
ಯಾವುದಾದರೂ ಹೀರೋ ಜೊತೆ ಈಗಾಗಲೇ ಕೆಲಸ ಮಾಡಿದ್ದರೆ ಅಥವಾ ಮುಂದೆ ಕೆಲಸ ಮಾಡುವ ಒಪ್ಪಂದ ಆಗಿದ್ದರೆ ಮಾತ್ರ ನಿರ್ಮಾಣ ಸಂಸ್ಥೆಗಳು ಆ ಹೀರೋಗಳಿಗೆ ಬರ್ತ್ಡೇ ವಿಶ್ ಮಾಡುತ್ತಾರೆ. ಜೂ.ಎನ್ಟಿಆರ್ ಜೊತೆ ಸಿನಿಮಾ ಮಾಡೋದಾಗಿ ಮೈತ್ರಿ ಮೂವೀ ಮೇಕರ್ಸ್ ಈ ಮೊದಲೇ ಘೋಷಣೆ ಮಾಡಿತ್ತು. ಅಂದಿನಿಂದಲೂ ಜೂ.ಎನ್ಟಿಆರ್ ಜನ್ಮದಿನಕ್ಕೆ ಈ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡುತ್ತಾ ಬರುತ್ತಿದೆ. ಈಗ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಜೂ.ಎನ್ಟಿಆರ್ಗೆ ಜನ್ಮದಿನದ ವಿಶ್ ಬಂದಿದ್ದು ಸಾಕಷ್ಟು ಕುತೂಹಲ ಮೂಡಿದೆ.
ಜೂನಿಯರ್ ಎನ್ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾದ ಗ್ಲಿಂಪ್ಸ್ ರಿಲೀಸ್ ಆಗಿದೆ. ಇದನ್ನು ಹೊಂಬಾಳೆ ಸಂಭ್ರಮಿಸಿದೆ. ಜೂನಿಯರ್ ಎನ್ಟಿಆರ್ಗೆ ವಿಶ್ ಮಾಡುವಾಗ ‘ಡ್ರ್ಯಾಗನ್’ ಸಿನಿಮಾ ಬಗ್ಗೆಯೂ ಮೆಚ್ಚುಗೆ ಸೂಚಿಸಿದೆ. ಇದರ ಹಿಂದೆ ದೊಡ್ಡದೊಂದು ಲೆಕ್ಕಾಚಾರ ಅಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಪ್ರಭಾಸ್ ಅವರ ‘ಸಲಾರ್’ ಚಿತ್ರಕ್ಕೆ ಬಂಡವಾಳ ಹೂಡಿದೆ. ಹಿಂದಿ, ತಮಿಳಿನಲ್ಲೂ ಈ ಸಂಸ್ಥೆ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಶೀಘ್ರದಲ್ಲೇ ಜೂ.ಎನ್ಟಿಆರ್ ಜೊತೆ ಹೊಂಬಾಳೆ ಸಿನಿಮಾ ಮಾಡೋ ಸಾಧ್ಯತೆ ಇದೆ ಎನ್ನಲಾಗಿದೆ. ತೆರೆಮರೆಯಲ್ಲಿ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ. ಈ ಚಿತ್ರವನ್ನು ನಿರ್ದೇಶನ ಮಾಡುವವರು ಯಾರು ಎಂಬ ಕುತೂಹಲ ಮೂಡಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂಬುದು ಅನೇಕರ ಆಸೆ.
ಇದನ್ನೂ ಓದಿ: ಎರಡು ವರ್ಷಕ್ಕೊಂದು ಅನಿಮೇಟೆಡ್ ಸಿನಿಮಾ; 10 ವರ್ಷದ ಪ್ಲ್ಯಾನ್ ರೆಡಿ ಮಾಡಿದ ಹೊಂಬಾಳೆ
ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರ ವಿದೇಶಿ ಹಾಗೂ ಕರ್ನಾಟಕದ ಹಂಚಿಕೆ ಹಕ್ಕನ್ನು ಪಡೆದಿದೆ. ‘ಡ್ರ್ಯಾಗನ್’ ಚಿತ್ರದ ಥಿಯೇಟ್ರಿಕಲ್ ರಿಲೀಸ್ ಮತ್ತು ವಿತರಣೆಯ ಜವಾಬ್ದಾರಿಯನ್ನು ಹೊಂಬಾಳೆ ವಹಿಸಿಕೊಳ್ಳುವ ಸಾಧ್ಯತೆಗಳೂ ದಟ್ಟವಾಗಿವೆ. ಈ ಕಾರಣಕ್ಕೆ ಅದು ತಮ್ಮದೇ ಸಿನಿಮಾ ಎಂಬ ರೀತಿಯಲ್ಲಿ ಸಂಭ್ರಮಿಸಿದೆ ಎಂದು ವಿಶ್ಲೇಷಿಸಲಾಗುತ್ತಾ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.