Devil First Look: ಇದು ಫೋಟೋ ತೆಗೆದರೆ ಕೈ ಮುರಿಯೋ ‘ಡೆವಿಲ್’; ಹೊಸ ಅವತಾರದಲ್ಲಿ ಬಂದ ದರ್ಶನ್

Darshan Thoogudeepa Birthday: ‘ಡೆವಿಲ್’ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಪ್ರಕಾಶ್ ವೀರ್. ಸಿನಿಮಾ ಕ್ಷೇತ್ರದಲ್ಲಿ ಅವರಿಗೆ ಸಾಕಷ್ಟು ಅನುಭವ ಇದೆ. ಈ ಮೊದಲು ‘ವಂಶಿ’, ‘ಮಿಲನ’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದ್ದರು. ದರ್ಶನ್ ಜೊತೆ 2017ರಲ್ಲಿ ‘ತಾರಕ್’ ಸಿನಿಮಾ ಮಾಡಿದ್ದರು. ಈಗ ಎರಡನೇ ಬಾರಿಗೆ ಇಬ್ಬರೂ ಒಂದಾಗಿದ್ದಾರೆ.

Devil First Look: ಇದು ಫೋಟೋ ತೆಗೆದರೆ ಕೈ ಮುರಿಯೋ ‘ಡೆವಿಲ್’; ಹೊಸ ಅವತಾರದಲ್ಲಿ ಬಂದ ದರ್ಶನ್
ಡೆವಿಲ್

Updated on: Feb 16, 2024 | 5:50 AM

ನಟ ದರ್ಶನ್ (Darshan) ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನದ ಸಂಭ್ರಮ. ಮಧ್ಯರಾತ್ರಿಯಿಂದಲೇ ಅವರ ಮನೆಯ ಎದುರು ಸೆಲೆಬ್ರಿಟಿಗಳು ನೆರೆದಿದ್ದಾರೆ. ಮಧ್ಯರಾತ್ರಿ ವೇಳೆಗೆ ಅವರ ನಟನೆಯ ಮುಂದಿನ ಸಿನಿಮಾ ‘ಡೆವಿಲ್’ ಚಿತ್ರದ ಫಸ್ಟ್​ ಲುಕ್ ಟೀಸರ್ ರಿಲೀಸ್ ಮಾಡಲಾಗಿದೆ. ಈ ಟೀಸರ್ ನೋಡಿದ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಹೊಸ ರೀತಿಯಲ್ಲಿ ಈ ಟೀಸರ್ ಮೂಡಿ ಬಂದಿದೆ. ಹಿಂದೆಂದೂ ನೋಡಿರದ ಅವತಾರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅವವರು ಇಷ್ಟ ಆಗಿದ್ದಾರೆ.

‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು. ಫೋಟೋ ತೆಗೆದರೆ ಅದಕೆ ಬಲು ಕೋಪ ಬರುವುದು. ಫೋಟೋ ತೆಗೆದ ಪಾಪು ಕೈಯ ಮುರಿದು ಬಿಡುವುದು. ಸರ್ಸು ಪಾಪು ಹೆಸರು ಕೇಳಲ್ವ? ಡೆವಿಲ್’ ಎಂದು ಹೇಳಿ ದರ್ಶನ್ ಅವರು ಜೋರಾಗಿ ನಗುತ್ತಾರೆ. ಈ ಟೀಸರ್ ಗಮನ ಸೆಳೆದಿದೆ. ದರ್ಶನ್ ಹಾವ-ಭಾವ ಇಷ್ಟ ಆಗಿದೆ. ಅವರ ಲುಕ್ ಕೂಡ ಬೇರೆಯದೇ ರೀತಿಯಲ್ಲಿ ಇದೆ.

ಇದನ್ನೂ ಓದಿ: ದರ್ಶನ್ ಜನ್ಮದಿನ: ಸ್ಟಾರ್ ನಟನ ಜನ್ಮದಿನದ ಖುಷಿ ಹೆಚ್ಚಿಸಿದ ‘ಕಾಟೇರ’ ಗೆಲುವು

‘ಡೆವಿಲ್’ ಚಿತ್ರಕ್ಕೆ ಕೆಲವು ತಿಂಗಳ ಹಿಂದೆ ಸ್ಕ್ರಿಪ್ಟ್ ಪೂಜೆ ನಡೆದಿತ್ತು. ಸದ್ದಿಲ್ಲದೆ ಈ ಸಿನಿಮಾ ಕೆಲಸಗಳು ಈಗ ಆರಂಭ ಆಗಿವೆ. ಈ ಮೊದಲು ದರ್ಶನ್​ ಫ್ಯಾನ್ಸ್​ನ ದಾರಿ ತಪ್ಪಿಸೋ ಕೆಲಸ ಆಗಿತ್ತು. ಕೆಲವು ಎಡಿಟ್ ಮಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಇದು ‘ಡೆವಿಲ್’ ಚಿತ್ರದ ಪೋಸ್ಟರ್ ಎಂದು ಹೇಳಲಾಗಿತ್ತು. ಆದರೆ, ಇದು ನಕಲಿ ಪೋಸ್ಟರ್ ಎಂದು ತಂಡ ಸ್ಪಷ್ಟನೆ ನೀಡಿತ್ತು. ಈಗ ‘ಡೆವಿಲ್’ ಫಸ್ಟ್ ಲುಕ್ ಟೀಸರ್ ಆಗಿ ಗಮನ ಸೆಳೆಯುತ್ತಿದೆ.

YouTube video player

‘ಡೆವಿಲ್’ ಚಿತ್ರಕ್ಕೆ ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಇದೆ. ಈ ಮೊದಲು ‘ವಂಶಿ’, ‘ಮಿಲನ’ ಮೊದಲಾದ ಚಿತ್ರಗಳಿಗೆ ಅವರು ಆ್ಯಕ್ಷನ್ ಕಟ್ ಹೇಳಿದ್ದರು. ದರ್ಶನ್ ಜೊತೆ 2017ರಲ್ಲಿ ‘ತಾರಕ್’ ಸಿನಿಮಾ ಮಾಡಿದ್ದರು. ಈಗ ಎರಡನೇ ಬಾರಿಗೆ ಇವರು ಒಂದಾಗಿದ್ದಾರೆ. ಸಿನಿಮಾದ ನಾಯಕಿ ಹಾಗೂ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us