AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹರ್ಷಿಣಿ ಸಿನಿಮಾಸ್’ ಸಂಸ್ಥೆಗೆ ಬೆಂಬಲ ನೀಡಿದ ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡ

ಲತಾಶ್ರೀ ಡಿ.ಸಿ ಅವರು ‘ಹರ್ಷಿಣಿ ಸಿನಿಮಾಸ್’ ಸಂಸ್ಥೆಯನ್ನು ಆರಂಭಿಸಿದ್ದಾರೆ. ಈ ಸಂಸ್ಥೆಯ ಮೂಲಕ ‘ಕಿರುನಗೆ’ ಸಿನಿಮಾ ನಿರ್ಮಾಣ ಆಗುತ್ತಿದೆ. ಇದು ಈ ಸಂಸ್ಥೆಯ ಮೊದಲ ಸಿನಿಮಾ. ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರಿಂದ ‘ಹರ್ಷಿಣಿ ಸಿನಿಮಾಸ್’ ಸಂಸ್ಥೆಯ ಉದ್ಘಾಟನೆ ಆಗಿದೆ. ‘ಕಿರುನಗೆ’ ಸಿನಿಮಾ ಬಗ್ಗೆ ಚಿತ್ರತಂಡದವರು ಮಾಹಿತಿ ನೀಡಿದ್ದಾರೆ.

‘ಹರ್ಷಿಣಿ ಸಿನಿಮಾಸ್’ ಸಂಸ್ಥೆಗೆ ಬೆಂಬಲ ನೀಡಿದ ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡ
ಹೆಚ್​.ಡಿ. ದೇವೇಗೌಡ ಅವರಿಂದ ‘ಹರ್ಷಿಣಿ ಸಿನಿಮಾಸ್’ ಸಂಸ್ಥೆಯ ಉದ್ಘಾಟನೆ
ಮದನ್​ ಕುಮಾರ್​
|

Updated on: Sep 27, 2024 | 10:46 PM

Share

ರಾಜಕೀಯ ಮತ್ತು ಸಿನಿಮಾಗೆ ಹತ್ತಿರದ ನಂಟು. ಮಾಜಿ ಶಾಸಕರಾದ ಡಾ. ದೇವಾನಂದ್ ಚವ್ಹಾಣ ಮತ್ತು ಶ್ರೀಮತಿ ಸುನೀತಾ ದೇವಾನಂದ ಚವ್ಹಾಣ ಅವರ ಮಗಳು ಲತಾಶ್ರೀ ಡಿ.ಸಿ. ಈಗ ಸಿನಿಮಾ ನಿರ್ಮಾಪಕಿ ಆಗಿದ್ದಾರೆ. ಲತಾಶ್ರೀ ಅವರು ‘ಹರ್ಷಿಣಿ ಸಿನಿಮಾಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ಶುರುಮಾಡಿದ್ದಾರೆ. ಇತ್ತೀಚೆಗೆ ಈ ಹೊಸ ನಿರ್ಮಾಣ ಸಂಸ್ಥೆಯ ಉದ್ಘಾಟನೆ ಮಾಡಲಾಯಿತು. ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರು ಉದ್ಘಾಟನೆ ಮಾಡಿ, ಶುಭ ಕೋರಿದ್ದಾರೆ. ಅವರಿಂದ ಆಶೀರ್ವಾದ ಸಿಕ್ಕಿದ್ದಕ್ಕೆ ಲತಾಶ್ರೀ ಡಿ.ಸಿ ಮತ್ತು ಅವರ ತಂಡಕ್ಕೆ ಖುಷಿ ಆಗಿದೆ.

‘ಕಿರುನಗೆ’ ಸಿನಿಮಾದ ಕಥೆ ಏನು ಎಂಬ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಒಂದು ಹೆಣ್ಣು ತನ್ನ ಪ್ರೀತಿ, ಇಷ್ಟ, ಸಂತೋಷಗಳನ್ನೆಲ್ಲ ಬಿಟ್ಟು, ಹೆತ್ತವರ ಖುಷಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ. ಎಲ್ಲರಂತೆ ನಗುತ್ತಾ ಇರುವ ಆ ಹೆಣ್ಣಿನ ನಗುವಿನ ಹಿಂದೆ ಅನೇಕ ನಿಗೂಢ ವಿಷಯಗಳು ಇರುತ್ತವೆ. ಅದರ ಬೆನ್ನತ್ತಿ ಹೊರಟ ಗರ್ಭಿಣಿ ಮಹಿಳೆಯೊಬ್ಬಳ ಸುತ್ತ ಸುತ್ತುವ ಭಾವನಾತ್ಮಕ ಕಹಾನಿ ಈ ಸಿನಿಮಾದಲ್ಲಿ ಇರಲಿದೆ. ‘ಎ ಸ್ಮೈಲ್​ ಕ್ಯಾನ್​ ಹೈಡ್​ ಸೋ ಮಚ್’ ಎಂಬ ಟ್ಯಾಗ್​ ಲೈನ್​ ಕೂಡ ಇದೆ.

ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎಂಬುದು ‘ಹರ್ಷಿಣಿ ಸಿನಿಮಾಸ್’ ಆಶಯ. ಅದರ ಮೊದಲ ಹಂತವಾಗಿ ‘ಕಿರುನಗೆ’ ಸಿನಿಮಾವನ್ನು ಕೈಗೆತ್ತಿಕೊಳ್ಳಲಾಗಿದೆ. ‘ಸತ್ಯಂ’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಅಶೋಕ್ ಕಡಬ ಅವರು ಈಗ ‘ಕಿರುನಗೆ’ ಸಿನಿಮಾವನ್ನು ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ತಂಡಕ್ಕೆ ಶುಭವಾಗಲಿ ಎಂದು ದೇವೇಗೌಡ ಅವರು ಹಾರೈಸಿದ್ದಾರೆ.

ಇದನ್ನೂ ಓದಿ: ಇಳಿವಯಸ್ಸಿನಲ್ಲೂ ಕಾಶ್ಮೀರದ ಶಂಕರಾಚಾರ್ಯ ಬೆಟ್ಟದ ಮೆಟ್ಟಿಲು ಹತ್ತಿದ ದೇವೇಗೌಡ

‘ಕಿರುನಗೆ’ ಸಿನಿಮಾದಲ್ಲಿ ಮಹಿಳಾ ಪ್ರಧಾನ ಈ ಕಥಾಹಂದರ ಇರಲಿದ್ದು, ನಿರ್ಮಾಪಕಿ ಲತಾಶ್ರೀ ಡಿ.ಸಿ. ಅವರು ಕಥೆ ಬರೆದಿದ್ದಾರೆ. ಅಶೋಕ್ ಕಡಬ ಚಿತ್ರಕಥೆ ಬರೆದಿದ್ದಾರೆ. ಎ.ಆರ್. ರೆಹಮಾನ್ ಅವರ ಟೀಮ್​ನ ಸುಕೃತ್ ಅವರು ‘ಕಿರುನಗೆ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇದು ಮಹಿಳಾ ಪ್ರಧಾನ ಸಿನಿಮಾ ಆದ್ದರಿಂದ ಕನ್ನಡ ಚಿತ್ರರಂಗ ಜನಪ್ರಿಯ ನಟಿಯೊಬ್ಬರು ಈ ಮುಖ್ಯ ಪಾತ್ರ ಮಾಡಲಿದ್ದಾರೆ. ಆ ನಟಿ ಯಾರು ಎಂಬ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರಬೀಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.