
ಇತ್ತೀಚೆಗೆ ಒಂದು ಟ್ರೆಂಡ್ ಆರಂಭ ಆಗಿತ್ತು. ‘ಇನ್ ಸರ್ಚ್ ಆಫ್ ಗೋಲ್ಡ್, ವಿ ಲಾಸ್ಟ್ ಡೈಮಂಡ್’ ಎಂಬುದು ಟ್ರೆಂಡ್ನ ಲೈನ್. ಅಂದರೆ ಚಿನ್ನದ ಹುಡುಕಾಟದಲ್ಲಿ ಅದಕ್ಕಿಂತ ಅತ್ಯಮೂಲ್ಯವಾದ ಡೈಮಂಡ್ ಕಳೆದು ಹೋಯಿತು ಎಂಬುದು ಇದರ ಅರ್ಥ. ಈ ಲೈನ್ಗಳನ್ನು ತಮಗೆ ಬೇಕಂತೆ ಬದಲಾಯಿಸಿಕೊಂಡು ಅನೇಕರು ಟ್ರೆಂಡ್ ಮಾಡಿದ ಉದಾಹರಣೆ ಇದೆ. ಇದಕ್ಕೆ ಕೆಲ ಪಕ್ಕಾ ದರ್ಶನ್ ಅಭಿಮಾನಿಗಳು ಕೂಡ ಸೇರುತ್ತಾರೆ. ಅವರು ಕೂಡ ದರ್ಶನ್ (Darshan) ವಿಚಾರದಲ್ಲಿ ಈ ಲೈನ್ ಬಳಕೆ ಮಾಡಿದ್ದಾರೆ. ‘ಡಿ ಬಾಸ್ ಹುಡುಕಾಟದಲ್ಲಿ ನಾವು ಚಾಲೆಂಜಿಂಗ್ ಸ್ಟಾರ್ನ ಕಳೆದುಕೊಂಡೆವು’ ಎಂದು ಹೇಳಿದ್ದಾರೆ.
ದರ್ಶನ್ ಅವರಿಗೆ ಹಲವು ಬಿರುದುಗಳು ಇವೆ. ದಾಸ, ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಹೀಗೆ ವಿವಿಧ ನಾಮಾಂಕಿತಗಳಿಂದ ಅವರು ಫೇಮಸ್ ಆಗಿದ್ದಾರೆ. ಈ ಮೊದಲು ಅವರನ್ನು ಬಹುತೇಕರು ಚಾಲೆಂಜಿಂಗ್ ಸ್ಟಾರ್ ಎಂದೇ ಕರೆಯುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರನ್ನು ಡಿ ಬಾಸ್ ಎಂದು ಕರೆಯಲಾಗುತ್ತಿದೆ. ಇದರಿಂದ ಚಾಲೆಂಜಿಂಗ್ ಸ್ಟಾರ್ ಬಿರುದು ಅಷ್ಟಾಗಿ ಬಳಕೆಯಲ್ಲಿ ಇಲ್ಲ.
ಇಲ್ಲಿ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ಹಾಗೂ ಡಿ ಬಾಸ್ನ ಬಿರುದನ್ನು ದರ್ಶನ್ ಸಿನಿಮಾ ಕಾಲಘಟ್ಟಕ್ಕೆ ತಕ್ಕಂತೆ ಬಳಸಿದ್ದಾರೆ. ಈ ಮೊದಲು ದರ್ಶನ್ ಅವರು ಆ್ಯಕ್ಷನ್ ಜೊತೆ ರೊಮ್ಯಾಂಟಿಕ್ ಹಿರೋ ಆಗಿ ಹೆಚ್ಚು ಇಷ್ಟ ಆಗುತ್ತಿದ್ದರು. ಆ ರೀತಿಯ ಹಲವು ಸಿನಿಮಾಗಳನ್ನು ಅವರು ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಮಾಸ್ ಸಿನಿಮಾಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನು, ದರ್ಶನ್ ಅವರು ಇತ್ತೀಚೆಗೆ ಬೇಡದ ಕಾರಣಗಳಿಂದಲೇ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಈ ಕಾರಣಕ್ಕೆ ಅನೇಕರು, ‘ಇನ್ ಸರ್ಚ್ ಆಫ್ ಡಿ ಬಾಸ್, ವಿ ಲಾಸ್ಟ್ ಚಾಲೆಂಜಿಂಗ್ ಸ್ಟಾರ್’ ಎಂದು ಹಾಕಿದ್ದಾರೆ. ದರ್ಶನ್ ಹಳೆಯ ಚಾರ್ಮ್ ಈಗ ಇಲ್ಲ ಎಂದು ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: ‘ದರ್ಶನ್ ಕೇಸಲ್ಲಿ ನೀನು ತಲೆ ತೂರಿಸಬೇಡ’: ಧನ್ವೀರ್ ಗೌಡಗೆ ಪೊಲೀಸ್ ವಾರ್ನಿಂಗ್
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆಗಿದ್ದಾರೆ. ಅವರು ಈ ಮೊದಲು ಜಾಮೀನು ಪಡೆದು ಹೊರಗಿದ್ದರು. ಈಗ ಜಾಮೀನು ರದ್ದಾಗಿರುವುದರಿಂದ ಮತ್ತೆ ಜೈಲು ಸೇರಿದ್ದಾರೆ. ಇದು ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:52 am, Mon, 18 August 25