AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ದೇಶನಕ್ಕಿಳಿದ ಮಿಮಿಕ್ರಿ ದಯಾನಂದ್; ಎರಡೇ ಪಾತ್ರಗಳ ಮೂಲಕ ಸಾಗಲಿದೆ ಸಿನಿಮಾ

ಲಾಕ್ ಡೌನ್ ತೆರವು ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಿದೆ. ಸಿನಿಮಾ ಮಂದಿರ ಓಪನ್​ ಮಾಡಲು ಅನುಮತಿ ದೊರಕಿದ ಕೂಡಲೆ ಥಿಯೇಟರ್​ ಹಾಗೂ ಓಟಿಟಿ ಫ್ಲಾಟ್ ಫಾರಂನಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ನಿರ್ದೇಶನಕ್ಕಿಳಿದ ಮಿಮಿಕ್ರಿ ದಯಾನಂದ್; ಎರಡೇ ಪಾತ್ರಗಳ ಮೂಲಕ ಸಾಗಲಿದೆ ಸಿನಿಮಾ
ನಿರ್ದೇಶನಕ್ಕಿಳಿದ ಮಿಮಿಕ್ರಿ ದಯಾನಂದ್; ಎರಡೇ ಪಾತ್ರಗಳ ಮೂಲಕ ಸಾಗಲಿದೆ ಸಿನಿಮಾ
ರಾಜೇಶ್ ದುಗ್ಗುಮನೆ
|

Updated on: Jun 23, 2021 | 4:25 PM

Share

 ಮಿಮಿಕ್ರಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ದಯಾನಂದ್. ಅವರು ಮಿಮಿಕ್ರಿ ದಯಾನಂದ್ ಎಂದೇ ಫೇಮಸ್. ಈಗ ಅವರು ನಿರ್ದೇಶನಕ್ಕೆ ಇಳಿದಿದ್ದಾರೆ. ಲಾಕ್​ಡೌನ್​ ಟೈಮನಲ್ಲೇ ಸಿನಿಮಾ ಕೂಡ ಸಿದ್ಧಪಡಿಸಿದ್ದಾರೆ.

ಜೀವನದ ಅನಿರೀಕ್ಷಿತ ತಿರುವುಗಳು ಬದುಕಿನ ಗತಿಯನ್ನೇ ಬದಲಿಸಿ, ಯಾರೂ ಕಲಿಸದ ಪಾಠವನ್ನು ಕಲಿಸಿಬಿಡುತ್ತದೆ. ಇಂತಹ ಎಳೆಯೊಂದು, ಕುತೂಹಲ ಹಿಡಿದಿಟ್ಟುಕೊಂಡು ‘ಅನಿರೀಕ್ಷಿತ’ ಚಿತ್ರ ನಿರ್ದೇಶನ ಮಾಡಿದ್ದಾರೆ ದಯಾನಂದ್. ಎರಡು ಪಾತ್ರಗಳನ್ನಿಟ್ಟುಕೊಂಡು ಒಂದೇ ಚಿತ್ರೀಕರಣ ಸ್ಥಳವನ್ನು ನಾಲ್ಕು ಲೊಕೇಶನ್​​ಗಳಂತೆ ಬಳಸಲಾಗಿದೆ.

ಲಾಕ್ ಡೌನ್ ತೆರವು ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಿದೆ. ಸಿನಿಮಾ ಮಂದಿರ ಓಪನ್​ ಮಾಡಲು ಅನುಮತಿ ದೊರಕಿದ ಕೂಡಲೆ ಥಿಯೇಟರ್​ ಹಾಗೂ ಓಟಿಟಿ ಫ್ಲಾಟ್ ಫಾರಂನಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

‘ಅನಿರೀಕ್ಷಿತ’ ಚಿತ್ರದ ಮೊದಲ ಪೋಸ್ಟರನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರು ಬಿಡುಗಡೆ ಮಾಡಿದ್ದಾರೆ. ಎರಡು ಹಾಗೂ ಮೂರನೇ ಪೋಸ್ಟರನ್ನು ಗಿರಿಜಾ ಲೋಕೇಶ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಅನಾವರಣಗೊಳಿಸಿದ್ದಾರೆ. ಸದ್ಯದಲ್ಲೇ ಟ್ರೇಲರ್ ಸಹ ಬಿಡುಗಡೆಯಾಗಲಿದೆ.

ಎಸ್.ಕೆ.ಟಾಕೀಸ್ ಲಾಂಛನದಲ್ಲಿ ‌ಶಾಂತಕುಮಾರ್‌ ನಿರ್ಮಿಸಿರುವ ಈ‌ ಚಿತ್ರಕ್ಕೆ ಸಂತೋಷ್ ಕೊಡಂಕೇರಿ, ರಘು ಎಸ್ ಹಾಗೂ ಮಿಮಿಕ್ರಿ ದಯಾನಂದ್ ಸಹ ನಿರ್ಮಾಪಕರು.‌ ಮಿಮಿಕ್ರಿ ದಯಾನಂದ್ ಅವರೇ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಯನ್ನು ನೆಳ್ಳುಳ್ಳಿ ರಾಜಶೇಖರನ್ ಬರೆದಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ ಹಾಗೂ ರಘು ಅವರ ಸಂಕಲನ ಈ ಚಿತ್ರಕ್ಕಿದೆ.‌ ಚಿತ್ರದಲ್ಲಿ ಕೇವಲ ಎರಡು ಪಾತ್ರಗಳಿದ್ದು,‌ ಮಿಮಿಕ್ರಿ ದಯಾನಂದ್ ಹಾಗೂ ಭಾಮ ಅಭಿನಯಿಸಿದ್ದಾರೆ.

ಇದನ್ನೂ ಓದಿ: Bigg Boss Kannada 8: ಬಿಗ್​ ಬಾಸ್​ ಮೊದಲ ದಿನದ ಸಂಚಿಕೆಯಲ್ಲಿ ಏನೆಲ್ಲಾ ಇರಲಿದೆ ಗೊತ್ತಾ?

ಬಿಗ್​ ಬಾಸ್​ ಬಗ್ಗೆ ಕಿಚ್ಚ ಸುದೀಪ್​ ಉತ್ಸಾಹದ ಮಾತು; ಹೆಚ್ಚು ಖುಷಿ ಆಗಿದ್ದು ನಟಿ ಜೆನಿಲಿಯಾ