‘ಇದ್ರೇ ನೆಮ್ದಿಯಾಗ್ ಇರ್ಬೇಕ್’ ಹಾಡು ರಿಲೀಸ್ಗೂ ಮೊದಲೇ ನೆಮ್ಮದಿ ಕಳೆದುಕೊಂಡ ದರ್ಶನ್
ದರ್ಶನ್ ಅವರ 'ಡೆವಿಲ್' ಚಿತ್ರದ ಮೊದಲ ಹಾಡು ಆಗಸ್ಟ್ 15ಕ್ಕೆ ಬಿಡುಗಡೆಯಾಗಲಿದೆ. ಆದರೆ, ಸುಪ್ರೀಂ ಕೋರ್ಟ್ ಅವರ ಜಾಮೀನು ರದ್ದುಗೊಳಿಸಿದ್ದರಿಂದ ಅವರು ಮತ್ತೆ ಜೈಲು ಸೇರಬೇಕಾಗಿದೆ. ಹಾಡಿನ ಶೀರ್ಷಿಕೆ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಎಂಬುದು. ಈಗ ಹಾಡಿನ ಬಿಡುಗಡೆ ಸಮಯದಲ್ಲಿ ದರ್ಶನ್ ಜೈಲಿನಲ್ಲಿ ಇರಲಿದ್ದಾರೆ.

ನಟ ದರ್ಶನ್ ಅವರು ‘ಡೆವಿಲ್’ ಸಿನಿಮಾ (Devil Movie) ಶೂಟ್ ಪೂರ್ಣಗೊಳಿಸಿದ್ದಾರೆ. ಡಬ್ಬಿಂಗ್ ಕೂಡ ಪೂರ್ಣಗೊಂಡಿದೆ ಎನ್ನಲಾಗಿದೆ. ಆಗಸ್ಟ್ 15ರಂದು ಚಿತ್ರದ ಮೊದಲ ಹಾಡು ‘ಇದ್ರೇ ನೆಮ್ದಿಯಾಗ್ ಇರ್ಬೇಕ್..’ ರಿಲೀಸ್ ಆಗಲಿದೆ. ದುರಾದೃಷ್ಟ ಎಂದರೆ ಹಾಡು ರಿಲೀಸ್ಗೂ ಮೊದಲೇ ದರ್ಶನ್ ನೆಮ್ಮದಿ ಕಳೆದು ಹೋಗಿದೆ. ಸುಪ್ರೀಂ ಕೋರ್ಟ್ ದರ್ಶನ್ ಜಾಮೀನು ರದ್ದು ಮಾಡಿದೆ. ಇದರಿಂದ ಅವರು ಮತ್ತೆ ಜೈಲು ಸೇರಬೇಕಿದೆ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ.
ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಕೆಲ ತಿಂಗಳು ಜೈಲಿನಲ್ಲಿ ಇದ್ದರು. ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ, ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿ ಆದೇಶ ಹೊರಡಿಸಿದೆ. ಈ ಆದೇಶದ ಬೆನ್ನಲ್ಲೇ ಇಂದೇ ಅವರ ಬಂಧನ ನಡೆಯಲಿದೆ. ಹೀಗಾಗಿ, ದರ್ಶನ್ ಹಾಡಿನ ರಿಲೀಸ್ ಸಂದರ್ಭದಲ್ಲಿ ಜೈಲಿನಲ್ಲಿ ಇರಲಿದ್ದಾರೆ.
ದರ್ಶನ್ ಪೋಸ್ಟ್
View this post on Instagram
‘ಡೆವಿಲ್’ ಹಾಡಿಗೆ ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಎಂದು ಟೈಟಲ್ ಇಟ್ಟ ಬಗ್ಗೆ ಅನೇಕರು ಅಸಮಾಧಾನ ಹೊರಹಾಕಿದ್ದರು. ಈ ಮೊದಲು ದರ್ಶನ್ ಪತ್ನಿಗೆ ಬೈದ ಆಡಿಯೋ ವೈರಲ್ ಆಗಿತ್ತು. ಈ ಆಡಿಯೋದಲ್ಲಿ ‘ಇದ್ರೇ ನೆಮ್ದಿಯಾಗ್ ಇರ್ಬೇಕ್’ ಎಂಬ ಲೈನ್ ಇತ್ತು. ಈ ಲೈನ್ ಸಾಕಷ್ಟು ಟ್ರೆಂಡ್ ಆಗಿತ್ತು. ಇದೇ ಲೈನ್ ಬಳಕೆ ಮಾಡಿಕೊಂಡು ಹಾಡು ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ. ಆದರೆ, ಈಗ ಈ ಹಾಡಿನ ರಿಲೀಸ್ಗೂ ಮೊದಲೇ ದರ್ಶನ್ಗೆ ನೆಮ್ಮದಿ ಇಲ್ಲದಂತೆ ಆಗಿದೆ.
ಇದನ್ನೂ ಓದಿ: ದರ್ಶನ್ ಕೈಯಲ್ಲಿದ್ದ ಸಿನಿಮಾಗಳು ಎಷ್ಟು? ‘ಡೆವಿಲ್’ ಗತಿ ಏನು?
ದರ್ಶನ್ಗೆ ಜೈಲಿನಲ್ಲಿ ಯಾವುದೇ ಐಷಾರಾಮಿ ಸವಲತ್ತು ಸಿಗುವುದಿಲ್ಲ. ಸುಪ್ರೀಂಕೋರ್ಟ್ ಈ ಬಗ್ಗೆ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಯಾವುದೇ ಐಷಾರಾಮಿ ಸವಲತ್ತು ಸಿಗದಂತೆ ನೋಡಿಕೊಳ್ಳಬೇಕು ಎಂದಿದೆ. ಒಂದೊಮ್ಮೆ ಆ ರೀತಿ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಹೀಗಾಗಿ, ದರ್ಶನ್ ಜೈಲು ದಿನಗಳು ಮತ್ತಷ್ಟು ಕಷ್ಟ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:51 pm, Thu, 14 August 25








