ರಮೇಶ್ ಅರವಿಂದ್-ದಿಗಂತ್ ಈಗ ಅಣ್ಣ-ತಮ್ಮ; ‘ದೈಜಿ’ ಚಿತ್ರದಲ್ಲಿ ಒಟ್ಟಾಗಿ ನಟನೆ

ರಮೇಶ್ ಅರವಿಂದ್ ಮತ್ತು ರಾಧಿಕಾ ನಾರಾಯಣ್ ಅವರ ನಟನೆಯ ‘ದೈಜಿ’ ಚಿತ್ರಕ್ಕೆ ದಿಗಂತ್ ಸೇರ್ಪಡೆಯಾಗಿದ್ದಾರೆ. ಚಿತ್ರತಂಡ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದೆ. ರಮೇಶ್ ಅರವಿಂದ್ ಅವರ 106ನೇ ಚಿತ್ರ ಇದಾಗಿದೆ. ಶೇಕಡ 50ರಷ್ಟು ಚಿತ್ರೀಕರಣ ಮುಗಿದಿದೆ. ದಿಗಂತ್ ಅವರು ರಮೇಶ್ ಅರವಿಂದ್ ಅವರ ತಮ್ಮನ ಪಾತ್ರವನ್ನು ನಿರ್ವಹಿಸಲಿದ್ದಾರೆ.

ರಮೇಶ್ ಅರವಿಂದ್-ದಿಗಂತ್ ಈಗ ಅಣ್ಣ-ತಮ್ಮ; ‘ದೈಜಿ’ ಚಿತ್ರದಲ್ಲಿ ಒಟ್ಟಾಗಿ ನಟನೆ
ರಮೇಶ್ ಅರವಿಂದ್

Updated on: May 06, 2025 | 1:19 PM

‘ಶಿವಾಜಿ ಸುರತ್ಕಲ್’ ಹಾಗೂ ‘ಶಿವಾಜಿ ಸುರತ್ಕಲ್ 2’ ಸಿನಿಮಾಗಳು ಸೂಪರ್ ಹಿಟ್ ಆದ ಚಿತ್ರ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಆಕಾಶ್ ಶ್ರೀವತ್ಸ. ಇದರಲ್ಲಿ ರಮೇಶ್ ಅರವಿಂದ್ (Ramesh Aravind) ಅವರು ಶಿವಾಜಿ ಸುರತ್ಕಲ್ ಹೆಸರಿನ ಪಾತ್ರ ಮಾಡಿದ್ದರು. ರಾಧಿಕಾ ನಾರಾಯಣ್ ಶಿವಾಜಿಯ ಪತ್ನಿ ಪಾತ್ರ ಮಾಡಿದ್ದರು. ಈಗ ಇವರ ಕಾಂಬಿನೇಷನ್ ಮತ್ತೆ ಒಂದಾಗಿದೆ. ‘ದೈಜಿ’ ಹೆಸರಿನ ಚಿತ್ರವನ್ನು ಇವರು ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಈಗ ಹೊಸ ಸೇರ್ಪಡೆ ಆಗಿದೆ.  ದಿಗಂತ್ ಅವರು ತಂಡ ಸೇರಿಕೊಂಡಿದ್ದಾರೆ. ಈ ಪೋಸ್ಟರ್​ನ ತಂಡ ರಿಲೀಸ್ ಮಾಡಿದೆ.

ರಮೇಶ್ ಅರವಿಂದ್ ಅವರ 106ನೇ ಚಿತ್ರ ಇದು ಅನ್ನೋದು ವಿಶೇಷ. ರಮೇಶ್ ಅವರವಿಂದ್ ಅವರು ಇತ್ತೀಚಿನ ದಿನಗಳಲ್ಲಿ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ತಮಗೆ ಹೆಚ್ಚು ಸರಿ ಹೊಂದುವ ಕಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ನಟಿಸುತ್ತಾರೆ. ಅವರಿಗೆ ‘ದೈಜಿ’ ಸಿನಿಮಾ ಇಷ್ಟವಾಗಿದ್ದು, ಇದರಲ್ಲಿ ನಟಿಸುತ್ತಿದ್ದಾರೆ. ಈ ತಂಡಕ್ಕೆ ದಿಗಂತ್ ಅವರು ಸೇರ್ಪಡೆ ಆಗಿದೆ. ದಿಗಂತ್ ತೆರೆಮೇಲೆ ರಮೇಶ್ ಅರವಿಂದ್ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ದಿಗಂತ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಇದೆ. ಹೀರೋ ಪಾತ್ರಗಳಿಗೆ ಮಾತ್ರ ಸೀಮಿತವಾಗದೇ ಪೋಷಕ ಪಾತ್ರಗಳಲ್ಲಿ ದಿಗಂತ್ ಗಮನ ಸೆಳೆಯುತ್ತಿದ್ದಾರೆ. ಅವರ ಪಾತ್ರ ಸಿನಿಮಾದಲ್ಲಿ ಹೆಚ್ಚು ಹೈಲೈಟ್ ಆಗಲಿದೆ. ಈಗ ಅವರು ‘ದೈಜಿ’ ಚಿತ್ರದಲ್ಲಿ ವಿಭಿನ್ನ ರೀತಿಯ ಪಾತ್ರದಲ್ಲಿ ಜೊತೆಯಾಗಿ ಕಾಣಿಸಿ ಕೊಳ್ಳಲಿದ್ದಾರೆ.

ಇದನ್ನೂ ಓದಿ
ಜೀವನದಲ್ಲಿ ಇರೋ ಕೊನೆಯ ಆಸೆಯನ್ನು ಈಡೇರಿಸಿಕೊಂಡ ರಶ್ಮಿಕಾ ಮಂದಣ್ಣ
ಮೆಟ್ ಗಾಲಾ ರೆಡ್ ಕಾರ್ಪೆಟ್​ನಲ್ಲಿ ಶಾರುಖ್ ಖಾನ್ ಐಕಾನಿಕ್ ಪೋಸ್
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ
ಖ್ಯಾತ ನಿರ್ಮಾಪಕನ ಜೊತೆ ಪೋಸ್ ಕೊಟ್ಟ ಶ್ರೀಲೀಲಾ; ಕೇಳಿಬಂತು ಹೊಸ ಗಾಸಿಪ್

‘ಅಮೆರಿಕ ಅಮೆರಿಕ’ ಸಿನಿಮಾದಲ್ಲಿ ರಮೇಶ್ ಅರವಿಂದ್ ಅವರದ್ದು ಸೂರ್ಯ ಹೆಸರಿನ ಪಾತ್ರವಾದರೆ, ಕಥಾ ನಾಯಕಿ ಹೇಮಾ ಪ್ರಭಾತ್ ಅವರದ್ದು ಭೂಮಿಕಾ ಹೆಸರಿನ ಪಾತ್ರ. ಹೀಗಾಗಿ, ಇವರೆಡೂ ಪಾತ್ರಗಳು ಐಕಾನಿಕ್ ಎನಿಸಿಕೊಂಡಿವೆ. ಈಗ ‘ದೈಜಿ’ ಪಾತ್ರದಲ್ಲೂ ರಮೇಶ್ ಅರವಿಂದ್ ಅವರು ಸೂರ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರಾಧಿಕಾ ನಾರಾಯಣ್ ಅವರು ಭೂಮಿ ಪಾತ್ರದಲ್ಲಿ ಮಿಂಚಲಿದ್ದಾರೆ. ದಿಗಂತ್ ಅವರು ಗಗನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದರೆ ಈ ಮೂರು ಪಾತ್ರಗಳಿಗೆ ದೊಡ್ಡ ಸಂಬಂಧ ಇದೆ ಅನ್ನೋದು ಸ್ಪಷ್ಟವಾಗಿದೆ.

ಇದನ್ನೂ ಓದಿ: ರಮೇಶ್ ಅರವಿಂದ್ ಜನ್ಮದಿನದಂದು ಘೋಷಣೆ ಆಯ್ತು ಹೊಸ ಸಿನಿಮಾ; ಚಿತ್ರಕ್ಕೆ ‘ದೈಜಿ’ ಶೀರ್ಷಿಕೆ

‘ದೈಜಿ’ ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಶೇಕಡ 50ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಮುಂದಿನ ಹಂತದ ಶೂಟ್​ನಲ್ಲಿ ದಿಗಂತ್ ಭಾಗಿ ಆಗಲಿದ್ದಾರೆ. ಈ ಚಿತ್ರಕ್ಕೆ ಶ್ರೀಶಾ ಕುದುವಳ್ಳಿ ಛಾಯಾಗ್ರಹಣ ಇದೆ, ರವಿ ಕಶ್ಯಪ್ ಅವರು ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:57 pm, Tue, 6 May 25