
ರೇಣುಕಾ ಸ್ವಾಮಿ ಕೊಲೆ ಬಗ್ಗೆ ದರ್ಶನ್ (Darshan) ಏನೆಂದರೆ ಏನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ವಿಚಾರಣೆ ವೇಳೆ ಅವರು ಇದೇ ಹೇಳಿಕೆಯನ್ನು ರಿಪೀಟ್ ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಏನೇ ಹೇಳಿಕೆ ನೀಡದಿದರೂ ಅವರ ವಿರುದ್ಧ ಸಾಕ್ಷ್ಯಗಳು ಬಲವಾಗಿ ಸಿಕ್ಕಿವೆ. ಸದ್ಯ ಈ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಹಾಗೂ ದರ್ಶನ್ ಎ2 ಆರೋಪಿ ಆಗಿದ್ದಾರೆ. ಒಟ್ಟೂ 17 ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
Published On - 8:58 am, Fri, 14 June 24