ಧರ್ಮಣ್ಣನ ಡ್ಯುಯೆಟ್ ನೋಡಿ ನವಜೋಡಿಗಳು ನೋಡಲೇ ಬೇಕೆಂದ ಅಭಿಷೇಕ್ ಅಂಬರೀಷ್

Rajayoga: ಹಾಸ್ಯ ನಟ, ಪೋಷಕ ನಟನಾಗಿ ಪರಿಚಿತವಾಗಿರುವ ಧರ್ಮಣ್ಣ ಕಡೂರು ಇದೇ ಮೊದಲ ಬಾರಿಗೆ ನಾಯಕ ನಟನಾಗಿ 'ರಾಜಯೋಗ' ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಹಾಡನ್ನು ಅಭಿಷೇಕ್ ಅಂಬರೀಶ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಇದು ನವಜೋಡಿಗಳು ನೋಡಲೇ ಬೇಕಾದ ಹಾಡು ಎಂದಿದ್ದಾರೆ ಯಂಗ್ ರೆಬಲ್ ಸ್ಟಾರ್.

ಧರ್ಮಣ್ಣನ ಡ್ಯುಯೆಟ್ ನೋಡಿ ನವಜೋಡಿಗಳು ನೋಡಲೇ ಬೇಕೆಂದ ಅಭಿಷೇಕ್ ಅಂಬರೀಷ್
ರಾಜಯೋಗ
Follow us
ಮಂಜುನಾಥ ಸಿ.
|

Updated on: Oct 13, 2023 | 6:58 PM

ನಟ ಧರ್ಮಣ್ಣ ಕಡೂರು (Dharmanna Kaduru) ಅವರಿಗೆ ‘ರಾಜಯೋಗ’ ಪ್ರಾರಂಭವಾಗಿದೆ. ಪೋಷಕ ಪಾತ್ರ, ಹಾಸ್ಯ ಪಾತ್ರಗಳಿಗೆ ಸೀಮಿತವಾಗಿದ್ದ ಧರ್ಮಣ್ಣ ‘ರಾಜಯೋಗ’ ಸಿನಿಮಾ ಮೂಲಕ ನಾಯಕ ನಟನಾಗಿದ್ದಾರೆ. ‘ರಾಜಯೋಗ’ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ‘ರಾಜಯೋಗ’ ಸಿನಿಮಾ ಕೌಟುಂಬಿಕ ಸಿನಿಮಾ ಆಗಿದ್ದು ಭರಪೂರ ಹಾಸ್ಯವೂ ಇದೆ. ಟ್ರೈಲರ್ ಮೂಲಕ ನಿರೀಕ್ಷೆ ಮೂಡಿಸಿರುವ ‘ರಾಜಯೋಗ’ ಸಿನಿಮಾದ ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ.

ಧರ್ಮಣ್ಣರ ‘ರಾಜಯೋಗ’ ಸಿನಿಮಾದ ಮೊದಲ ಹಾಡನ್ನು ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಬಿಡುಗಡೆ ಮಾಡಿದ್ದಾರೆ. ರೊಮ್ಯಾಂಟಿಕ್ ಹಾಡು ಇದಾಗಿದ್ದು, ನವಜೋಡಿಯ ಭಾವನೆಗಳನ್ನು ಹಾಡು ಒಳಗೊಂಡಿದೆ. ಹಾಡು ಬಿಡುಗಡೆ ಮಾಡಿದ ಅಭೀಷೇಕ್ ಹಾಡನ್ನು ಬಹುವಾಗಿ ಮೆಚ್ಚಿಕೊಂಡಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ ಮಾತ್ರವಲ್ಲದೆ ಈ ಹಾಡನ್ನು ನವ ಜೋಡಿಗಳು ನೋಡಲೇ ಬೇಕು ಎಂದು ಒತ್ತಾಯಿಸಿದ್ದಾರೆ.

‘ರಾಜಯೋಗ’ ಸಿನಿಮಾವನ್ನು ಲಿಂಗರಾಜ ಉಚ್ಚಂಗಿ ದುರ್ಗ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಅಕ್ಷಯ್ ಎಸ್ ರಿಷಬ್ ಸಂಗೀತ ನೀಡಿದ್ದಾರೆ. ಸದ್ಯ ರಿಲೀಸ್ ಆಗಿರುವ ‘ಬಿ ಎಂ ಗಂಡು…’ ಹಾಡಿಗೆ ಲಿಂಗರಾಜು ಅವರೇ ಸಾಹಿತ್ಯ ಬರೆದಿದ್ದು ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮತ್ತು ಗಾಯಕಿ ಅನನ್ಯಾ ಭಟ್ ಹಾಡಿದ್ದಾರೆ. ಟ್ರೈಲರ್ ಮೂಲಕ ಗಮನ ಸೆಳೆದಿರುವ ‘ರಾಜಯೋಗ’ ಇದೀಗ ಹಾಡಿನ ಮೂಲಕವು ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ.

ಇದನ್ನೂ ಓದಿ:‘ಒಳ್ಳೇದಾಗ್ಲಿ ಅಂತ ಆಶೀರ್ವಾದ ಮಾಡಿ’: ‘ರಾಜಯೋಗ’ ಬಂದ ಮೇಲೆ ಮನವಿ ಮಾಡಿಕೊಂಡ ಧರ್ಮಣ್ಣ

ಅಂದಹಾಗೆ ನಿರ್ದೇಶಕ ಲಿಂಗರಾಜು ಅವರಿಗೆ ಇದು ಮೊದಲ ಸಿನಿಮಾ. ಈ ಮೊದಲು ಕಿರುತೆರೆಯಲ್ಲಿ ಕೆಲಸ ಮಾಡಿದ್ದ ಲಿಂಗರಾಜು, ‘ರಾಜಯೋಗ’ ಸಿನಿಮಾ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಸ್ಯಾಂಡ‌ವುಡ್‌ ಪ್ರವೇಶಿಸುತ್ತಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಧರ್ಮಣ್ಣ ಬಿಟ್ಟರೆ ಉಳಿದವರೆಲ್ಲ ಹೊಸಬರು. ಧರ್ಮಣ್ಣ ಅವರಿಗೆ ನಾಯಕಿಯಾಗಿ ನಿರೀಕ್ಷಾ ರಾವ್ ನಟಿಸಿದ್ದಾರೆ. ನಿರೀಕ್ಷಾ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದು ಧರ್ಮಣ್ಣ ಪತ್ನಿಯಾಗಿ ಮಿಂಚಿದ್ದಾರೆ.

ಕುಮಾರ ಕಂಠೀರವ, ಈ ಸಿನಿಮಾ ಶ್ರೀರಾಮ ರಕ್ಷಾ ಪ್ರೊಡಕ್ಷನ್‌ ಮೂಲಕ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವಿಶೇಷ ಎಂದರೆ ನಟ ಧರ್ಮಣ್ಣ ಈ ಸಿನಿಮಾ ಮೂಲಕ ನಿರ್ಮಾಪಕರಾಗಿಯೂ ಬಡ್ತಿ ಪಡೆದುಕೊಂಡಿದ್ದಾರೆ. ಈ ಸಿನಿಮಾದ ಸಹನಿರ್ಮಾಣ ಧರ್ಮಣ್ಣ ಅವರದ್ದೇ. ಇನ್ನುಳಿದಂತೆ ದೀಕ್ಷಿತ್ ಕೃಷ್ಣ, ಪ್ರಭು, ಲಿಂಗರಾಜು, ನೀರಜ್ ಗೌಡ ಕೂಡ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸದ್ಯ ಟ್ರೈಲರ್ ಮತ್ತು ಹಾಡು ಬಿಡುಗಡೆ ಆಗಿ ಸದ್ದು ಮಾಡುತ್ತಿರುವ ‘ರಾಜಯೋಗ’ ಸಿನಿಮಾ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್