‘ಜೋಡಿಹಕ್ಕಿ’ ಧಾರಾವಾಹಿ ನಟ ತಾಂಡವ್ ರಾಮ್​ಗೆ ಸಿನಿಮಾ ಆಫರ್​; ಭರತ್​ ನಾವುಂದ ನಿರ್ದೇಶನ

‘ಅಡಚಣೆಗಾಗಿ ಕ್ಷಮಿಸಿ’ ಮತ್ತು ‘ಮುಗಿಲ್ ಪೇಟೆ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಭರತ್​ ಎಸ್​. ನಾವುಂದ ಅವರು ಈಗ 3ನೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ‘ಜೋಡಿಹಕ್ಕಿ’ ಧಾರಾವಾಹಿ ಖ್ಯಾತಿಯ ನಟ ತಾಂಡವ್ ರಾಮ್ ಅವರು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

‘ಜೋಡಿಹಕ್ಕಿ’ ಧಾರಾವಾಹಿ ನಟ ತಾಂಡವ್ ರಾಮ್​ಗೆ ಸಿನಿಮಾ ಆಫರ್​; ಭರತ್​ ನಾವುಂದ ನಿರ್ದೇಶನ
ತಾಂಡವ್​ ರಾಮ್​, ಭರತ್​ ಎಸ್​. ನಾವುಂದ

Updated on: Oct 01, 2023 | 11:33 AM

ಕಿರುತೆರೆಯ ಅನೇಕ ಪ್ರತಿಭೆಗಳು ಹಿರಿತೆರೆಯಲ್ಲಿ ಮಿಂಚುತ್ತಿದ್ದಾರೆ. ಧಾರಾವಾಹಿಗಳಲ್ಲಿ ಗುರುತಿಸಿಕೊಂಡ ಹಲವರಿಗೆ ಸ್ಯಾಂಡಲ್​ವುಡ್​ನಲ್ಲಿ (Sandalwood) ಅವಕಾಶ ಸಿಕ್ಕಿದೆ. ‘ಗೋಲ್ಡನ್​ ಸ್ಟಾರ್​’, ರಾಧಿಕಾ ಪಂಡಿತ್​, ಸೇರಿದಂತೆ ಅನೇಕ ಕಲಾವಿದರು ಕಿರುತೆರೆಯಿಂದಲೇ ಬಂದು ಹಿರಿತೆರೆಯಲ್ಲಿ ಯಶಸ್ಸು ಕಂಡಿದ್ದಾರೆ. ಇಂದಿಗೂ ಅನೇಕ ಸೀರಿಯಲ್​ ನಟ-ನಟಿಯರು ಸಿನಿಮಾರಂಗಕ್ಕೆ ಎಂಟ್ರಿ ನೀಡುತ್ತಲೇ ಇದ್ದಾರೆ. ದೊಡ್ಡ ಪರದೆಯಲ್ಲಿ ಸಕ್ಸಸ್​ ಕಾಣಲು ಹೊರಟಿರುವ ನಟರ ಸಾಲಿನಲ್ಲಿ ತಾಂಡವ್​ ರಾಮ್​ (Thandav Ram) ಕೂಡ ಇದ್ದಾರೆ. ಜೀ ಕನ್ನಡದ ‘ಜೋಡಿಹಕ್ಕಿ’ ಧಾರಾವಾಹಿ (Jodi Hakki Serial) ಮೂಲಕ ಅವರು ಫೇಮಸ್​ ಆಗಿದ್ದಾರೆ. ಈಗ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ..

2021ರಲ್ಲಿ ಮನೋರಂಜನ್​ ರವಿಚಂದ್ರನ್​ ನಟನೆಯ ‘ಮುಗಿಲ್ ಪೇಟೆ’ ಸಿನಿಮಾ ಬಿಡುಗಡೆ ಆಯಿತು. ಆ ಸಿನಿಮಾಗೆ ನಿರ್ದೇಶಕ ಭರತ್ ಎಸ್. ನಾವುಂದ ಅವರು ಆ್ಯಕ್ಷನ್​-ಕಟ್​ ಹೇಳಿದ್ದರು. ಈಗ ಅವರು ಮತ್ತೊಂದು ಹೊಸ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ‘ಮುಗಿಲ್ ಪೇಟೆ’ ಸಿನಿಮಾ ಮೂಲಕ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದ್ದ ಅವರು ‘ಜೋಡಿಹಕ್ಕಿ’ ಧಾರಾವಾಹಿ ಖ್ಯಾತಿಯ ನಟ ತಾಂಡವ್ ರಾಮ್ ಜೊತೆ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾ ಮೂಲಕ ತಾಂಡವ್​ ರಾಮ್​ ಅವರು ಹೀರೋ ಆಗಿ ಚಂದನವನಕ್ಕೆ ಎಂಟ್ರಿ ನೀಡಲಿದ್ದಾರೆ.

ಇದನ್ನೂ ಓದಿ: ನಟ ನಾಗಭೂಷಣ್​ ಕಾರು ಅಪಘಾತ; ಪಾದಚಾರಿ ಸಾವು; ಇನ್ನೊಬ್ಬರ ಸ್ಥಿತಿ ಗಂಭೀರ

ಭರತ್ ಎಸ್. ನಾವುಂದ ಅವರು ‘ಅಡಚಣೆಗಾಗಿ ಕ್ಷಮಿಸಿ’ ಚಿತ್ರದ ಮೂಲಕ ನಿರ್ದೇಶಕನಾಗಿ ಪ್ರೇಕ್ಷಕರಿಗೆ ಪರಿಚಯಗೊಂಡಿದ್ದರು. ಆ ನಂತರ ಅವರು ಮನ ಸೆಳೆಯುವ ಪ್ರೇಮಕಥೆ ಇರುವ, ಕೌಟುಂಬಿಕ ಮೌಲ್ಯಗಳನ್ನು ಒಳಗೊಂಡ ‘ಮುಗಿಲ್ ಪೇಟೆ’ ಚಿತ್ರವನ್ನು ನಿರ್ದೇಶಿಸಿದರು. ಆ ಎರಡು ಸಿನಿಮಾಗಳಿಂದ ಪಡೆದ ಅನುಭವವನ್ನು ಇಟ್ಟುಕೊಂಡು ಈಗ ಅವರು ಮೂರನೇ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರದ ಬಗ್ಗೆ ಹೆಚ್ಚಿನ ಅಪ್​ಡೇಟ್​ ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ.

ಇದನ್ನೂ ಓದಿ: ‘Modi’ ಸಿನಿಮಾಗೆ ಹಾಲಿವುಡ್​ನಲ್ಲಿ ಶೂಟಿಂಗ್ ಶುರು; ಜಾನಿ ಡೆಪ್​ ನಿರ್ದೇಶನ: ಇದು ಯಾರ ಜೀವನದ ಕಥೆ?

ನಟ ತಾಂಡವ್ ರಾಮ್ ಅವರು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರಿಗೆ ಸಿನಿಮಾದಲ್ಲಿ ಹೀರೋ ಆಗಿ ನಟಿಸುವ ಚಾನ್ಸ್​ ಸಿಕ್ಕಿದೆ. ವಿಶೇಷ ಏನೆಂದರೆ, ಮೊದಲ ಸಿನಿಮಾದಲ್ಲೇ ಅವರು ಏಕಕಾಲಕ್ಕೆ ಕನ್ನಡ ಮತ್ತು ತೆಲುಗು ಪ್ರೇಕ್ಷಕರ ಎದುರು ಬರಲಿದ್ದಾರೆ. ಈ ಎರಡೂ ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ. ಪಾತ್ರವರ್ಗದಲ್ಲಿ ಅನೇಕ ಕಲಾವಿದರು ಇರಲಿದ್ದಾರೆ. ‘ಎ ಕ್ಯೂಬ್ ಫಿಲ್ಮ್ಸ್​’ ಬ್ಯಾನರ್​ ಮೂಲಕ ಅದ್ದೂರಿಯಾಗಿಯೇ ಈ ಚಿತ್ರ ನಿರ್ಮಾಣ ಆಗಲಿದೆ. ಚಿತ್ರದ ಶೀರ್ಷಿಕೆ ಏನು? ನಾಯಕಿ ಯಾರು? ತಂತ್ರಜ್ಞರು ಯಾರೆಲ್ಲ ಇದ್ದಾರೆ ಎಂಬ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರಬೀಳಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us