ಬಿಗ್ ಬಾಸ್ ಕಾರ್ಯಕ್ರಮದಿಂದ ಜನಪ್ರಿಯತೆ ಹೆಚ್ಚಿಸಿಕೊಂಡ ನಟಿ ದಿವ್ಯಾ ಸುರೇಶ್ (Divya Suresh) ಅವರು ಈಗ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ಅಭಿನಯಿಸಿರುವ ಹೊಸ ಸಿನಿಮಾ ‘ರೌಡಿ ಬೇಬಿ’ ಬಿಡುಗಡೆಗೆ ಸಜ್ಜಾಗಿದೆ. ಫೆ.11ರಂದು ಈ ಚಿತ್ರ ರಿಲೀಸ್ ಆಗಲಿದೆ. ಫೆ.3ರಂದು ‘ರೌಡಿ ಬೇಬಿ’ (Rowdy Baby Movie) ಟ್ರೇಲರ್ ಬಿಡುಗಡೆ ಮಾಡಲಾಗಿದೆ. ‘ಮದಗಜ’ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಂಜಯ್ ಗೌಡ, ರಘು ಗೌಡ, ವಿತರಕ ಸುರೇಶ್ ಮುಂತಾದವರು ಉಪಸ್ಥಿತರಿದ್ದರು. ಈ ಸಿನಿಮಾದಲ್ಲಿ ದಿವ್ಯಾ ಸುರೇಶ್ ಜೊತೆ ಎಸ್.ಎಸ್. ರವಿ ಗೌಡ (SS Ravi Gowda) ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಹೀರ್ ಕೌರ್, ಅಮಿತ್ ವಿ., ಕೆಂಪೇಗೌಡ, ಅರುಣಾ ಬಾಲರಾಜ್, ಶ್ರೀನಾಥ್ ವಸಿಷ್ಠ, ಅವಿನಾಶ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. Epuru Krishna ನಿರ್ದೇಶನ ಮಾಡಿದ್ದು, ಅರಮಾನ್ ಮೆರುಗು ಸಂಗೀತ ನೀಡಿದ್ದಾರೆ. ವಾರ್ ಫೂಟ್ ಸ್ಟುಡಿಯೋಸ್ ಮತ್ತು ಸುಮುಖ ಎಂಟರ್ಟೇನರ್ಸ್ ಸಂಸ್ಥೆ ಮೂಲಕ ‘ರೌಡಿ ಬೇಬಿ’ ಚಿತ್ರ ತಯಾರಾಗಿದೆ.
‘ಎಲ್ಲಿ ಪ್ರೀತಿ ಇರುತ್ತೋ ಅಲ್ಲಿ ನೋವು ಇದ್ದೇ ಇರುತ್ತೆ ಅನ್ನೋದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಎಲ್ಲರೂ ಫಸ್ಟ್ ಲವ್ಗೆ ಹೆಚ್ಚು ಮಹತ್ವ ನೀಡುತ್ತಾರೆ. ಆದರೆ ಒಬ್ಬರಿಗೆ ಎಷ್ಟೇ ಬಾರಿ ಪ್ರೀತಿ ಆದರೂ ಅದರ ತೀವ್ರತೆ ಅದೇ ರೀತಿ ಇರುತ್ತೆ ಎಂಬ ಪರಿಕಲ್ಪನೆಯನ್ನು ಇದರಲ್ಲಿ ಹೇಳಿದ್ದೇನೆ’ ಎಂದಿದ್ದಾರೆ ನಿರ್ದೇಶಕರು. ಈ ಸಿನಿಮಾದ ಟ್ರೇಲರ್ನಲ್ಲಿ ದಿವ್ಯಾ ಸುರೇಶ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳ ವಲಯದಲ್ಲಿ ಈ ಟ್ರೇಲರ್ ವೈರಲ್ ಆಗಿದೆ.
ಟ್ರೇಲರ್ ರಿಲೀಸ್ ಆಗಿದ್ದಕ್ಕೆ ದಿವ್ಯಾ ಸುರೇಶ್ ಖುಷಿ ಆಗಿದ್ದಾರೆ. ‘ಕೊರೊನಾ ಹಾವಳಿ ಕಡಿಮೆ ಆಗಿದ್ದು ನಮ್ಮ ಸಿನಿಮಾ ರಿಲೀಸ್ ಆಗುತ್ತಿರುವುದು ಸಂತಸ ತಂದಿದೆ. ಟೈಟಲ್ ರೀತಿಯೇ ನನ್ನ ಪಾತ್ರ ರೌಡಿ ಬೇಬಿ ರೀತಿ ಇದೆ. ಪ್ರತಿ ಕಾಲೇಜ್ ಗ್ಯಾಂಗ್ನಲ್ಲಿ ಒಬ್ಬಳು ಹುಡುಗಿ ಆ ಥರ ಇರುತ್ತಾಳೆ. ಆ ಪಾತ್ರವನ್ನು ನಾನು ಮಾಡಿದ್ದೀನಿ’ ಎಂದಿದ್ದಾರೆ ದಿವ್ಯಾ ಸುರೇಶ್.
‘ಸಿನಿಮಾದವರ ನಡುವೆ ಯಾವುದೇ ಬೇಧ-ಭಾವ ಇಲ್ಲ. ನಾವೆಲ್ಲ ಕಲಾದೇವತೆಯ ಮಕ್ಕಳು. ಕನ್ನಡದ ಸಿನಿಮಾಗಳು ಹೆಚ್ಚು ಬೆಳೆಯಬೇಕು. ಸಿನಿಮಾ ಮಾಡುವುದು ಎಷ್ಟು ಕಷ್ಟ ಇದೆಯೋ, ರಿಲೀಸ್ ಮಾಡುವುದು ಅದಕ್ಕಿಂತ ಹೆಚ್ಚು ಕಷ್ಟ. ರಿಲೀಸ್ ಸಮಯದಲ್ಲಿ ಕಲಾವಿದರು ಜೊತೆಯಲ್ಲಿ ನಿಂತು ಪ್ರಚಾರ ಮಾಡಬೇಕು’ ಎಂದು ಉಮಾಪತಿ ಶ್ರೀನಿವಾಸ ಗೌಡ ಹೇಳಿದರು.
ಇದನ್ನೂ ಓದಿ:
ಅಪಘಾತ ಸಂಭವಿಸಿದ್ದು ಹೇಗೆ? ಟಿವಿ9ಗೆ ಎಲ್ಲವನ್ನೂ ವಿವರಿಸಿದ ದಿವ್ಯಾ ಸುರೇಶ್
Divya Suresh: ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ಗೆ ಅಪಘಾತ; ಈಗ ಹೇಗಿದೆ ಪರಿಸ್ಥಿತಿ?