Jr NTR: ಕನ್ನಡದ ಜನತೆಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಜೂನಿಯರ್​ ಎನ್​ಟಿಆರ್​​

| Updated By: ಮದನ್​ ಕುಮಾರ್​

Updated on: Oct 31, 2022 | 7:30 AM

Jr NTR | Kannada Rajyotsava: ಜೂನಿಯರ್​ ಎನ್​ಟಿಆರ್​ ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇದೆ. ಅನೇಕ ವೇದಿಕೆಗಳಲ್ಲಿ ಅವರು ಈ ವಿಚಾರವನ್ನು ಹೇಳಿಕೊಂಡಿದ್ದುಂಟು.

Jr NTR: ಕನ್ನಡದ ಜನತೆಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಜೂನಿಯರ್​ ಎನ್​ಟಿಆರ್​​
ಕರ್ನಾಟಕ ಧ್ವಜ, ಜೂನಿಯರ್​ ಎನ್​ಟಿಆರ್​
Follow us on

ನವೆಂಬರ್​ ಬಂದರೆ ಕರುನಾಡಿನಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗುತ್ತದೆ. ಎಲ್ಲೆಲ್ಲೂ ನಾಡಧ್ವಜ ರಾರಾಜಿಸುತ್ತದೆ. ಕನ್ನಡ ರಾಜ್ಯೋತ್ಸವ (Karnataka Rajyotsava) ಆಚರಣೆಗೆ ಇಡೀ ಕರ್ನಾಟಕ ಸಜ್ಜಾಗುತ್ತಿದೆ. ಈ ಬಾರಿಯ ರಾಜ್ಯೋತ್ಸವ ಸಂಭ್ರಮ ಅಪ್ಪು ಅಭಿಮಾನಿಗಳಿಗೆ ಹೆಚ್ಚು ವಿಶೇಷವಾಗಿರಲಿದೆ. ಯಾಕೆಂದರೆ, ನವೆಂಬರ್​ 1ರಂದು ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸ್ಟಾರ್​ ನಟರಾದ ಜೂನಿಯರ್​ ಎನ್​ಟಿಆರ್​ ಹಾಗೂ ರಜನಿಕಾಂತ್​ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಅದಕ್ಕೀಗ ಕ್ಷಣಗಣನೆ ಆರಂಭ ಆಗಿದ್ದು, ಇಡೀ ಕರುನಾಡಿನ ಜನತೆಗೆ ಜೂನಿಯರ್​ ಎನ್​ಟಿಆರ್​ (Jr NTR) ಅವರು ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭಕ್ಕೆ ಆಗಮಿಸಬೇಕು ಎಂದು ಜೂನಿಯರ್​ ಎನ್​ಟಿಆರ್​ ಅವರಿಗೆ ಕರ್ನಾಟಕ ಸರ್ಕಾರದ ಕಡೆಯಿಂದ ಆಹ್ವಾನ ಕಳಿಸಲಾಗಿತ್ತು. ಅದನ್ನು ಸ್ವೀಕರಿಸಿರುವ ಅವರು ಅಧಿಕೃತವಾಗಿ ಪತ್ರ ಮುಖೇನ ತಮ್ಮ ಉತ್ತರ ತಿಳಿಸಿದ್ದಾರೆ. ಈ ಸಮಾರಂಭಕ್ಕೆ ತಾವು ಬರುವುದು ಖಚಿತ ಎಂದು ಅವರು ಹೇಳಿದ್ದಾರೆ.

‘ಅಪ್ಪು ಅವರಿಗೆ ಈ ಗೌರವ ಸಲ್ಲುತ್ತಿರುವಾಗ ನಾನು ಅಲ್ಲಿ ಇರುವುದು ನನ್ನ ಪಾಲಿಗೆ ಹೆಮ್ಮೆಯ ಕ್ಷಣ ಮಾತ್ರವಲ್ಲದೇ ಅದು ನನ್ನ ಕರ್ತವ್ಯ ಕೂಡ ಹೌದು. ಕರ್ನಾಟಕ ಸರ್ಕಾರ ಆಯೋಜಿಸಿರುವ ಆ ಸಮಾರಂಭದಲ್ಲಿ ನನ್ನ ಉಪಸ್ಥಿತಿ ಇರುತ್ತದೆ ಎಂಬುದನ್ನು ಈ ಮೂಲಕ ಖಚಿತ ಪಡಿಸುತ್ತೇನೆ. ಇದೇ ಸಂದರ್ಭದಲ್ಲಿ ನಾನು ಕರುನಾಡಿನ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯ ತಿಳಿಸುತ್ತೇನೆ’ ಎಂದು ಜೂನಿಯರ್​ ಎನ್​ಟಿಆರ್​ ಪತ್ರ ಬರೆದಿದ್ದಾರೆ.

ಇದನ್ನೂ ಓದಿ
Jr NTR: ಜೂನಿಯರ್​ ಎನ್​ಟಿಆರ್​ ಮನೆಯಲ್ಲಿ ಅಪ್ಪು ಫೋಟೋ; ಕರುನಾಡ ಗೆಳೆಯನಿಗೆ ತೆಲುಗು​ ನಟನ ಗೌರವ
ಪುನೀತ್​ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ; ​ ನಟ ಜೂ. ಎನ್​ಟಿಆರ್-ರಜನಿಕಾಂತ್​ ಭಾಗಿ
ಜ್ಯೂ. ಎನ್​ಟಿಆರ್ ಭೇಟಿ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ​; ಇಲ್ಲಿದೆ ಫೋಟೋ ಗ್ಯಾಲರಿ
‘ಪುನೀತ್​ ನಟನೆಯ ಜೇಮ್ಸ್​ ನೋಡಿದ್ರಾ?’; ಈ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸಿದ ಜ್ಯೂ.ಎನ್​ಟಿಆರ್​

ಜೂನಿಯರ್​ ಎನ್​ಟಿಆರ್​ ಅವರ ತಾಯಿ ಕರ್ನಾಟಕದ ಕುಂದಾಪುರದವರು. ಆ ಕಾರಣದಿಂದಲೂ ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ. ಅನೇಕ ವೇದಿಕೆಗಳಲ್ಲಿ ಅವರು ಈ ವಿಚಾರವನ್ನು ಹೇಳಿಕೊಂಡಿದ್ದುಂಟು. ಈ ಹಿಂದೆ ತೆಲುಗು ಬಿಗ್​ ಬಾಸ್​ ನಡೆಸಿಕೊಡುವಾಗಲೂ ಅವರು ಕನ್ನಡದಲ್ಲಿ ಮಾತನಾಡಿದ್ದರು. ಆ ವಿಡಿಯೋ ವೈರಲ್​ ಆಗಿತ್ತು. ಈ ವರ್ಷ ಅವರಿಗೆ ‘ಆರ್​ಆರ್​ಆರ್’ ಸಿನಿಮಾದಿಂದ ದೊಡ್ಡ ಯಶಸ್ಸು ಸಿಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.