MM Keeravani: ಕನ್ನಡದ ಚಿತ್ರಗಳಿಗೂ ಸಂಗೀತ ನೀಡಿರುವ ಗೋಲ್ಡನ್​ ಗ್ಲೋಬ್​ ವಿನ್ನರ್​ ಎಂಎಂ ಕೀರವಾಣಿ ಸಂಭಾವನೆ ಬಹುಕೋಟಿ

| Updated By: ಮದನ್​ ಕುಮಾರ್​

Updated on: Jan 11, 2023 | 2:07 PM

MM Keeravani Remuneration: ಗೋಲ್ಡನ್​ ಗ್ಲೋಬ್ ಪ್ರಶಸ್ತಿ ಪಡೆದ ಎಂಎಂ ಕೀರವಾಣಿ ಅವರು ಟಾಲಿವುಡ್​ಗೆ ಮಾತ್ರ ಸೀಮಿತವಲ್ಲ. ಕನ್ನಡದ ಹಲವು ಚಿತ್ರಗಳಿಗೆ ಅವರು ಸಂಗೀತ ನೀಡಿದ್ದಾರೆ.

MM Keeravani: ಕನ್ನಡದ ಚಿತ್ರಗಳಿಗೂ ಸಂಗೀತ ನೀಡಿರುವ ಗೋಲ್ಡನ್​ ಗ್ಲೋಬ್​ ವಿನ್ನರ್​ ಎಂಎಂ ಕೀರವಾಣಿ ಸಂಭಾವನೆ ಬಹುಕೋಟಿ
ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ಖುಷಿಯಲ್ಲಿ ಎಂಎಂ ಕೀರವಾಣಿ
Image Credit source: RRRMovie twitter account
Follow us on

ಟಾಲಿವುಡ್​ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಅವರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಸಿನಿಮಾ ಲೋಕದಲ್ಲಿ ಬ್ಯುಸಿ ಆಗಿರುವ ಅವರು ಈಗ ಇನ್ನಷ್ಟು ಫೇಮಸ್​ ಆಗಿದ್ದಾರೆ. ಪ್ರತಿಷ್ಠಿತ ಗೋಲ್ಡನ್​ ಗ್ಲೋಬ್​ ಪ್ರಶಸ್ತಿ (Golden Globe Award) ಪಡೆದ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಭಿಮಾನಿಗಳ ಮನ ಗೆದ್ದ ‘ಆರ್​ಆರ್​ಆರ್​’ ಸಿನಿಮಾದ (RRR Movie) ‘ನಾಟು ನಾಟು..’ ಹಾಡಿಗೆ ‘ಅತ್ಯುತ್ತಮ ಒರಿಜಿನಲ್​ ಸಾಂಗ್​’ ಗೋಲ್ಡನ್​ ಗ್ಲೋಬ್ ಪ್ರಶಸ್ತಿ ಸಿಕ್ಕಿದೆ. ಈ ಸಾಧನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದಿಗ್ಗಜ ನಟ ಅಮಿತಾಭ್​ ಬಚ್ಚನ್​ ಸೇರಿದಂತೆ ಅನೇಕರು ಶಹಭಾಷ್​ ಎಂದಿದ್ದಾರೆ. ಅನೇಕರಿಗೆ ತಿಳಿದಿರದ ಸಂಗತಿ ಏನೆಂದರೆ ಎಂಎಂ ಕೀರವಾಣಿ ಅವರು ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಕನ್ನಡದ ಅನೇಕ ಸಿನಿಮಾಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಎಂಎಂ ಕೀರವಾಣಿ ಅವರ ಕನ್ನಡ ಸಿನಿಮಾಗಳು:

ಚಿತ್ರರಂಗದಲ್ಲಿ ಎಂಎಂ ಕೀರವಾಣಿ ಅವರ ಅನುಭವ ಅಪಾರ. 1990ರಿಂದಲೂ ಅವರು ಸಕ್ರಿಯರಾಗಿದ್ದಾರೆ. ಹಲವಾರು ಸೂಪರ್​ ಹಿಟ್​ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡದ ‘ಅಳಿಮಯ್ಯ’, ‘ಅಪ್ಪಾಜಿ’, ‘ಭೈರವ’, ‘ಸ್ವಾತಿ’, ‘ಕರ್ನಾಟಕ ಸುಪುತ್ರ’, ‘ದೀಪಾವಳಿ’, ‘ಜಮೀನ್ದಾರ್ರು’ ಮುಂತಾದ ಸಿನಿಮಾಗಳಿಗೆ ಸಂಗೀತ ನೀಡಿದ್ದು ಎಂಎಂ ಕೀರವಾಣಿ ಅವರೇ. ತೆಲುಗಿನಿಂದ ರಿಮೇಕ್​ ಆದ ‘ಮರ್ಯಾದೆ ರಾಮಣ್ಣ’ ಹಾಗೂ ‘ವೀರ ಮದಕರಿ’ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದು ಕೂಡ ಎಂಎಂ ಕೀರವಾಣಿ.

ಇದನ್ನೂ ಓದಿ: Golden Globe Awards: ‘RRR​’ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಜತೆ ‘ಗೋಲ್ಡನ್​ ಗ್ಲೋಬ್​’ ಪಡೆದವರ ಪೂರ್ತಿ ಲಿಸ್ಟ್​ ಇಲ್ಲಿದೆ

ಇದನ್ನೂ ಓದಿ
Golden Globe Awards: ‘RRR​’ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಜತೆ ‘ಗೋಲ್ಡನ್​ ಗ್ಲೋಬ್​’ ಪಡೆದವರ ಪೂರ್ತಿ ಲಿಸ್ಟ್​ ಇಲ್ಲಿದೆ
MM Keeravani: ಗೋಲ್ಡನ್​ ಗ್ಲೋಬ್ ಪ್ರಶಸ್ತಿ ಪಡೆದ ‘ಆ​ರ್​ಆರ್​ಆರ್​’ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು

ರಾಜಮೌಳಿಯ ಫೇವರಿಟ್​ ಸಂಗೀತ ನಿರ್ದೇಶಕ:

2001ರಲ್ಲಿ ರಾಜಮೌಳಿ ಮೊದಲ ಬಾರಿಗೆ ನಿರ್ದೇಶನ ಮಾಡಿದ ‘ಸ್ಟೂಡೆಂಟ್​ ನಂ.1’ ಸಿನಿಮಾದಿಂದ ಹಿಡಿದು ಕಳೆದ ವರ್ಷ ತೆರೆಕಂಡ ‘ಆರ್​ಆರ್​ಆರ್​’ ಚಿತ್ರದವರೆಗೆ ಎಲ್ಲ ಸಿನಿಮಾಗಳಿಗೂ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ರಾಜಮೌಳಿ ಅವರ ಗೆಲುವಿನಲ್ಲಿ ಕೀರವಾಣಿ ಅವರ ಕೊಡುಗೆಯೂ ಮಹತ್ವದ್ದಾಗಿದೆ.

ಇದನ್ನೂ ಓದಿ: MM Keeravani: ಗೋಲ್ಡನ್​ ಗ್ಲೋಬ್ ಪ್ರಶಸ್ತಿ ಪಡೆದ ‘ಆ​ರ್​ಆರ್​ಆರ್​’ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ

18 ಕೋಟಿ ರೂಪಾಯಿ ಮೀರಿದ ಕೀರವಾಣಿ ಸಂಭಾವನೆ:

ಒಮ್ಮೆ ರಾಷ್ಟ್ರ ಪ್ರಶಸ್ತಿ, 8 ಬಾರಿ ಫಿಲ್ಮ್​ಫೇರ್​ ಪ್ರಶಸ್ತಿ, 11 ಬಾರಿ ‘ನಂದಿ ಅವಾರ್ಡ್ಸ್​’ ಪಡೆದುಕೊಂಡ ಖ್ಯಾತಿ ಎಂಎಂ ಕೀರವಾಣಿ ಅವರಿಗೆ ಸಲ್ಲುತ್ತದೆ. ಈವರೆಗೂ ಅವರು ಒಂದು ಸಿನಿಮಾಗೆ ಬರೋಬ್ಬರಿ 18 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಈಗ ಗೋಲ್ಡನ್​ ಗ್ಲೋಬ್ ಪ್ರಶಸ್ತಿ ಸಿಕ್ಕಿರುವುದರಿಂದ ಅವರ ಡಿಮ್ಯಾಂಡ್​ ಇನ್ನಷ್ಟು ಹೆಚ್ಚಾಗಲಿದೆ. ಅದಕ್ಕೆ ತಕ್ಕಂತೆಯೇ ಸಂಭಾವನೆ ಕೂಡ ಜಾಸ್ತಿ ಆಗಲಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಕೀರವಾಣಿ ಮಿಂಚುತ್ತಿದ್ದಾರೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 2:07 pm, Wed, 11 January 23