- Kannada News Photo gallery Ramesh Aravind starrer Daiji movie muhurtha in Bengaluru Entertainment News in Kannada
ರಮೇಶ್ ನಟನೆಯ 106ನೇ ಸಿನಿಮಾ ‘ದೈಜಿ’; ಇಲ್ಲಿದೆ ಮುಹೂರ್ತದ ಫೋಟೋಗಳು
ನಟ ರಮೇಶ್ ಅರವಿಂದ್ ಅವರು ವಿಶೇಷವಾದ ಕಥೆ ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಅವರು ‘ದೈಜಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆದ ಮುಹೂರ್ತ ಸಮಾರಂಭದ ಫೋಟೋಗಳು ಇಲ್ಲಿವೆ. ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸ ಅವರು ನಿರ್ದೇಶನ ಮಾಡುತ್ತಿದ್ದಾರೆ.
Updated on: Jan 12, 2025 | 8:50 PM

‘ದೈಜಿ’ ಸಿನಿಮಾದ ಮುಹೂರ್ತವನ್ನು ಭಾನುವಾರ (ಜನವರಿ 12) ಬೆಳಕ್ಕೆ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನೆರವೇರಿಸಲಾಗಿದೆ. ಈ ಸಿನಿಮಾ ರಮೇಶ ಅರವಿಂದ್ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿರುವ 106ನೇ ಚಿತ್ರ ಎಂಬುದು ವಿಶೇಷ.

ಈ ಚಿತ್ರಕ್ಕೆ ರವಿಕಶ್ಯಪ್ ಅವರು ಬಂಡವಾಳ ಹೂಡುತ್ತಿದ್ದಾರೆ. ಆಕಾಶ್ ಶ್ರೀವತ್ಸ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಮೊದಲು ‘ಶಿವಾಜಿ ಸುರತ್ಕಲ್ 1’ ಮತ್ತು ‘ಶಿವಾಜಿ ಸುರತ್ಕಲ್ 2’ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದರು.

ರಮೇಶ್ ಅರವಿಂದ್ ಹಾಗೂ ಆಕಾಶ್ ಶ್ರೀವತ್ಸ ಅವರ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಮೂರನೇ ಸಿನಿಮಾ. ‘ದೈಜಿ’. ಮುಹೂರ್ತದ ವೇಳೆ ರಮೇಶ್ ಅರವಿಂದ್, ನಟಿ ರಾಧಿಕಾ ನಾರಾಯಣ ಮುಂತಾದವರು ಹಾಜರಿದ್ದರು.

ಈ ಮೊದಲು ಕೂಡ ರಮೇಶ್ ಅರವಿಂದ್ ಮತ್ತು ರಾಧಿಕಾ ನಾರಾಯಣ್ ಅವರು ‘ಶಿವಾಜಿ ಸುರತ್ಕಲ್’ ಸರಣಿ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಅವರಿಬ್ಬರು ಈಗ ‘ದೈಜಿ’ ಸಿನಿಮಾದಲ್ಲಿಯೂ ತೆರೆ ಹಂಚಿಕೊಳ್ಳುತ್ತಿದ್ದಾರೆ.

‘ದೈಜಿ’ ಸಿನಿಮಾಗೆ ಶ್ರೀಶ ಕುದುವಳ್ಳಿ ಛಾಯಾಗ್ರಾಹಣ ಮಾಡಲಿದ್ದಾರೆ. ಈ ಹಿಂದೆ ಶ್ರೀಶ ಅವರು ‘ಯಜಮಾನ’, ‘ಯುವ’ ಮುಂತಾದ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ‘ದೈಜಿ’ ಚಿತ್ರೀಕರಣ ಶೀಘ್ರದಲ್ಲಿ ಶುರು ಆಗಲಿದೆ.



















