ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದ ಮೊದಲ ಹಾಡು ಬಿಡುಗಡೆ

ಜುಲೈ 18ರಂದು ‘ಜೂನಿಯರ್’ ಸಿನಿಮಾ ಬಿಡುಗಡೆ ಆಗಲಿದೆ. ‘ವಾರಾಹಿ ಚಲನ ಚಿತ್ರಂ’ ಸಂಸ್ಥೆ ನಿರ್ಮಾಣ ಮಾಡಿದೆ. ಕಿರೀಟಿ ರೆಡ್ಡಿ, ಶ್ರೀಲೀಲಾ, ಜೆನಿಲಿಯಾ, ರವಿಚಂದ್ರನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ಪುಷ್ಪ’ ಖ್ಯಾತಿಯ ದೇವಿ ಶ್ರೀ ಪ್ರಸಾದ್ ಅವರು ‘ಜೂನಿಯರ್’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮೊದಲ ಹಾಡು ಬಿಡುಗಡೆಯಾಗಿದೆ.

ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದ ಮೊದಲ ಹಾಡು ಬಿಡುಗಡೆ
Junior Movie Team

Updated on: May 19, 2025 | 9:43 PM

ಜನಾರ್ದನ್ ರೆಡ್ಡಿ ಮಗ ಕಿರೀಟಿ ರೆಡ್ಡಿ (Kireeti Reddy) ಅವರು ‘ಜೂನಿಯರ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ಗೊತ್ತೇ ಇದೆ. ಬಹಳ ಅದ್ದೂರಿಯಾಗಿ ಈ ಸಿನಿಮಾ ಮೂಡಿಬರುತ್ತಿದೆ. ಇತ್ತೀಚಿಗೆ ‘ಜೂನಿಯರ್’ (Junior) ಬಿಡುಗಡೆ ದಿನಾಂಕ ಘೋಷಣೆ‌ ಮಾಡಲಾಗಿತ್ತು. ಈಗ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ಮೊದಲ ಹಾಡನ್ನು ರಿಲೀಸ್ ಮಾಡಲಾಗಿದೆ. ‘ಆದಿತ್ಯ ಮ್ಯೂಸಿಕ್’ ಮೂಲಕ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ‘ಲೆಟ್ಸ್ ಲಿವ್ ದಿಸ್ ಮೊಮೆಂಟ್..’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿದೆ.

ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ‘ಜೂನಿಯರ್’ ತಂಡ ಸಾಂಗ್ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನಟ ರವಿಚಂದ್ರನ್, ಖ್ಯಾತ ಛಾಯಾಗ್ರಹಕ ಕೆ.ಕೆ. ಸೆಂಥಿಲ್ ಕುಮಾರ್, ಜನಪ್ರಿಯ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್, ನಿರ್ದೇಶಕ ರಾಧಾಕೃಷ್ಣ, ನಿರ್ಮಾಪಕ ರಜನಿ ಕೊರಾಪಾಟಿ ಹಾಗೂ ಸಿನಿಮಾದ ಕಲಾವಿದರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

ರವಿಚಂದ್ರನ್ ಅವರು ಮಾತನಾಡಿದರು. ‘ನಿರ್ದೇಶಕ ರಾಧಾಕೃಷ್ಣ ಅವರಿಗೆ ಒಳ್ಳೆಯ ಗುಣವಿದೆ. ಅವರು ಕಥೆ ಹೇಳಿದ್ದು ಮನಸ್ಸು ತಟ್ಟುತ್ತದೆ. ಸಿನಿಮಾಗೆ ಡಬ್ ಮಾಡುವಾಗ ಇದು ಹ್ಯಾಪಿ ಜರ್ನಿ ಎನಿಸಿತು. ಒಂದು ಸಿನಿಮಾ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಮುಖ್ಯವಲ್ಲ. ಹೇಗೆ ಪ್ರೇಕ್ಷಕರನ್ನು ಕೂರಿಸುತ್ತದೆ ಎಂಬುದು ಮುಖ್ಯ’ ಎಂದು ರವಿಚಂದ್ರನ್ ಹೇಳಿದರು.

ಇದನ್ನೂ ಓದಿ
ವಿಶೇಷ ಸೀರೆ ಧರಿಸಿ ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ಕನ್ನಡದ ನಟಿ ದಿಶಾ ಮದನ್
ಊರ್ವಶಿ ರೌಟೆಲಾಗೆ ಕಾನ್ ಫೆಸ್ಟಿವಲ್​ನಲ್ಲಿ ಅವಮಾನ, ನಡೆದಿದ್ದೇನು?
ಊರ್ವಶಿ ರೌಟೇಲಾ ಧರಿಸಿದ ಈ ಗೌನ್ ಬೆಲೆ ಬರೋಬ್ಬರಿ 40 ಕೋಟಿ ರೂಪಾಯಿ!
17ನೇ ವಯಸ್ಸಿಗೆ ಮಹತ್ವದ ಸಾಧನೆ; ಕಾನ್ ಚಿತ್ರೋತ್ಸವದಲ್ಲಿ ನಿತಾಂಶಿ ಗೋಯಲ್

ಕಿರೀಟಿ ರೆಡ್ಡಿ ಮಾತನಾಡಿ, ‘ನಮ್ಮ ಚಿತ್ರ 3 ವರ್ಷ ತಡವಾಗಿದೆ. ಫೈಟ್ ಮಾಡುವಾಗ ನನಗೆ ಬೆನ್ನು ನೋವು ಆಗಿತ್ತು. ವಿಳಂಬಕ್ಕೆ ಅದೇ ಕಾರಣ ಹೊರತು ಬೇರೆ ಏನಿಲ್ಲ. ಪ್ರತಿಭಾವಂತ ಅನುಭವಿಗಳ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ’ ಎಂದು ಹೇಳಿದರು. ದೇವಿ ಶ್ರೀ ಪ್ರಸಾದ್ ಮಾತನಾಡಿ, ‘ನಾನು ಈ ಚಿತ್ರದ ಭಾಗವಾಗಿರುವುದಕ್ಕೆ ಖುಷಿ ಇದೆ. ಕಿರೀಟಿ ಒಳ್ಳೆಯ ಕಥೆ ಆಯ್ಕೆ ಮಾಡಿದ್ದಾರೆ’ ಎಂದು ಹೇಳಿದರು.

ಇದನ್ನೂ ಓದಿ: ಕಿರೀಟಿ ಸಿನಿಮಾ ಶೂಟಿಂಗ್​ ಸೆಟ್​ಗೆ ಭೇಟಿ ನೀಡಿದ ಶಿವಣ್ಣ; ಇಲ್ಲಿದೆ ವಿಡಿಯೋ

‘ಈ ಸಿನಿಮಾದಲ್ಲಿ ಪ್ರತಿ ಫ್ರೇಮ್ ಕೂಡ ವಿಶೇಷವಾಗಿದೆ’ ಎಂದು ನಿರ್ದೇಶಕ ರಾಧಾಕೃಷ್ಣ ಅವರು ಹೇಳಿದರು. ‘ಜೂನಿಯರ್’ ಸಿನಿಮಾದಲ್ಲಿ ಕಿರೀಟಿ ರೆಡ್ಡಿ ಜೊತೆ ಶ್ರೀಲೀಲಾ ಅಭಿನಯಿಸಿದ್ದಾರೆ. ‘ಲೆಟ್ಸ್ ಲೀವ್ ದಿಸ್ ಮೂವೆಂಟ್..’ ಹಾಡಿನಲ್ಲಿ ಅವರಿಬ್ಬರು ಡ್ಯಾನ್ಸ್ ಮಾಡಿದ್ದಾರೆ. ಕನ್ನಡದಲ್ಲಿ ಪವನ್ ಭಟ್ ಸಾಹಿತ್ಯ ಬರೆದಿದ್ದಾರೆ. ನಕುಲ್ ಅಭ್ಯಂಕರ್ ಧ್ವನಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.