ನಾಗ ಚೈತನ್ಯ ಜೊತೆ ನಟಿಸಲಿರುವ ಬಾಲಿವುಡ್ ಸ್ಟಾರ್ ನಟಿ
ನಾಗ ಚೈತನ್ಯ ಟಾಲಿವುಡ್ನ ಜನಪ್ರಿಯ ನಟ ಕೆಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರಾದರೂ ಮಾಸ್ ಹೀರೋ ಎನಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಇದೀಗ ನಾಗ ಚೈತನ್ಯ ದೊಡ್ಡ ಪ್ರಾಜೆಕ್ಟ್ ಒಂದಕ್ಕೆ ಕೈ ಹಾಕಿದ್ದು, ಬಾಲಿವುಡ್ನ ಸ್ಟಾರ್ ನಟಿ ನಾಗ ಚೈತನ್ಯಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ನಾಗ ಚೈತನ್ಯ ಟಾಲಿವುಡ್ನ ಸ್ಟಾರ್ ಹೀರೋ, ಆದರೆ ಪ್ರಭಾಸ್, ಜೂ ಎನ್ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್ ರೀತಿ ಭಾರಿ ದೊಡ್ಡ ಸ್ಟಾರ್ ಎನಿಸಿಕೊಳ್ಳಲು ವಿಫಲರಾಗಿದ್ದಾರೆ. ಭಾರಿ ದೊಡ್ಡ ಹಿಟ್ ಹಿಟ್ ಸಿನಿಮಾ ಒಂದನ್ನು ನೀಡುವಲ್ಲಿ ನಾಗ ಚೈತನ್ಯ ಈ ವರೆಗೆ ಸಫಲರಾಗಿಲ್ಲ. ಆದರೆ ಅವರ ಸಿನಿಮಾಗಳಿಗೆ ಪ್ರೇಕ್ಷಕರಂತೂ ಇದ್ದಾರೆ. ಕೌಟುಂಬಿಕ ಪ್ರೇಕ್ಷಕರನ್ನು ಅವರ ಸಿನಿಮಾಗಳು ಸೆಳೆಯುತ್ತವೆ, ಆದರೆ ಮಾಸ್ ಹೀರೋ ಇಮೇಜು ಅವರಿಂದ ದೂರವೇ ಇದೆ. ಇದೀಗ ನಾಗ ಚೈತನ್ಯ ದೊಡ್ಡ ಬಜೆಟ್ ಒಂದಕ್ಕೆ ಕೈ ಹಾಕಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ನ ಸ್ಟಾರ್ ನಟಿ ನಾಯಕಿಯಾಗಿ ನಟಿಸಲಿದ್ದಾರೆ.
ದೀಪಿಕಾ ಪಡುಕೋಣೆ, ಆಲಿಯಾ ಭಟ್ ಬಳಿಕ ಬಾಲಿವುಡ್ನ ಜನಪ್ರಿಯ ನಟಿಯಾಗಿರುವ ಜಾನ್ಹವಿ ಕಪೂರ್ ಈಗಾಗಲೇ ಒಂದು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಜಾನ್ಹವಿ ಕಪೂರ್ ನಾಗ ಚೈತನ್ಯ ಅವರ ಜೊತೆಗೂ ನಟಿಸಲಿದ್ದಾರೆ. ದೊಡ್ಡ ಹಿಟ್ ಸಿನಿಮಾ ಒಂದರ ಹುಡುಕಾಟದಲ್ಲಿರುವ ನಾಗ ಚೈತನ್ಯ ಈಗ ದೊಡ್ಡ ಬಜೆಟ್ ಸಿನಿಮಾಕ್ಕೆ ಕೈ ಹಾಕಿದ್ದು, ಸಿನಿಮಾದಲ್ಲಿ ದೊಡ್ಡ ತಾರಾಗಣ, ತಂತ್ರಜ್ಞರ ತಂಡ ಇರಲಿದೆ. ಸಿನಿಮಾದಲ್ಲಿ ನಾಯಕಿ ಪಾತ್ರಕ್ಕೆ ಸಾಕಷ್ಟು ಪ್ರಾಧಾನ್ಯತೆ ಇರುವ ಕಾರಣ ಜಾನ್ಹವಿಯನ್ನು ಚಿತ್ರತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ತೆಲುಗಿನ ಬಳಿಕ ತಮಿಳು ಚಿತ್ರರಂಗಕ್ಕೆ ಹೊರಟ ಜಾನ್ಹವಿ ಕಪೂರ್
ನಾಗ ಚೈತನ್ಯ ವೃತ್ತಿ ಬದುಕಿನ ದೊಡ್ಡ ಹಿಟ್ ಗಳಲ್ಲಿ ಒಂದಾದ ‘ಮಜಿಲಿ’ ಸಿನಿಮಾ ನಿರ್ದೇಶನ ಮಾಡಿರುವ ಶಿವ ನಿರ್ವಾನಾ ನಾಗ ಚೈತನ್ಯರ ಮುಂದಿನ ಸಿನಿಮಾ ನಿರ್ದೇಶನ ಮಾಡಲಿದ್ದು, ಈ ಸಿನಿಮಾ ಆಕ್ಷನ್ ಹಾಗೂ ರೊಮ್ಯಾಂಟಿಕ್ ಕತೆಯನ್ನು ಒಳಗೊಂಡಿದೆ. ಸಿನಿಮಾದ ನಾಯಕಿಗೆ ಗ್ಲಾಮರಸ್ ಪಾತ್ರ ಇರುವ ಕಾರಣ ಜಾನ್ಹವಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸಿನಿಮಾದಲ್ಲಿ ನಾಗ ಚೈತನ್ಯ ಮಾಸ್ ಹಾಗೂ ಕ್ಲಾಸ್ ಎರಡು ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಾಗ ಚೈತನ್ಯ ಪ್ರಸ್ತುತ ‘ತಾಂಡೇಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿ. ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಎರಡನೇ ಬಾರಿ ಸಿನಿಮಾಕ್ಕಾಗಿ ಜೊತೆಯಾಗಿದ್ದಾರೆ. ಸಿನಿಮಾ ಕರಾವಳಿ ಭಾಗದ ಕತೆ ಹೊಂದಿದ್ದು, ಮೀನುಗಾರನಾಗಿ ನಾಗ ಚೈತನ್ಯ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣವನ್ನು ಕರ್ನಾಟಕದ ಉಡುಪಿ ಇನ್ನೂ ಕೆಲವು ಕರಾವಳಿ ಭಾಗಗಳಲ್ಲಿಯೂ ಮಾಡಲಾಗಿದೆ. ಸಿನಿಮಾ ಶೀಘ್ರವೇ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ