AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬರುತ್ತಿದೆ ‘ಗಂಗೆ-ಗೌರಿ’ ಸಿನಿಮಾ, ಇದು ‘ಕೈಲಾಸ’ದ ಕತೆ

Sandalwood: 60ರ ದಶಕದಲ್ಲಿ ಡಾ ರಾಜ್​ಕುಮಾರ್, ಲೀಲಾವತಿ, ಭಾರತಿ ನಟಿಸಿದ್ದ ‘ಗಂಗೆ-ಗೌರಿ’ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಇದೀಗ ಇದೇ ಹೆಸರಿನ ಹೊಸ ಸಿನಿಮಾ ಸೆಟ್ಟೇರಿದೆ.

ಮತ್ತೆ ಬರುತ್ತಿದೆ ‘ಗಂಗೆ-ಗೌರಿ’ ಸಿನಿಮಾ, ಇದು ‘ಕೈಲಾಸ’ದ ಕತೆ
ಗಂಗೆ-ಗೌರಿ
ಮಂಜುನಾಥ ಸಿ.
|

Updated on: Jan 02, 2024 | 11:04 PM

Share

ಡಾ.ರಾಜ್​ ಕುಮಾರ್ (Dr Rajkumar), ಲೀಲಾವತಿ, ಭಾರತಿ ಅಭಿನಯಿಸಿದ್ದ ‘ಗಂಗೆ ಗೌರಿ’ ಸಿನಿಮಾ 60 ದಶಕದಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗತ್ತು. ಈಗ ಅದೇ ಹೆಸರಿನಲ್ಲಿ ಭಕ್ತಿ ಪ್ರಧಾನ ಸಿನಿಮಾವೊಂದು ಸೆಟ್ಟೇರಿದೆ. ಬೆಂಗಳೂರಿನ ತಿಂಡ್ಲು ಸ್ಥಳದಲ್ಲಿರುವ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭ ನಡೆದಿದೆ.

ಸಿನಿಮಾಕ್ಕೆ ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿರುವ ಬಿ.ಎ.ಪುರುಷೋತ್ತಮ್ ಓಂಕಾರ್ ಮಾತನಾಡಿ, ಈ ವರೆಗೆ 27 ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದು, ಈ ಪೈಕಿ 23 ಪೌರಾಣಿಕ, 4 ಕಮರ್ಷಿಯಲ್ ಮಾಡಿದ್ದೇನೆ ಎಂದರು. ‘ಗಂಗೆ-ಗೌರಿ’ ಸಿನಿಮಾವನ್ನು ವಿನೂತನ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಶಿವ ಪುರಾಣದಲ್ಲಿ ಗಂಗೆ ಗೌರಿ ಸಂಬಂಧ ಏನು? ಗಂಗೆ ಯಾಕೆ ಶಿವನ ತಲೆ ಮೇಲೆ ಇರುತ್ತಾಳೆ? ಗೌರಿ ಯಾಕೆ ಶಿವನ ತೊಡೆ ಮೇಲೆ ಕೂತಿರುತ್ತಾಳೆ? ಇದಕ್ಕೆ ಕಾರಣವೇನು? ಇನ್ನಿತರ ಮಾಹಿತಿಗಳನ್ನು ಒಳಗೊಂಡಿರಲಿದೆ ಎಂದರು.

‘ಹುಲಿ, ನಂದಿ, ಹಾವು, ನವಿಲು ಹಾಗೂ ಇಲಿ ಇವು ಒಂದಕ್ಕೊಂದು ವೈರತ್ವ ಹೊಂದಿರುವ ಪ್ರಾಣಿಗಳು, ಒಂದನ್ನು ಕಂಡರೆ ಮತ್ತೋಂದಕ್ಕೆ ಆಗುವುದಿಲ್ಲ. ಆದರೂ ಇವು ಸೌಹಾರ್ದಯುತವಾಗಿ ಇವೆ. ಇದು ಕೈಲಾಸದ ವಿಶೇಷತೆ. ಇಂತಹ ಅಂಶಗಳನ್ನು ಇಟ್ಟುಕೊಂಡು ಸಿನಿಮಾದ ಸನ್ನಿವೇಶಗಳನ್ನು ಹಣೆಯಲಾಗಿದೆ. ಜಗತ್ ರಕ್ಷಕನಾದ ಪರಮೇಶ್ವರನಿಗೂ ವಿಧಿಯ ಕಾಟ ತಪ್ಪಿಲ್ಲ. ಶನಿದೇವನಿಂದ ಮೂವರು ಕಷ್ಟ ಅನುಭವಿಸುತ್ತಾರೆ. ಇವೆಲ್ಲಾ ಅಂಶಗಳನ್ನು ತಿಳಿಯಲು ಚಿತ್ರ ನೋಡಬೇಕು. ‘ಸ್ವರ್ಗಲೋಕ, ಬ್ರಹ್ಮಲೋಕ ದೃಶ್ಯಗಳು ಬರುವುದರಿಂದ ಸೆಟ್, ಗ್ರಾಫಿಕ್ಸ್ ಬಳಸಬೇಕಾಗಿದೆ. ಮೈಸೂರು, ಶ್ರೀರಂಗಪಟ್ಟಣ, ಊಟಿ ಸುಂದರ ತಾಣಗಳಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ’ ಎಂದು ನಿರ್ದೇಶಕರು ವಿವರ ನೀಡಿದರು.

ಇದನ್ನೂ ಓದಿ:‘ರಾಜ್‌ಕುಮಾರ್ ಕಾಲು ಧೂಳಿಗೂ ನಾವು ಸಮ ಅಲ್ಲ’: ದರ್ಶನ್ ಹೀಗೆ ಹೇಳಿದ್ದೇಕೆ?

ಮೂರು ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಗಣೇಶ್ ರಾವ್ ಕೇಸರ್ಕರ್ ಮಾತನಾಡಿ, ‘ಇದು ನನಗೆ 333ನೇ ಸಿನಿಮಾ. ಈ ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಸಿನಿಮಾಕ್ಕೆ ಅಗತ್ಯ ಇರುವ ಕಾರಣ ತಾಂಡವನೃತ್ಯ ಕಲಿಯುತ್ತಿದ್ದೇನೆ. ಈ ಹಿಂದೆ ಸಿನಿಮಾದಲ್ಲಿ ಶಿವನಾಗಿ ಕಾಣಿಸಿಕೊಂಡಿದ್ದೆ. ಪಾತ್ರವು ನನಗೆ ಚೆನ್ನಾಗಿ ಒಪ್ಪುತ್ತದೆ, ಯಾಕೆ ಇದನ್ನೆ ದೊಡ್ಡದಾಗಿ ಮಾಡಬಾರದು ಎಂದು ಗೆಳೆಯನಿಗೆ ಹೇಳಿದ್ದೆ, ಅದೇ ಇಲ್ಲಿಯವರೆಗೂ ತಂದು ನಿಲ್ಲಿಸಿದೆ ಎಂದರು.

ರಂಗಭೂಮಿ ನಟಿ, ರಾಣೆಬೆನ್ನೂರಿನ ರೂಪಾಲಿ ಅವರು ಗೌರಿ, ಪಾರ್ವತಿ, ದಾಕ್ಷಾಯಿಣಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಗ್ಲಾಮರ್ ರೋಲ್​ಗಳಲ್ಲಿ ಮಿಂಚಿದ್ದ ನಿಖಿತಾಸ್ವಾಮಿ ಗಂಗೆಯ ಪಾತ್ರದಲ್ಲಿ ನಟಿಸಲಿದ್ದಾರೆ. ನಾರದನಾಗಿ ಜಯಸಿಂಹಮುಸೂರಿ, ದಕ್ಷಬ್ರಹ್ಮನಾಗಿ ಶೋಭರಾಜ್, ಶನಿದೇವರಾಗಿ ಎಸ್ಕಾರ್ಟ್ ಶ್ರೀನಿವಾಸ್, ಬ್ರಹ್ಮನಾಗಿ ಶ್ರೀನಿವಾಸಗೌಡ, ಗೌರಿ ತಂದೆಯಾಗಿ ಬಸವರಾಜದೇಸಾಯಿ. ಉಳಿದಂತೆ ಮಾಲಾಡಿಂಗ್ರಿನಾಗರಾಜ್, ಧನಲಕ್ಷಿ, ಜಿಮ್ಶಿವು, ಋತುಸ್ಪರ್ಶ, ಗೀತಾ, ರಕ್ಷಾಗೌಡ ಬಣ್ಣ ಹಚ್ಚುತ್ತಿದ್ದಾರೆ. ನಾಲ್ಕು ಹಾಡುಗಳಿಗೆ ರಾಜ್ಭಾಸ್ಕರ್ ಸಂಗೀತ, ಗೌರಿವೆಂಕಟೇಶ್ ಛಾಯಾಗ್ರಹಣ, ಸಂಕಲನ-ಗ್ರಾಫಿಕ್ಸ್-ಡಿಐ ಅನಿಲ್ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ