Fact Check: ಮಾರಾಟಕ್ಕಿದೆ ಬೆಂಗಳೂರಿನ ಐಕಾನಿಕ್ ಸಂಪಿಗೆ ಥಿಯೇಟರ್?
ಬೆಂಗಳೂರಿನ ಮಲ್ಲೇಶ್ವರದಲ್ಲಿ ಸಂಪಿಗೆ ಥಿಯೇಟರ್ ಇದೆ. ಹಲವು ವರ್ಷಗಳ ಇತಿಹಾಸ ಹೊಂದಿರುವ ಈ ಥಿಯೇಟರ್ ಶೀಘ್ರವೇ ಮುಚ್ಚಲಿದೆ ಎಂದು ಸುದ್ದಿ ಹರಿದಾಡಿತ್ತು. ಇದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ. ಸ್ವತಃ ಸಂಪಿಗೆ ಥಿಯೇಟರ್ ಮಾಲೀಕ ರಮೇಶ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳು ಮುಚ್ಚುತ್ತಿವೆ. ಇದಕ್ಕೆ ಕಾರಣಗಳು ಹಲವು. ಸಿನಿಮಾ ನೋಡುಗರ ಸಂಖ್ಯೆ ಕಡಿಮೆ ಆಗಿದೆ ಎಂಬುದು ಅನೇಕರ ವಾದ. ಈ ಕಾರಣದಿಂದಲೇ ಬಿಗ್ ಬಜೆಟ್ ಸಿನಿಮಾಗಳು ಮಾತ್ರ ಬಂಗಾರದ ಬೆಳೆ ತೆಗೆಯುತ್ತಿವೆ. ಕಡಿಮೆ ಬಜೆಟ್ನ ಸಿನಿಮಾಗಳು ಯಶಸ್ಸು ಕಾಣಲು ಪರದಾಡುತ್ತಿವೆ. ಹೀಗಾಗಿ, ಬೆಂಗಳೂರಿನ ಐಕಾನಿಕ್ ಥಿಯೇಟರ್ಗಳಿಗೆ ಬೀಗ ಬೀಳುತ್ತಿದೆ. ಆ ಜಾಗದಲ್ಲಿ ಶಾಪಿಂಗ್ ಮಾಲ್ಗಳು, ಕಾಂಪ್ಲೆಕ್ಸ್ಗಳು ತಲೆ ಎತ್ತುತ್ತಿವೆ. ಹೀಗಿರುವಾಗಲೇ ಬೆಂಗಳೂರಿನ ಐಕಾನಿಕ್ ಸಿಂಗಲ್ ಸ್ಕ್ರೀನ್ ಥಿಯೇಟರ್ ಮುಚ್ಚುತ್ತಿದಿಯೇ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿ ಸಂಪಿಗೆ ಥಿಯೇಟರ್ ಇದೆ. ಹಲವು ವರ್ಷಗಳ ಇತಿಹಾಸ ಹೊಂದಿರುವ ಈ ಥಿಯೇಟರ್ ಶೀಘ್ರವೇ ಮುಚ್ಚಲಿದೆ ಎಂದು ಸುದ್ದಿ ಹರಿದಾಡಿತ್ತು. ಇದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ. ಸ್ವತಃ ಸಂಪಿಗೆ ಥಿಯೇಟರ್ ಮಾಲೀಕ ರಮೇಶ್ ಈ ಬಗ್ಗೆ ‘ಟಿವಿ9 ಕನ್ನಡ ಡಿಜಿಟಲ್’ಗೆ ಸ್ಪಷ್ಟನೆ ನೀಡಿದ್ದಾರೆ.
‘ನಾವು ಥಿಯೇಟರ್ನ ಮಾರಾಟ ಮಾಡುತ್ತಿಲ್ಲ. ಅದು ವದಂತಿ ಅಷ್ಟೇ. ಥಿಯೇಟರ್ನಲ್ಲಿ ಪುಷ್ಪ 2 ಚಿತ್ರದ ತಮಿಳು ಹಾಗೂ ತೆಲುಗು ವರ್ಷನ್ ಪ್ರದರ್ಶನ ಕಾಣುತ್ತಿದೆ’ ಎಂದಿದ್ದಾರೆ ರಮೇಶ್. ಈ ಚಿತ್ರಮಂದಿರ ಆರಂಭ ಆಗಿದ್ದು 1975ರಲ್ಲಿ. ಬೆಂಗಳೂರಿನ ನಗರ ಭಾಗದಲ್ಲಿ ಈ ಥಿಯೇಟರ್ ಇದ್ದು ಅದೆಷ್ಟೋ ಸಿನಿಮಾಗಳು ಇಲ್ಲಿ ಶತಕ ದಿನದ ಸಂಭ್ರಮಾಚರಣೆ ಆಚರಿಸಿಕೊಂಡಿವೆ.
Sampige Theatre is for Sale!!!
Someone from our industry should consider buying this if it’s genuinely up for sale, before superstars from other states step in and turn it into a multiplex. pic.twitter.com/ybCHJeslcI
— Bhargavi (@IamHCB) December 7, 2024
ಸ್ಯಾಂಡಲ್ವುಡ್ನ ಹೃದಯಭಾಗ ಎನಿಸಿಕೊಂಡಿರೋ ಗಾಂಧಿ ನಗರದಲ್ಲಿ ಈ ಮೊದಲು ಹಲವು ಥಿಯೇಟರ್ಗಳು ಇದ್ದವು. ಅವುಗಳು ಮುಚ್ಚುತ್ತಿವೆ. ಬೆಂಗಳೂರಿನ ಐಕಾನಿಕ್ ಥಿಯೇಟರ್ ಎನಿಸಿಕೊಂಡಿದ್ದ ಕಾವೇರಿ ಚಿತ್ರಮಂದಿರ ಕೂಡ ಇತ್ತೀಚೆಗೆ ಬಾಗಿಲು ಹಾಕಿದೆ.
ಇದನ್ನೂ ಓದಿ: ಕಾವೇರಿ ಥಿಯೇಟರ್ ನೆಲಸಮ; ಏಕಪರದೆ ಚಿತ್ರಮಂದಿರಗಳ ಅಂತ್ಯದಿಂದ ಪ್ರೇಕ್ಷಕರ ಜೇಬಿಗೆ ಕತ್ತರಿ
ಸಿಂಗಲ್ಸ್ಕ್ರೀನ್ ಮುಚ್ಚಲು ಕಾರಣ?
ಏಕಪರದೆ ಚಿತ್ರಮಂದಿರಗಳಿಗೆ ಈಗ ಕಾಲ ಇಲ್ಲ ಎಂಬಂತೆ ಆಗಿದೆ. ಬಹುತೇಕ ಚಿತ್ರಮಂದಿರ 700, 800 ಅಥವಾ 1000 ಸೀಟ್ಗಳನ್ನು ಹೊಂದಿರುತ್ತವೆ. ಆದರೆ ಈಗಿರೋ ಪರಿಸ್ಥಿತಿಯಲ್ಲಿ ಅವು ಹೌಸ್ಫುಲ್ ಆಗೋದು ಕಷ್ಟ. ಈಗ ಆ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:13 pm, Sat, 7 December 24