
ಗೋಲ್ಡನ್ ಸ್ಟಾರ್ ಗಣೇಶ್ (Ganesh) ಹಾಗೂ ಸಿಂಪಲ್ ಸುನಿ (simple Suni) ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ‘ಸಖತ್’ (Sakath) ಚಿತ್ರ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದೀಗ ಚಿತ್ರತಂಡ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿದ್ದು, ಗಣೇಶ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಅದ್ದೂರಿ ಮೇಕಿಂಗ್ ಹಾಗೂ ಸಂಗೀತದಿಂದ ಹಾಡು ಮನಮುಟ್ಟುವಂತಿದೆ. ಹಾಡಿನಲ್ಲಿ ಆರ್ಸಿಬಿ ಸೇರಿದಂತೆ ಕನ್ನಡಿಗರ ನೆಚ್ಚಿನ ವಿಚಾರಗಳ ಉಲ್ಲೇಖ ಇದ್ದು, ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಹಾಡಿಗೆ ಸುನಿ ಹಾಗೂ ಎಸ್.ಐ.ಡಿ ರ್ಯಾಪರ್ ಸಾಹಿತ್ಯ ರಚಿಸಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಸಖತ್ ಚಿತ್ರವು ನವೆಂಬರ್ 26ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
‘ಸಖತ್’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರಿತ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಎರಡು ಹಾಡುಗಳು ರಿಲೀಸ್ ಆಗಿದ್ದು, ಟೀಸರ್ ರಿಲೀಸ್ ಆಗಿದೆ. ನಿರ್ದೇಶ ಸಿಂಪಲ್ ಸುನಿ 2019ರಲ್ಲಿ ತೆರೆಕಂಡ ‘ಬಜಾರ್’ ಚಿತ್ರದ ನಂತರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿಲ್ಲ. ಆದ್ದರಿಂದಲೇ ಈ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿದೆ.
ಸಖತ್ ಟೀಸರ್ ಇಲ್ಲಿದೆ:
ಸಖತ್ ಚಿತ್ರದಲ್ಲಿ ಗಣೇಶ್ಗೆ ಜೊತೆಯಲ್ಲಿ ಸುರಭಿ ಪುರಾಣಿಕ್, ನಿಶ್ವಿಕಾ ನಾಯ್ಡು ಮೊದಲಾದವರು ಕಾಣಿಸಿಕೊಳ್ಳುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದ್ದು, ಶಾಂತು ಕುಮಾರ್ ಸಂಕಲನ ಮಾಡಿದ್ದಾರೆ. ದೀರ್ಘಕಾಲದ ನಂತರ ಗಣೇಶ್ ಬೆಳ್ಳಿ ತೆರೆಯ ಮೇಲೆ ಬರುತ್ತಿದ್ದು, ಅವರನ್ನು ಸ್ವಾಗತಿಸಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಇದನ್ನೂ ಓದಿ:
Sakath: ಮೋಡಿ ಮಾಡುವಂತಿದೆ ಗಣೇಶ್- ನಿಶ್ವಿಕಾ ಅಭಿನಯದ ‘ಸಖತ್’ ಚಿತ್ರದ ಹಾಡು; ವಿಡಿಯೋ ಸಾಂಗ್ ಇಲ್ಲಿದೆ
ಸಖತ್ ಆಗಿದೆ ‘ಸಖತ್’ ಟೀಸರ್; ಪ್ರೇಕ್ಷಕರ ತಲೆಗೆ ಕುತೂಹಲದ ಹುಳ ಬಿಟ್ಟ ಗಣೇಶ್, ಸಿಂಪಲ್ ಸುನಿ