ತೆಲುಗು ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಯಾವುದೇ ಚಿತ್ರ ಕೈಗೆತ್ತಿಕೊಂಡರೂ ಅದರಲ್ಲೊಂದು ಅದ್ದೂರಿತನ ಇರುತ್ತದೆ. ಇದೇ ಕಾರಣಕ್ಕೆ, ಅವರ ನಿರ್ದೇಶನದ ಸಿನಿಮಾಗಳು ಹೆಚ್ಚಿನ ಬಜೆಟ್ ಕೇಳುತ್ತವೆ. ಸ್ಯಾಂಡಲ್ವುಡ್ನಲ್ಲಿ ಹೈ ಬಜೆಟ್ ಚಿತ್ರಗಳು ಸಿದ್ಧಗೊಂಡಿವೆಯಾದರೂ ಟಾಲಿವುಡ್ ಮೀರಿಸೋಕೆ ಸಾಧ್ಯವಾಗಿಲ್ಲ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ, ಬರೋಬ್ಬರಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ! ಈ ಮೂಲಕ ಟಾಲಿವುಡ್ಅನ್ನೂ ನಾವು ಮೀರಿಸುತ್ತಿದ್ದೇವೆ. ಈ ವಿಚಾರ ಕೇಳಿ ಸಿನಿಪ್ರಿಯರು ಸಾಕಷ್ಟು ಅಚ್ಚರಿಗೊಂಡಿದ್ದಾರೆ.
‘ಕೆಜಿಎಫ್’, ‘ಕೆಜಿಎಫ್ 2’, ‘ಕಬ್ಜ’ ಸೇರಿ ಬೆರಳೆಣಿಕೆ ಸಿನಿಮಾಗಳು ದೊಡ್ಡ ಬಜೆಟ್ನಲ್ಲಿ ಸಿದ್ಧಗೊಂಡಿವೆ. ಆದರೆ, ತೆಲುಗಿನ ಬಾಹುಬಲಿ ಸಿನಿಮಾ ಬಜೆಟ್ ಮೀರಿಸೋಕೆ ಸಾಧ್ಯವಾಗಿಲ್ಲ. ಆದರೆ, ಈ ದಾಖಲೆ ಮುರಿಯೋಕೆ ಎಲ್ಲಾ ಸಿದ್ಧತೆ ನಡೆದಿದೆ. 400-500 ಕೋಟಿ ರೂಪಾಯಿಯ ಬಜೆಟ್ನಲ್ಲಿ ಸಿನಿಮಾ ನಿರ್ಮಾಣಕ್ಕೆ ಗಾನ ಶ್ರವಣ್ ಸ್ವಾಮೀಜಿ ರೆಡಿ ಆಗಿದ್ದಾರೆ. ಜಿಎಸ್ಆರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದ್ದು, ಅದಿತಿ ಅವರು ಸಹ ನಿರ್ಮಾಪಕಿ ಆಗಿದ್ದಾರೆ.
‘ಕೃಷ್ಣರಾಜ 4’ ಸಿನಿಮಾ ನಿರ್ಮಾಣಕ್ಕೆ ಗಾನ ಶ್ರವಣ್ ಸ್ವಾಮೀಜಿ ಮುಂದಾಗಿದ್ದಾರೆ. ರಾಜಮೌಳಿ ಮೀರಿಸೋ ನಿರ್ದೇಶಕನಿಗಾಗಿ ಅವರು ಹುಡುಕಾಟ ಆರಂಭಿಸಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅಚ್ಚರಿ ಎಂದರೆ, ಮೈಸೂರಿನಲ್ಲಿ 640 ಎಕರೆ ಜಮೀನು ಖರೀದಿಸಿ, ಅದರಲ್ಲಿ ಸೆಟ್ ಹಾಕಿ ಸಿನಿಮಾ ಶೂಟ್ ಮಾಡೋ ಆಲೋಚನೆ ಅವರದ್ದು.
ಶ್ರವಣ್ ಸ್ವಾಮೀಜಿ ಅವರು ಸುದ್ದಿ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಕೇರಳದ ಭಗವತಿ ಅಮ್ಮ ದೇವಸ್ಥಾನಕ್ಕೆ ಬರೋಬ್ಬರಿ 700 ಕೋಟಿ ರೂಪಾಯಿ ದೇಣಿಗೆ ನೀಡಿ ಗಾನ ಶ್ರವಣ್ ಸ್ವಾಮೀಜಿ ಎಲ್ಲರ ಗಮನ ಸೆಳೆದಿದ್ದರು. ಈಗ ಅವರು ಹೈ ಬಜೆಟ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರೋದು ಹಲವರ ಅಚ್ಚರಿಗೆ ಕಾರಣವಾಗಿದೆ. ಈ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ, ಕಲಾ ಬಳಗದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಇದನ್ನೂ ಓದಿ: Jaggesh: ಶೂಟಿಂಗ್ ವೇಳೆ ಜಗ್ಗೇಶ್ ಮೈಮೇಲಿತ್ತು ನಿಜವಾದ ಹಾವು; ಭಯದಲ್ಲಿ ಬಾಯಿಗೆ ಬಂದಂತೆ ಡೈಲಾಗ್ ಹೇಳಿದ್ದ ನವರಸ ನಾಯಕ
ಅಭಿಷೇಕ್ ಬಚ್ಚನ್ ಖಾತೆಗೆ ಬಿತ್ತು 45.75 ಕೋಟಿ ರೂಪಾಯಿ; ಆದರೆ ಸಿನಿಮಾದಿಂದಲ್ಲ, ಅಚ್ಚರಿಗೊಂಡ ಫ್ಯಾನ್ಸ್
Published On - 4:14 pm, Fri, 13 August 21