ರಶ್ಮಿಕಾ ಮಂದಣ್ಣರನ್ನು ನೋಡಲು ಟ್ರೈನ್, ಗೂಡ್ಸ್ ಹತ್ತಿ ಕೊಡಗಿಗೆ ಬಂದ ಅಭಿಮಾನಿ.. ಆದ್ರೆ ಪೊಲೀಸರ ಕೈಗೆ ಸಿಕ್ಕಿ ವಾಪಸ್ ಆದ

| Updated By: ಆಯೇಷಾ ಬಾನು

Updated on: Jun 23, 2021 | 12:49 PM

Rashmika Mandanna: ಆಕಾಶ್ ತ್ರಿಪಾಟಿ ಎಂಬ ಅಭಿಮಾನಿ ತೆಲಂಗಾಣದಿಂದ ನಟಿ ರಶ್ಮಿಕಾಳ ಮನೆ ಹುಡುಕಾಡುತ್ತ ಬಂದಿದ್ದಾನೆ. ರಶ್ಮಿಕಾ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಗ್ಗುಲದಲ್ಲಿರುತ್ತಾರೆಂದು ತಿಳಿದು ಹೈದರಾಬಾದ್ನಿಂದ ಮೈಸೂರಿಗೆ ರೈಲಿನಲ್ಲಿ ಬಂದು ಅಲ್ಲಿಂದ ಗೂಡ್ಸ್ ಆಟೋದಲ್ಲಿ ಕೊಡಗಿನ ವಿರಾಜಪೇಟೆಗೆ ಬಂದಿದ್ದಾನೆ.

ರಶ್ಮಿಕಾ ಮಂದಣ್ಣರನ್ನು ನೋಡಲು ಟ್ರೈನ್, ಗೂಡ್ಸ್ ಹತ್ತಿ ಕೊಡಗಿಗೆ ಬಂದ ಅಭಿಮಾನಿ.. ಆದ್ರೆ ಪೊಲೀಸರ ಕೈಗೆ ಸಿಕ್ಕಿ ವಾಪಸ್ ಆದ
ರಶ್ಮಿಕಾ ಮಂದಣ್ಣ
Follow us on

ಮಡಿಕೇರಿ: ಕರುನಾಡ ಕ್ರಶ್, ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣರನ್ನು ನೋಡಲು ಅಭಿಮಾನಿಯೊಬ್ಬ ತೆಲಂಗಾಣದಿಂದ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮಕ್ಕೆ ಹುಡುಕಿಕೊಂಡು ಬಂದಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ತಮ್ಮ ಮೆಚ್ಚಿನ ನಟ-ನಟಿಯರನ್ನು ಭೇಟಿ ಮಾಡಬೇಕು ಎಂಬುವುದು ಅದೆಷ್ಟೋ ಅಭಿಮಾನಿಗಳ ಕನಸಾಗಿರುತ್ತೆ. ಸಿನಿಮಾ ತಾರೆಯರ ಮೇಲಿನ ಅಭಿಮಾನ ಹೆಚ್ಚಾಗಿ ಅಭಿಮಾನಿಗಳು ಹುಚ್ಚುಚ್ಚಾಗಿ ವರ್ತಿಸುವ ಘಟನೆಗಳನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ನಡೆದಿದ್ದು ಬೇರೆ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟಿಯನ್ನು ನೋಡಲು ಮಡಿಕೇರಿಗೆ ಬಂದು ಪೊಲೀಸರ ಕೈಗೆ ಸಿಕ್ಕಿ ಬುದ್ದಿವಾದ ಹೇಳಿಸಿಕೊಂಡಿದ್ದಾನೆ.

ಆಕಾಶ್ ತ್ರಿಪಾಟಿ ಎಂಬ ಅಭಿಮಾನಿ ತೆಲಂಗಾಣದಿಂದ ನಟಿ ರಶ್ಮಿಕಾಳ ಮನೆ ಹುಡುಕಾಡುತ್ತ ಬಂದಿದ್ದಾನೆ. ರಶ್ಮಿಕಾ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಗ್ಗುಲದಲ್ಲಿರುತ್ತಾರೆಂದು ತಿಳಿದು ಹೈದರಾಬಾದ್ನಿಂದ ಮೈಸೂರಿಗೆ ರೈಲಿನಲ್ಲಿ ಬಂದು ಅಲ್ಲಿಂದ ಗೂಡ್ಸ್ ಆಟೋದಲ್ಲಿ ಕೊಡಗಿನ ವಿರಾಜಪೇಟೆಗೆ ಬಂದಿದ್ದಾನೆ. ಅಲ್ಲಿ ಆಕಾಶ್ ಸಿಕ್ಕ ಸಿಕ್ಕವರಿಗೆ ರಶ್ಮಿಕಾರ ಮನೆ ಎಲ್ಲಿ ಎಂದು ಕೇಳುತ್ತ ಅಲೆದಾಡಿದ್ದಾನೆ. ಈತನ ವರ್ತನೆ ಕಂಡು ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಆಕಾಶ್ನನ್ನು ವಿರಾಜಪೇಟೆ ಪೊಲೀಸರು ವಶಕ್ಕೆ ಪಡೆದ್ರು. ವಿಚಾರಣೆ ವೇಳೆ ರಶ್ಮಿಕಾ ನೋಡಲು ಬಂದಿರುವುದಾಗಿ ಆಕಾಶ್ ಹೇಳಿದ್ದಾನೆ.

ಸದ್ಯ ಆಕಾಶ್‌ಗೆ ಬುದ್ಧಿವಾದ ಹೇಳಿ ಪೊಲೀಸರು ಆತನನ್ನು ವಾಪಸ್ ತೆಲಂಗಾಣಕ್ಕೆ ಹೋಗುವಂತೆ ತಿಳಿಸಿದ್ದಾರೆ. ಅದರಂತೆಯೇ ಆಕಾಶ್ ಕೂಡ ತೆಲಂಗಾಣಕ್ಕೆ ಮರಳಿದ್ದಾನೆ. ಪ್ರಸ್ತುತ ರಶ್ಮಿಕಾ ಮಂದಣ್ಣ ತಮ್ಮ ಹಿಂದಿ ಸಿನಿಮಾದ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳಿದ್ದು ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.

ಇದನ್ನೂ ಓದಿ: ವಿಜಯ್​ ದೇವರಕೊಂಡ ಜೊತೆ ಸೇರಿಕೊಂಡು ಸೈಲೆಂಟಾಗಿ ಮತ್ತೊಂದು ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ

Published On - 10:57 am, Wed, 23 June 21