Kantara: ‘ಕಾಂತಾರ ಕಥೆ ಗಿಮಿಕ್​, ಹೀರೋ ಪಾತ್ರ ಹಾಸ್ಯಾಸ್ಪದ’: ಕಟು ಟೀಕೆ ಮಾಡಿದ ನಿರ್ದೇಶಕ ಅಭಿರೂಪ್​ ಬಸು

| Updated By: ಮದನ್​ ಕುಮಾರ್​

Updated on: Oct 28, 2022 | 3:19 PM

Abhiroop Basu | Rishab Shetty: ‘ಕಾಂತಾರ’ ಚಿತ್ರವನ್ನು ನಿರ್ದೇಶಕ ಅಭಿರೂಪ್​ ಬಸು ಖಾರವಾಗಿ ಟೀಕಿಸಿದ್ದಾರೆ. ಈ ಸಿನಿಮಾದಲ್ಲಿನ ಅನೇಕ ಅಂಶಗಳ ಕುರಿತು ಅವರು ತಕರಾರು ತೆಗೆದಿದ್ದಾರೆ.

Kantara: ‘ಕಾಂತಾರ ಕಥೆ ಗಿಮಿಕ್​, ಹೀರೋ ಪಾತ್ರ ಹಾಸ್ಯಾಸ್ಪದ’: ಕಟು ಟೀಕೆ ಮಾಡಿದ ನಿರ್ದೇಶಕ ಅಭಿರೂಪ್​ ಬಸು
ಅಭಿರೂಪ್ ಬಸು, ರಿಷಬ್ ಶೆಟ್ಟಿ
Follow us on

ಕನ್ನಡದ ‘ಕಾಂತಾರ’ (Kantara) ಸಿನಿಮಾಗೆ ದೇಶಾದ್ಯಂತ ಮೆಚ್ಚುಗೆ ಸಿಕ್ಕಿದೆ. ಈ ಚಿತ್ರ ನೋಡಿದ ಬಹುತೇಕ ಎಲ್ಲರೂ ಹೊಗಳಿದ್ದಾರೆ. ಪ್ರಭಾಸ್​, ಅನುಷ್ಕಾ ಶೆಟ್ಟಿ, ಕಂಗನಾ ರಣಾವತ್, ರಜನಿಕಾಂತ್​, ವಿವೇಕ್​ ಅಗ್ನಿಹೋತ್ರಿ ಮುಂತಾದ ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೊಂದು ವರ್ಗದ ಜನರು ಈ ಸಿನಿಮಾದ ಕೆಲವು ಅಂಶಗಳ ಬಗ್ಗೆ ತಕರಾರು ತೆಗೆದಿದ್ದಾರೆ. ರಿಷಬ್​ ಶೆಟ್ಟಿ (Rishab Shetty) ನಟನೆ, ನಿರ್ದೇಶನದ ‘ಕಾಂತಾರ’ ಚಿತ್ರಕ್ಕೆ ಅಗತ್ಯಕ್ಕಿಂತಲೂ ಹೆಚ್ಚಿನ ಹೈಪ್​ ಸಿಕ್ಕಿದೆ ಎಂಬುದು ಕೆಲವರ ಅಭಿಪ್ರಾಯ. ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ನಿರ್ದೇಶಕ ಅಭಿರೂಪ್​ ಬಸು (Abhiroop Basu) ಅವರು, ‘ಕಾಂತಾರ’ ಸಿನಿಮಾವನ್ನು ಕಟುವಾಗಿ ಟೀಕಿಸಿದ್ದಾರೆ.

ETimesಗೆ ನೀಡಿದ ಸಂದರ್ಶನದಲ್ಲಿ (Source) ಅಭಿರೂಪ್​ ಬಸು ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಜನರ ಬುದ್ಧಿವಂತಿಕೆಯನ್ನು ಈ ಸಿನಿಮಾ ಅಣಕಿಸುತ್ತದೆ ಎಂಬ ಭಾವನೆ ನನ್ನದು. ಕಳಪೆಯಾಗಿ ಮಾಡಲಾಗಿದೆ. ಪ್ರಗತಿಪರವಲ್ಲದ ರೀತಿಯಲ್ಲಿದೆ. ಕಥೆಯಲ್ಲಿನ ತಿರುವುಗಳು ತುಂಬ ಅಪ್ರಾಮಾಣಿಕವಾಗಿವೆ. ಕೇವಲ ಗಿಮಿಕ್​ ರೀತಿ ಇದೆ. ಹೀರೋ ಪಾತ್ರ ಒಳ್ಳೆಯವನಾಗಿ ಬದಲಾಗುವ ಸನ್ನಿವೇಶ ಹಾಸ್ಯಾಸ್ಪದವಾಗಿದೆ. ಅತಿಯಾಗಿ ಚರ್ಚೆ ಆಗಿರುವ ಕ್ಲೈಮ್ಯಾಕ್ಸ್​ ಬಗ್ಗೆ ನನಗೆ ಆಸಕ್ತಿಯೇ ಉಳಿಯಲಿಲ್ಲ’ ಎಂದು ಅಭಿರೂಪ್​ ಬಸು ಹೇಳಿದ್ದಾರೆ.

‘ಕಾಂತಾರ’ ಚಿತ್ರವನ್ನು ಥಿಯೇಟರ್​ನಲ್ಲಿ ನೋಡಿದ ಬಳಿಕ ಅಭಿರೂಪ್​ ಬಸು ಅವರು ಈ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು. ಅದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ಕೂಡ ತಮ್ಮ ಹೇಳಿಕೆಗೆ ತಾವು ಬದ್ಧರಾಗಿರುವುದಾಗಿ ಅವರು ತಿಳಿಸಿದ್ದಾರೆ. ಪೌರಾಣಿಕ ಪಾತ್ರಗಳಿಗೆ ವೈಜ್ಞಾನಿಕ ಪುರಾವೆಯನ್ನು ಹುಡುಕುತ್ತಿರುವ ಪರಿಸ್ಥಿತಿ ದೇಶದಲ್ಲಿ ಇರುವಾಗ ಇದೆಲ್ಲ ಅಚ್ಚರಿ ಏನಲ್ಲ ಎಂದು ಕೂಡ ಅವರು ಹೇಳಿದ್ದಾರೆ.

ಇದನ್ನೂ ಓದಿ
Kantara: ‘ಇದು ರಿಷಬ್​ ಮಾಡಿದ ಚಿತ್ರ ಅಲ್ಲ, ದೇವರೇ ಮಾಡ್ಸಿದ್ದು’; ವಿದೇಶದಲ್ಲಿ ‘ಕಾಂತಾರ’ ನೋಡಿ ಜಗ್ಗೇಶ್​ ಪ್ರತಿಕ್ರಿಯೆ
Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Kantara Review: ‘ಕಾಂತಾರ’ ವಿಮರ್ಶೆ ಮಾಡಿದ ರಮ್ಯಾ; ರಿಷಬ್​ ಶೆಟ್ಟಿ ಚಿತ್ರದ ಬಗ್ಗೆ ‘ಮೋಹಕ ತಾರೆ’ ಹೇಳಿದ್ದೇನು?

ಇತ್ತೀಚೆಗೆ ‘ವರಾಹ ರೂಪಂ..’ ಹಾಡಿನ ಬಗ್ಗೆಯೂ ಅನೇಕರಿಂದ ಟೀಕೆ ವ್ಯಕ್ತವಾಗಿತ್ತು. ಮಲಯಾಳಂನ ‘ನವರಸಂ..’ ಗೀತೆಯ ಟ್ಯೂನ್​ ಅನ್ನು ಸಂಗೀತ ನಿರ್ದೇಶಕ ಅಜನೀಶ್​ ಬಿ. ಲೋಕನಾಥ್​ ಕಾಪಿ ಮಾಡಿದ್ದಾರೆ ಎಂಬ ಆರೋಪ ಇದೆ. ಈ ಕುರಿತು ‘ನವರಸಂ..’ ಗೀತೆಯನ್ನು ನಿರ್ಮಿಸಿದ ‘ತೈಕ್ಕುಡಂ ಬ್ರಿಡ್ಜ್​’ ತಂಡ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿತ್ತು.

‘ನಾವು ನಮ್ಮ ಕೇಳುಗರಿಗೆ ತಿಳಿಸುವುದೇನೆಂದರೆ, ಯಾವುದೇ ರೀತಿಯಲ್ಲೂ ‘ತೈಕ್ಕುಡಂ ಬ್ರಿಡ್ಜ್​’ ತಂಡವು ‘ಕಾಂತಾರ’ ಸಿನಿಮಾ ಜೊತೆ ಸಹಯೋಗ ಹೊಂದಿಲ್ಲ. ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್​ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಇದಕ್ಕೆ ಕಾರಣವಾದವರ ವಿರುದ್ಧ ನಾವು ಕಾನೂನಿನ ಕ್ರಮಕ್ಕೆ ಒತ್ತಾಯಿಸುತ್ತೇವೆ’ ಎಂದು ‘ತೈಕ್ಕುಡಂ ಬ್ರಿಡ್ಜ್​’ ಮಾಡಿದ ಪೋಸ್ಟ್​ ವೈರಲ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:18 pm, Fri, 28 October 22