ಹೊಕ್ಕುಳಿಗೆ ರಿಂಗ್ ಚುಚ್ಚಿಸಿಕೊಂಡ ‘ಅಧ್ಯಕ್ಷ’ ನಟಿ ಹೆಬಾ ಪಟೇಲ್; ನೋವಿನಲ್ಲೂ ನಕ್ಕ ನಟಿ

ನಟಿ ಹೆಬಾ ಪಟೇಲ್ ಇತ್ತೀಚೆಗೆ ತಮ್ಮ ಹೊಕ್ಕುಳಿಗೆ ಬೆಲ್ಲಿ ಪಿಯರ್ಸಿಂಗ್ ಮಾಡಿಸಿಕೊಂಡು ಸುದ್ದಿಯಾಗಿದ್ದಾರೆ. ಸಾಮಾನ್ಯವಾಗಿ ನೋವು ಕೊಡುವ ಈ ಪ್ರಕ್ರಿಯೆಯನ್ನು ಅವರು ಅಪ್ರತಿಮ ಧೈರ್ಯದಿಂದ ಎದುರಿಸಿದರು. ನೋವಿಲ್ಲದಂತೆ ನಗುತ್ತಲೇ ಪಿಯರ್ಸಿಂಗ್ ಮಾಡಿಸಿಕೊಂಡ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 15 ವರ್ಷಗಳ ಕನಸನ್ನು ನನಸು ಮಾಡಿಕೊಂಡ ಹೆಬಾ ಧೈರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೊಕ್ಕುಳಿಗೆ ರಿಂಗ್ ಚುಚ್ಚಿಸಿಕೊಂಡ ‘ಅಧ್ಯಕ್ಷ’ ನಟಿ ಹೆಬಾ ಪಟೇಲ್; ನೋವಿನಲ್ಲೂ ನಕ್ಕ ನಟಿ
ಹೆಬಾ ಪಟೇಲ್

Updated on: Jun 12, 2026 | 8:02 AM

ಕನ್ನಡದ ಸೂಪರ್ ಹಿಟ್ ಸಿನಿಮಾ ‘ಅಧ್ಯಕ್ಷ’ ನೆನಪಿದೆಯೇ? ಅದರಲ್ಲಿ ಶಿವರುದ್ರೇಗೌಡರ (ರವಿಶಂಕರ್) ಮುದ್ದಿನ ಮಗಳು ಐಶ್ವರ್ಯಾ ಆಗಿ, ಶರಣ್ ಪ್ರೇಯಸಿಯಾಗಿ ಕನ್ನಡಿಗರ ಮನಗೆದ್ದಿದ್ದ ನಟಿ ಹೆಬಾ ಪಟೇಲ್ (Hebah Patel) ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಅವರ ಹೊಸ ಸಾಹಸ. ಹೌದು, ನಟಿ ಹೆಬಾ ಪಟೇಲ್ ಇತ್ತೀಚೆಗೆ ತಮ್ಮ ಹೊಕ್ಕುಳಿಗೆ ಬೆಲ್ಲಿ ರಿಂಗ್ ಚುಚ್ಚಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಹೊಕ್ಕುಳಿಗೆ ರಿಂಗ್ ಚುಚ್ಚಿಸಿಕೊಳ್ಳುವಾಗ ವಿಪರೀತ ನೋವಾಗುತ್ತದೆ. ಆದರೆ, ಹೆಬಾ ಪಟೇಲ್ ಈ ಪ್ರಕ್ರಿಯೆಯುದ್ದಕ್ಕೂ ತೋರಿದ ಧೈರ್ಯ ಮತ್ತು ಅವರ ಮುಖದ ಭಾವನೆಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ.

ಸಾಮಾನ್ಯವಾಗಿ ಸೂಜಿ ಹಾಕಿಸಿಕೊಳ್ಳಲು ಹೆದರುವವರ ಮಧ್ಯೆ, ಹೆಬಾ ಪಟೇಲ್ ಅತ್ಯಂತ ಕೂಲ್ ಆಗಿ ನಿಂತು ಹೊಕ್ಕುಳಿಗೆ ಪಿಯರ್ಸಿಂಗ್ ಹಾಕಿಸಿಕೊಂಡಿದ್ದಾರೆ. ರಿಂಗ್ ಚುಚ್ಚುವಾಗ ಕಿರುಚಾಡದೆ, ಅಳದೆ, ಕೇವಲ ಮುಗುಳ್ನಗೆಯೊಂದಿಗೆ ಇಡೀ ಪ್ರಕ್ರಿಯೆಯನ್ನು ಎದುರಿಸಿದ್ದಾರೆ. ಅವರ ಈ ಅಪ್ರತಿಮ ಧೈರ್ಯವನ್ನು ನೋಡಿ ಅಲ್ಲಿದ್ದ ಆರ್ಟಿಸ್ಟ್ ಕೂಡ ‘ನೀವು ತುಂಬಾ ಸ್ಟ್ರಾಂಗ್ ಪ್ರೋ ತರ ತಡೆದುಕೊಂಡಿದ್ದೀರಿ’ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೆಬಾ ಪಟೇಲ್ ಪೋಸ್ಟ್

ಹೊಕ್ಕುಳಿಗೆ ಸುಂದರವಾದ ರಿಂಗ್ ಚುಚ್ಚುವ ಕೆಲಸ ಮುಗಿಯುತ್ತಿದ್ದಂತೆ ಹೆಬಾ ಪಟೇಲ್ ಸಂತೋಷಕ್ಕೆ ಪಾರವೇ ಇರಲಿಲ್ಲ. ತಕ್ಷಣವೇ ಕನ್ನಡಿಯ ಮುಂದೆ ನಿಂತು ತನ್ನ ಹೊಸ ಬೆಲ್ಲಿ ರಿಂಗ್ ನೋಡಿ ಹಿರಿ ಹಿರಿ ಹಿಗ್ಗಿದ್ದಾರೆ. ‘ಐ ಲವ್ ಇಟ್’ ಎನ್ನುತ್ತಾ ಮಗುವಿನಂತೆ ಸಖತ್ ಖುಷಿಯಿಂದ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: 12 ವರ್ಷದ ಬಳಿಕ ಕನ್ನಡಕ್ಕೆ ಮರಳಿದ ‘ಅಧ್ಯಕ್ಷ’ ನಟಿ ಹೆಬಾ ಪಟೇಲ್; ದಿಗಂತ್ ಜೊತೆ ಸಿನಿಮಾ

‘ನನ್ನ ಜೀವನದ ಕಳೆದ 15 ವರ್ಷಗಳಿಂದ ಹೊಕ್ಕುಳಿಗೆ ರಿಂಗ್ ಚುಚ್ಚಿಸಿಕೊಳ್ಳಬೇಕೆಂಬ ಆಸೆಯಿತ್ತು. ನನ್ನ ಹೊಟ್ಟೆಯ ಶೇಪ್ ಬದಲಾಗುವ ಮುನ್ನ ಈ ಆಸೆಯನ್ನು ಈಡೇರಿಸಿಕೊಂಡಿದ್ದೇನೆ’ ಎಂದು ಹೆಬಾ ಹೇಳಿಕೊಂಡಿದ್ದಾರೆ. ಸದ್ಯ ಹೆಬಾ ಪಟೇಲ್ ಅವರ ಈ ಬೆಲ್ಲಿ ಪಿಯರ್ಸಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರ ಧೈರ್ಯಕ್ಕೆ ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us