Amulya Birthday: ನಟಿ ಅಮೂಲ್ಯ ಹುಟ್ಟುಹಬ್ಬ: ಪತಿ ಜಗದೀಶ್​ಗೆ ಈ ದಿನವೇ ವ್ಯಾಲೆಂಟೈನ್ ಡೇ

| Updated By: ಮದನ್​ ಕುಮಾರ್​

Updated on: Sep 14, 2022 | 8:38 AM

Happy Birthday Amulya: ಅಮೂಲ್ಯ ಅವರು ಆದಷ್ಟು ಬೇಗ ನಟನೆಗೆ ಮರಳಬೇಕು ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ. ಆ ಕೋರಿಕೆಯ ಜೊತೆಯಲ್ಲಿ ಎಲ್ಲರೂ ಬರ್ತ್​ಡೇ ವಿಶ್​ ಮಾಡುತ್ತಿದ್ದಾರೆ.

Amulya Birthday: ನಟಿ ಅಮೂಲ್ಯ ಹುಟ್ಟುಹಬ್ಬ: ಪತಿ ಜಗದೀಶ್​ಗೆ ಈ ದಿನವೇ ವ್ಯಾಲೆಂಟೈನ್ ಡೇ
ಅಮೂಲ್ಯ, ಜಗದೀಶ್
Follow us on

ಕನ್ನಡ ಚಿತ್ರರಂಗದ ಖ್ಯಾತ ನಟಿ ಅಮೂಲ್ಯ (Amulya) ಅವರು ಇಂದು (ಸೆ.14) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಜನ್ಮದಿನಕ್ಕೆ (Amulya Birthday) ಶುಭ ಕೋರುತ್ತಿದ್ದಾರೆ. ಕುಟುಂಬದವರು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರಿಂದಲೂ ಶುಭಾಶಯಗಳು ಹರಿದುಬರುತ್ತಿವೆ. ಜಗದೀಶ್​ ಆರ್​. ಚಂದ್ರ ಜೊತೆ ಮದುವೆ ಆದ ಬಳಿಕ ಅಮೂಲ್ಯ ಅವರು ನಟನೆಯಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಅವರು ಆದಷ್ಟು ಬೇಗ ಹೊಸ ಸಿನಿಮಾ ಒಪ್ಪಿಕೊಳ್ಳಲಿ ಎಂಬುದು ಅಭಿಮಾನಿಗಳ ಬಯಕೆ. ಈ ವರ್ಷ ಜೂನ್​​ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮನೀಡಿದ ಅಮೂಲ್ಯ ಅವರು ಸದ್ಯಕ್ಕೆ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಪತಿ ಜಗದೀಶ್​ (Jagadish R Chandra) ಅವರು ವಿಶೇಷವಾಗಿ ವಿಶ್​ ಮಾಡಿಕೊಂಡಿದ್ದಾರೆ. ತಮ್ಮ ಪಾಲಿಗೆ ಈ ದಿನವೇ ‘ವ್ಯಾಲೆಂಟೈನ್​ ಡೇ’ ಎಂದು ಅವರು ಹೇಳಿದ್ದಾರೆ.

ಅಮೂಲ್ಯ ಜತೆ ಕ್ಲಿಕ್ಕಿಸಿಕೊಂಡಿರುವ ಹತ್ತಾರು ಫೋಟೋಗಳನ್ನು ಜಗದೀಶ್​ ಅವರು ಹಂಚಿಕೊಂಡಿದ್ದಾರೆ. ‘ನನಗೆ ಸೆಪ್ಟೆಂಬರ್​ 14 ವ್ಯಾಲೆಂಟೈನ್​ ಡೇ. ಹುಟ್ಟುಹಬ್ಬದ ಶುಭಾಶಯಗಳು ಅಮೂಲ್ಯ. ನೀನು ಯಾವಾಗಲೂ ಮಿನುಗುವ ನಕ್ಷತ್ರವಾಗಿರಬೇಕು. ಇದು ನಾವು ಕಳೆದ ಪ್ರೀತಿಯ ಕ್ಷಣಗಳು’ ಎಂದು ಈ ಪೋಸ್ಟ್​ಗೆ ಅವರು ಕ್ಯಾಪ್ಷನ್​ ನೀಡಿದ್ದಾರೆ.

ಇದನ್ನೂ ಓದಿ
ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ನಟಿ ಅಮೂಲ್ಯ; ಸಂತೂರ್ ಮಮ್ಮಿ ಎಂದ ಫ್ಯಾನ್ಸ್
ಮಗುವಿನ ಜತೆ ಮೊದಲ ಬಾರಿ ಫೋಟೋ ಹಂಚಿಕೊಂಡ ನಟಿ ಅಮೂಲ್ಯ; ಆದ್ರೂ ಫ್ಯಾನ್ಸ್ ಬೇಸರ
Amulya: ಅಮೂಲ್ಯ- ಜಗದೀಶ್; ತಾರಾ ದಂಪತಿಯ ಮುದ್ದಾದ ಫೋಟೋಗಳು ಇಲ್ಲಿವೆ
Amulya: ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ; ಸಂತಸ ಹಂಚಿಕೊಂಡ ನಟಿಯ ಪತಿ ಜಗದೀಶ್

ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು ಅಮೂಲ್ಯ. ನಂತರ ಅವರು ‘ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ಹೀರೋಯಿನ್​ ಆಗಿ ಬಡ್ತಿ ಪಡೆದರು. ಆ ಸಿನಿಮಾದಿಂದ ಅವರಿಗೆ ಸಿಕ್ಕ ಗೆಲುವು ತುಂಬ ದೊಡ್ಡದು. ‘ಗೋಲ್ಡನ್​ ಸ್ಟಾರ್​’ ಗಣೇಶ್​ ಜತೆ ನಟಿಸಿದ ಆ ಚಿತ್ರ ಸೂಪರ್​ ಹಿಟ್​ ಆಯಿತು. ನಂತರ ಅಮೂಲ್ಯ ಹಿಂತಿರುಗಿ ನೋಡಲೇ ಇಲ್ಲ. ಯಶ್​, ಚಿರಂಜೀವಿ ಸರ್ಜಾ, ನೆನಪಿರಲಿ ಪ್ರೇಮ್, ದುನಿಯಾ ವಿಜಯ್​, ಕೃಷ್ಣ ಅಜಯ್​ ರಾವ್​, ಪ್ರಕಾಶ್​ ರಾಜ್​ ಮುಂತಾದ ಸ್ಟಾರ್​ ನಟರ ಜೊತೆ ಅಭಿನಯಿಸುವ ಚಾನ್ಸ್​ ಪಡೆದುಕೊಂಡರು. ‘ಶ್ರಾವಣಿ ಸುಬ್ರಹ್ಮಣ್ಯ’ ಚಿತ್ರದಲ್ಲಿನ ನಟನೆಗಾಗಿ ಫಿಲ್ಮ್​ಫೇರ್​ ಪ್ರಶಸ್ತಿ ಅವರಿಗೆ ಒಲಿಯಿತು.

2017ರಲ್ಲಿ ಬಂದ ‘ಮುಗುಳು ನಗೆ’ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರ ಮಾಡಿದ ಬಳಿಕ ಅಮೂಲ್ಯ ಅವರು ಬೇರೆ ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ. ಮತ್ತೆ ಅವರನ್ನು ದೊಡ್ಡ ಪರದೆಯಲ್ಲಿ ನೋಡಬೇಕು ಎಂದು ಅಭಿಮಾನಿಗಳು ಕಾದಿದ್ದಾರೆ. ಆ ಆಸೆ ಯಾವಾಗ ನೆರವೇರಲಿದೆಯೋ ತಿಳಿದಿಲ್ಲ. ಒಂದೊಳ್ಳೆಯ ಕಥೆ ಮತ್ತು ಪಾತ್ರದ ಮೂಲಕ ಬೆಳ್ಳಿಪರದೆಗೆ ಅಮೂಲ್ಯ ರೀ-ಎಂಟ್ರಿ ನೀಡಿದರೆ ಅಭಿಮಾನಿಗಳಿಗೆ ಸಖತ್​ ಖುಷಿ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:38 am, Wed, 14 September 22