AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ ಎದುರು ಮುಂದಿನ ಪ್ಲ್ಯಾನ್ ರಿವೀಲ್ ಮಾಡಿದ ಧ್ರುವಂತ್

ಎಲಿನಿನೇಷನ್ ಆದ ಬಳಿಕ ಬಿಗ್ ಬಾಸ್ ವೇದಿಕೆ ಕರೆಸೋದು ಸಂಪ್ರದಾಯ. ಅರ್ಧ ವಾರದಲ್ಲಿ ಧ್ರುವಂತ್ ಹೊರಕ್ಕೆ ಹೋಗಿರುವುದರಿಂದ ಅವರಿಗೆ ಸುದೀಪ್ ಜೊತೆ ಮಾತನಾಡಲು ಅವಕಾಶ ಸಿಕ್ಕಿರಲೇ ಇಲ್ಲ. ಈ ಕಾರಣಕ್ಕೆ ಈ ವಾರ ಅವರನ್ನು ವೇದಿಕೆ ಮೇಲೆ ಕರೆಸಲಾಯಿತು ಮತ್ತು ಸುದೀಪ್ ಜೊತೆ ಮಾತನಾಡಿದರು.

ಸುದೀಪ್ ಎದುರು ಮುಂದಿನ ಪ್ಲ್ಯಾನ್ ರಿವೀಲ್ ಮಾಡಿದ ಧ್ರುವಂತ್
ಧ್ರುವಂತ್-ಸುದೀಪ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 17, 2026 | 10:40 PM

Share

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಧ್ಯ ವಾರದಲ್ಲಿ ಧ್ರುವಂತ್ ಅವರು ಎಲಿಮಿನೇಟ್ ಆದರು. ಕಳೆದ ವಾರ ಕಡಿಮೆ ವೋಟ್ ಪಡೆದ ಅವರನ್ನು ಹೊರಕ್ಕೆ ಹಾಕಲಾಯಿತು. ಮನೆಯವರ ಜೊತೆ ಮಾತನಾಡಲು ಅವರಿಗೆ ಅವಕಾಶ ಸಿಗಲೇ ಇಲ್ಲ. ಈಗ ಅವರು ಕೂದಲನ್ನು ಕಟ್ ಮಾಡಿಕೊಂಡು ಹೊಸ ಸ್ಟೈಲ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದಕ್ಕೆ ಕಾರಣವನ್ನೂ ಅವರು ನೀಡಿದರು ಮತ್ತು ಮುಂದಿನ ಆಲೋಚನೆಯ ಬಗ್ಗೆಯೂ ಹೇಳಿದರು.

ಎಲಿನಿನೇಷನ್ ಆದ ಬಳಿಕ ಬಿಗ್ ಬಾಸ್ ವೇದಿಕೆ ಕರೆಸೋದು ಸಂಪ್ರದಾಯ. ಅರ್ಧ ವಾರದಲ್ಲಿ ಧ್ರುವಂತ್ ಹೊರಕ್ಕೆ ಹೋಗಿರುವುದರಿಂದ ಅವರಿಗೆ ಸುದೀಪ್ ಜೊತೆ ಮಾತನಾಡಲು ಅವಕಾಶ ಸಿಕ್ಕಿರಲೇ ಇಲ್ಲ. ಈ ಕಾರಣಕ್ಕೆ ಈ ವಾರ ಅವರನ್ನು ವೇದಿಕೆ ಮೇಲೆ ಕರೆಸಲಾಯಿತು ಮತ್ತು ಸುದೀಪ್ ಜೊತೆ ಮಾತನಾಡಿದರು.

‘ಇಲ್ಲಿಂದ ಹೊರ ಹೋಗುತ್ತಿದ್ದಂತೆ ಗಾಡಿನ ಚೇಸ್ ಮಾಡಿಕೊಂಡು ಬಂದರು. ಇದೊಂದು ಬ್ಯೂಟಿಫುಲ್ ಅನುಭವ. 10 ವರ್ಷದ ತಪಸ್ಸು. ನಾಲ್ಕು ತಿಂಗಳಲ್ಲಿ ಸಾಕಷ್ಟು ಸಿಕ್ಕಿತು. ಒಳಗೆ ಕಟಿಂಗ್ ಮಾಡಬೇಕು ಎಂದುಕೊಂಡಿದ್ದೆ ಆಗಿಲ್ಲ, ಹೀಗಾಗಿ ಹೊರಗೆ ಈ ಹೇರ್​ಸ್ಟೈಲ್ ಮಾಡಿಸಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಧ್ರುವಂತ್​​ಗೆ ‘ಸೀಸನ್ ಚಪ್ಪಾಳೆ’ ಕೊಟ್ಟಿದ್ದನ್ನು ಟೀಕಿಸಿದವರಿಗೆ ಕ್ಲ್ಯಾರಿಟಿ ಕೊಟ್ಟ ಸುದೀಪ್ ‘ಜನರ ಪ್ರತಿಕ್ರಿಯೆ ಬಗ್ಗೆ ನನಗೆ ಸಂತೋಷ ಇದೆ. ಜೈ ಮಹಾಕಾಲ್​​ನ ಬ್ರ್ಯಾಂಡ್ ಮಾಡಿದೀರಾ. ನಾನು ಒಳ್ಳೆಯ ಫಿಲ್ಮ್​​ ಮೇಕರ್ ಆಗಬೇಕು. ಸಿನಿಮಾ ರಂಗದಲ್ಲಿ ಮತ್ತಷ್ಟು ಕೆಲಸ ಮಾಡಬೇಕು’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.