Yash Birthday: 36ನೇ ವಸಂತಕ್ಕೆ ಕಾಲಿಟ್ಟ ಯಶ್;​ ಜನ್ಮದಿನಕ್ಕೆ ‘ಕೆಜಿಎಫ್​​ 2’ ಕಡೆಯಿಂದ ಸಿಗುತ್ತಿರುವ ಗಿಫ್ಟ್​ ಏನು?

| Updated By: ಮದನ್​ ಕುಮಾರ್​

Updated on: Jan 08, 2022 | 9:31 AM

Happy Birthday Yash: ಯಶ್​ಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಯಶ್​ ಹೆಸರು ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದೆ. ಯಶ್​ ಅವರ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

Yash Birthday: 36ನೇ ವಸಂತಕ್ಕೆ ಕಾಲಿಟ್ಟ ಯಶ್;​ ಜನ್ಮದಿನಕ್ಕೆ ‘ಕೆಜಿಎಫ್​​ 2’ ಕಡೆಯಿಂದ ಸಿಗುತ್ತಿರುವ ಗಿಫ್ಟ್​ ಏನು?
ಯಶ್​
Follow us on

ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಯಶ್ (Yash)​ ಅವರು ಇಂದು (ಜ.8) 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಯಶ್​ ಜನ್ಮದಿನಕ್ಕೆ (Yash Birthday) ಕೇವಲ ಕರ್ನಾಟಕದ ಫ್ಯಾನ್ಸ್​ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತಮಿಳು ನಾಡು, ಮಹಾರಾಷ್ಟ್ರ ಮೊದಲಾದ ರಾಜ್ಯಗಳ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಅವರ ಬರ್ತ್​ಡೇ ಅಂಗವಾಗಿ ಟ್ವಿಟರ್​ನಲ್ಲಿ ಶುಭಾಶಯಗಳ ಮಳೆ ಸುರಿಯುತ್ತಿದೆ. ಈ ಕಾರಣಕ್ಕೆ ಯಶ್​ ಹೆಸರು ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದೆ. ದೊಡ್ಡದೊಡ್ಡ ಸೆಲೆಬ್ರಿಟಿಗಳು ಕೂಡ ಯಶ್​ಗೆ ಶುಭಾಶಯ ತಿಳಿಸುತ್ತಿದ್ದಾರೆ.

ಅಭಿಮಾನಿಗಳ ಜತೆ ಸೇರಿ ಯಶ್​ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರು ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದ್ದರು. ‘ಈ ಬಾರಿ ಮತ್ತೆ ಕೊವಿಡ್​ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಅಭಿಮಾನಿಗಳು ಬಂದು ಬರ್ತ್​​ಡೇ ಆಚರಣೆ ಮಾಡುವುದು ಸರಿಯಲ್ಲ ಅನಿಸುತ್ತದೆ. ಎಲ್ಲರೂ ಎಲ್ಲಿದ್ದೀರೋ ಅಲ್ಲಿಂದಲೇ ವಿಶ್​ ಮಾಡಿ ಸಾಕು’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಆದಾಗ್ಯೂ ಯಶ್​ ಮನೆ ಬಳಿ ತೆರಳೋಣ ಎಂದರೆ ಅದು ಸಾಧ್ಯವಿಲ್ಲ.  ಯಶ್​ ಜನ್ಮದಿನ ಶನಿವಾರ. ಕರ್ನಾಟಕದಲ್ಲಿ ವಾರಾಂತ್ಯದ ಕರ್ಫ್ಯೂ ಇದೆ. ಈ ಕಾರಣಕ್ಕೆ ಯಶ್​ ಮನೆ ಸಮೀಪ ತೆರಳೋಕೆ ಯಾರಿಗೂ ಸಾಧ್ಯವಾಗುತ್ತಿಲ್ಲ.

ಸಾಮಾನ್ಯವಾಗಿ ಸ್ಟಾರ್​ ನಟರ ಜನ್ಮದಿನ ಎಂದರೆ, ಸಿನಿಮಾ ತಂಡದಿಂದ ಹೊಸ ಅಪ್​ಡೇಟ್​ ಸಿಗುತ್ತದೆ. ‘ಕೆಜಿಎಫ್​ 2’ ಚಿತ್ರದ ಕಡೆಯಿಂದ ಟೀಸರ್​ ರಿಲೀಸ್​ ಆಗುವುದಿಲ್ಲ ಎಂದು ಯಶ್​ ಈ ಮೊದಲೇ ಹೇಳಿದ್ದಾರೆ. ಟ್ರೇಲರ್​ ರಿಲೀಸ್​ ಮಾಡೋದಕ್ಕಂತೂ ಸಾಧ್ಯವಿಲ್ಲ. ಈ ಕಾರಣಕ್ಕೆ ಇಂದು ಹೊಸ ಪೋಸ್ಟರ್​ ರಿಲೀಸ್​ ಆಗಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ. ಯಶ್​ ಹಾಗೂ ನಿರ್ದೇಶಕ ನರ್ತನ್​ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆಯೇ ಎನ್ನುವ ಕುತೂಹಲ ಇದೆ.

ಯಶ್​ಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಯಶ್​ ಹೆಸರು ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದೆ. ಯಶ್​ ಅವರ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ದೊಡ್ಡದೊಡ್ಡ ಸೆಲೆಬ್ರಿಟಿಗಳು ಕೂಡ ಯಶ್​ ಬರ್ತ್​ಡೇಗೆ ಶುಭಾಶಯ ತಿಳಿಸುತ್ತಿದ್ದಾರೆ.

ಇದನ್ನೂ ಓದಿ:

‘ಕೆಜಿಎಫ್​ 2’ ಎದುರು ಸ್ಪರ್ಧೆಗೆ ಇಳಿದ ತಮಿಳು ಸ್ಟಾರ್ ನಟನ ​ ಸಿನಿಮಾ; ಗೆಲ್ಲೋದು ಯಶ್​ ಎಂದ ಫ್ಯಾನ್ಸ್​ 

‘ಯಶ್​ ಬರ್ತ್​ಡೇ ಮಾಡಲು ರಜೆ ಕೊಡಿ’; ಪತ್ರ ಬರೆದು ಪ್ರಾಂಶುಪಾಲರಿಗೆ ಮನವಿ ಮಾಡಿದ ವಿದ್ಯಾರ್ಥಿ

Published On - 6:00 am, Sat, 8 January 22