್ಗೆ 6.30ರ ಶೋ ಬಹುತೇಕ್ ಹೌಸ್​​ಫುಲ್ ಆಗಿದೆ.

ಇನ್ನು, ಮಲ್ಟಿಪ್ಲೆಕ್ಸ್​ನಲ್ಲಿ ಇನ್ನೂ ಬುಕಿಂಗ್ ಓಪನ್ ಆಗಿಲ್ಲ. ಇಂದು ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಮಲ್ಟಿಪ್ಲೆಕ್ಸ್ ಬುಕಿಂಗ್ ಆರಂಭ ಆಗಬಹುದು. ಇದಾದ ಬಳಿಕ ಚಿತ್ರದ ಅಡ್ವಾನ್ಸ್ ಬುಕಿಂಗ್​ಗೆ ಮತ್ತಷ್ಟು ಮೆರಗು ಸಿಗಲಿದೆ. ಈ ಸಿನಿಮಾ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಸಲಿದೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: 10 ಗಂಟೆಯಲ್ಲಿ ‘ಡೆವಿಲ್’ ದಾಖಲೆ ಮುರಿದ ‘ಮಾರ್ಕ್​’ ಟ್ರೇಲರ್

‘ಡೆವಿಲ್’ ಸಿನಿಮಾದ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿ ಇದ್ದಾರೆ. ಹೀಗಾಗಿ, ಸಿನಿಮಾ ಪ್ರಚಾರದ ಜವಾಬ್ದಾರಿಯನ್ನು ಅಭಿಮಾನಿಗಳೇ ವಹಿಸಿಕೊಂಡಿದ್ದಾರೆ. ಅವರು ವಿವಿಧ ಕಡೆಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ. ಸಿನಿಮಾಗೆ ಪ್ರೀ ರಿಲೀಸ್ ಈವೆಂಟ್ ಮಾಬೇಕಿತ್ತು ಎಂಬುದು ಫ್ಯಾನ್ಸ್ ಕೋರಿಕೆ ಆಗಿತ್ತು.

ದರ್ಶನ್ ಬಗ್ಗೆ ಹರಿದಾಡಿದೆ ಸುದ್ದಿ

ನಟ ದರ್ಶನ್ ಅವರು ಜೈಲಿನಲ್ಲಿ ಇದ್ದಾರೆ. ಅವರು ಅಲ್ಲಿ ಸಹ ಕೈದಿಗಳ ಜೊತೆ ಕಿರಿಕ್ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ಅವರು ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದಾರಂತೆ. ಇತ್ತೀಚೆಗೆ ಜೈಲಿನಲ್ಲಿ ದೊಡ್ಡ ಜಗಳ ಕೂಡ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:57 am, Tue, 9 December 25

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us