AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್ ನಟನೆಯ 106ನೇ ಸಿನಿಮಾ ‘ದೈಜಿ’; ಇಲ್ಲಿದೆ ಮುಹೂರ್ತದ ಫೋಟೋಗಳು

ನಟ ರಮೇಶ್​ ಅರವಿಂದ್​ ಅವರು ವಿಶೇಷವಾದ ಕಥೆ ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಅವರು ‘ದೈಜಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆದ ಮುಹೂರ್ತ ಸಮಾರಂಭದ ಫೋಟೋಗಳು ಇಲ್ಲಿವೆ. ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಮದನ್​ ಕುಮಾರ್​
|

Updated on: Jan 12, 2025 | 8:50 PM

Share
Ramesh Aravind (8)

‘ದೈಜಿ’ ಸಿನಿಮಾದ ಮುಹೂರ್ತವನ್ನು ಭಾನುವಾರ (ಜನವರಿ 12) ಬೆಳಕ್ಕೆ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನೆರವೇರಿಸಲಾಗಿದೆ. ಈ ಸಿನಿಮಾ ರಮೇಶ ಅರವಿಂದ್ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿರುವ 106ನೇ ಚಿತ್ರ ಎಂಬುದು ವಿಶೇಷ.

1 / 5
Ramesh Aravind (5)

ಈ ಚಿತ್ರಕ್ಕೆ ರವಿಕಶ್ಯಪ್ ಅವರು ಬಂಡವಾಳ ಹೂಡುತ್ತಿದ್ದಾರೆ. ಆಕಾಶ್ ಶ್ರೀವತ್ಸ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಈ ಮೊದಲು ‘ಶಿವಾಜಿ ಸುರತ್ಕಲ್ 1’ ಮತ್ತು ‘ಶಿವಾಜಿ ಸುರತ್ಕಲ್ 2’ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದರು.

2 / 5
Ramesh Aravind (7)

ರಮೇಶ್ ಅರವಿಂದ್ ಹಾಗೂ ಆಕಾಶ್ ಶ್ರೀವತ್ಸ ಅವರ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಮೂರನೇ ಸಿನಿಮಾ. ‘ದೈಜಿ’. ಮುಹೂರ್ತದ ವೇಳೆ ರಮೇಶ್ ಅರವಿಂದ್, ನಟಿ ರಾಧಿಕಾ ನಾರಾಯಣ ಮುಂತಾದವರು ಹಾಜರಿದ್ದರು.

3 / 5
Ramesh Aravind (6)

ಈ ಮೊದಲು ಕೂಡ ರಮೇಶ್​ ಅರವಿಂದ್ ಮತ್ತು ರಾಧಿಕಾ ನಾರಾಯಣ್ ಅವರು ‘ಶಿವಾಜಿ ಸುರತ್ಕಲ್’ ಸರಣಿ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಅವರಿಬ್ಬರು ಈಗ ‘ದೈಜಿ’ ಸಿನಿಮಾದಲ್ಲಿಯೂ ತೆರೆ ಹಂಚಿಕೊಳ್ಳುತ್ತಿದ್ದಾರೆ.

4 / 5
Ramesh Aravind (4)

‘ದೈಜಿ’ ಸಿನಿಮಾಗೆ ಶ್ರೀಶ ಕುದುವಳ್ಳಿ ಛಾಯಾಗ್ರಾಹಣ ಮಾಡಲಿದ್ದಾರೆ. ಈ ಹಿಂದೆ ಶ್ರೀಶ ಅವರು ‘ಯಜಮಾನ’, ‘ಯುವ’ ಮುಂತಾದ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ‘ದೈಜಿ’ ಚಿತ್ರೀಕರಣ ಶೀಘ್ರದಲ್ಲಿ ಶುರು ಆಗಲಿದೆ.

5 / 5
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us