Darshan Birthday: ದರ್ಶನ್ ಜನ್ಮದಿನ: ಸ್ಟಾರ್ ನಟನ ಜನ್ಮದಿನದ ಖುಷಿ ಹೆಚ್ಚಿಸಿದ ‘ಕಾಟೇರ’ ಗೆಲುವು

ಕಳೆದ ವರ್ಷ ರಿಲೀಸ್ ಆದ ‘ಕಾಟೇರ’ ಚಿತ್ರ 200 ಕೋಟಿ ರೂಪಾಯಿ ಕ್ಲಬ್ ಸೇರಿತು. ಇದರಿಂದ ದರ್ಶನ್ ಅವರ ಖ್ಯಾತಿ ಹೆಚ್ಚಿದೆ. ಈ ಸಿನಿಮಾಗೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಗೆಲುವು ದರ್ಶನ್ ಬರ್ತ್​ಡೇ ಖುಷಿಯನ್ನು ಹೆಚ್ಚಿಸಿದೆ.

Darshan Birthday: ದರ್ಶನ್ ಜನ್ಮದಿನ: ಸ್ಟಾರ್ ನಟನ ಜನ್ಮದಿನದ ಖುಷಿ ಹೆಚ್ಚಿಸಿದ ‘ಕಾಟೇರ’ ಗೆಲುವು
ದರ್ಶನ್
Follow us
ರಾಜೇಶ್ ದುಗ್ಗುಮನೆ
|

Updated on:Feb 16, 2024 | 5:36 AM

ನಟ ದರ್ಶನ್ (Darshan) ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಕಾಮನ್ ಡಿಪಿ ಹಂಚಿಕೊಂಡು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಅವರು ಚಿತ್ರರಂಗದಲ್ಲಿ ಮತ್ತಷ್ಟಟು ಗೆಲುವು ಕಾಣಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಬರ್ತ್​ಡೇ ದಿನ ಹೂವು-ಹಣ್ಣು ತರದಂತೆ ದರ್ಶನ್ ಅವರು ಈ ಮೊದಲೇ ಅಭಿಮಾನಿಗಳ ಬಳಿ ಕೋರಿಕೊಂಡಿದ್ದಾರೆ. ಇದನ್ನು ಅವರು ಫಾಲೋ ಮಾಡುತ್ತಿದ್ದಾರೆ. ದರ್ಶನ್ ಹೆಸರಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳು ಕೂಡ ನಡೆಯುತ್ತಿವೆ. ಮಧ್ಯರಾತ್ರಿಯೇ ಫ್ಯಾನ್ಸ್ ಮನೆಯ ಸಮೀಪ ಜಮಾಯಿಸಿ ಸಂಭ್ರಮಿಸಿದ್ದಾರೆ.

ದರ್ಶನ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1997ರಲ್ಲಿ. ‘ಮಹಾಭಾರತ’ ಅವರು ನಟಿಸಿದ ಮೊದಲ ಸಿನಿಮಾ. 200ನೇ ಇಸವಿಯಲ್ಲಿ ರಿಲೀಸ್ಆದ ಶಿವರಾಜ್​ಕುಮಾರ್, ಅಂಬರೀಷ್ ನಟನೆಯ ‘ದೇವರ ಮಗ’ ಚಿತ್ರದಲ್ಲಿ ದರ್ಶನ್ ನಟಿಸಿದರು. ಈ ಚಿತ್ರದಲ್ಲಿ ಅವರು ದರ್ಶನ್ ಹೆಸರಿನ ಪಾತ್ರದಲ್ಲೇ ಕಾಣಿಸಿಕೊಂಡರು. ನಂತರ ತಮಿಳು ಚಿತ್ರವೊಂದರಲ್ಲಿ ಅವರು ಬಣ್ಣ ಹಚ್ಚಿದ್ದರು. ‘ಮೆಜೆಸ್ಟಿಕ್’ ಚಿತ್ರದ ಮೂಲಕ ಹೀರೋ ಆದರು. ಮೊದಲ ಸಿನಿಮಾದಲ್ಲೇ ದೊಡ್ಡ ಗೆಲುವು ಕಂಡರು.

‘ಕರಿಯ’, ‘ನಮ್ಮ ಪ್ರೀತಿಯ ರಾಮು’, ‘ಕಲಾಸಿಪಾಳ್ಯ’, ‘ಗಜ’, ಸೇರಿ ಅನೇಕ ಚಿತ್ರಗಳಲ್ಲಿ ದರ್ಶನ್ ನಟಿಸಿದ್ದಾರೆ. ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. 2023ರ ಕೊನೆಯಲ್ಲಿ ರಿಲೀಸ್ ಆದ ‘ಕಾಟೇರ’ ಚಿತ್ರ 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇದರಿಂದ ದರ್ಶನ್ ಅವರ ಖ್ಯಾತಿ ಹೆಚ್ಚಾಗಿದೆ. ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಗೆಲುವು ದರ್ಶನ್ ಬರ್ತ್​ಡೇ ಖುಷಿಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: ದರ್ಶನ್ ಬರ್ತ್​ಡೇ ಸಂದರ್ಭದಲ್ಲಿ ಬೆನ್ನಿಗೆ ‘ಕಾಟೇರ’ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

ದರ್ಶನ್ ಅವರ ಸಿಡಿಪಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಅನಾವರಣ ಮಾಡಲಾಗಿದೆ. ದರ್ಶನ್ ಗದೆ ಹಿಡಿದು ನಿಂತಿದ್ದಾರೆ. ಅವರ ಎದುರು ಅಭಿಮಾನಿಗಳು ಕೈ ಮುಗಿದು ನಿಂತಿದ್ದಾರೆ. ಹಿಂಭಾಗದಲ್ಲಿ ಡಿ ಬಾಸ್ ಎಂದು ಬರೆಯಲಾಗಿದೆ. ತುಗುದೀಪ ಕಲಾ ಮಂಡಳಿ ಎನ್ನುವ ಬೋರ್ಡ್ ಕೂಡ ಇದೆ. ಈ ಸಿಡಿಪಿ ಗಮನ ಸೆಳೆದಿದೆ.

ದರ್ಶನ್ ಅವರ ಹೆಸರಲ್ಲಿ ಸಾಕಷ್ಟು ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ದರ್ಶನ್ ಬರ್ತ್​ಡೇ ದಿನ ಅವರ ಮುಂದಿನ ಸಿನಿಮಾ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ಟೀಸರ್ ಕೂಡ ಅನಾವರಣ ಆಗಿದೆ. ಇದು ಅಭಿಮಾನಿಗಳ ಖುಷಿಯನ್ನು ದುಪಟ್ಟು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:30 am, Fri, 16 February 24

ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
"ಇಸ್ಪೀಟ್ ಆಟ ಆಡಲೇಬೇಕಾ ಸರ್​"? ಪೊಲೀಸರಿಗೆ ಮಕ್ಕಳ ಪ್ರಶ್ನೆ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?
ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?
ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡಬಾರದು: ಬಸನಗೌಡ ಯತ್ನಾಳ್
ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡಬಾರದು: ಬಸನಗೌಡ ಯತ್ನಾಳ್
ದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದೇನೆ: ರೇವಣ್ಣ
ದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದೇನೆ: ರೇವಣ್ಣ