‘ಜೈ ಭೀಮ್’ ಘೋಷಣೆಗಳ ನಡುವೆ ಹುಟ್ಟೂರಿನಲ್ಲಿ ಶಿವರಾಮ್ ಅಂತ್ಯಕ್ರಿಯ

K Shivaram: ಮಾಜಿ ಐಎಎಸ್ ಅಧಿಕಾರಿ, ಸಿನಿಮಾ ನಟ, ರಾಜಕಾರಣಿ ಕೆ ಶಿವರಾಮ್ ಅವರ ಅಂತ್ಯಸಂಸ್ಕಾರ ಅವರ ಹುಟ್ಟೂರಾದ ಊರಗವಳ್ಳಿಯಲ್ಲಿ ನೆರವೇರಿತು.

‘ಜೈ ಭೀಮ್’ ಘೋಷಣೆಗಳ ನಡುವೆ ಹುಟ್ಟೂರಿನಲ್ಲಿ ಶಿವರಾಮ್ ಅಂತ್ಯಕ್ರಿಯ
Follow us
ಮಂಜುನಾಥ ಸಿ.
|

Updated on: Mar 01, 2024 | 8:29 PM

ಮಾಜಿ ಐಎಎಸ್ ಅಧಿಕಾರಿ, ನಟ ಕೆ ಶಿವರಾಮ್ (K Shivaram) ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಊರಗವಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಕುಟುಂಬಸ್ಥರು, ಛಲವಾದಿ ಮಹಾಸಭಾದ ಸದಸ್ಯರು, ಸ್ವಾಮೀಜಿಗಳು, ಕುಟುಂಬಸ್ಥರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಶಿವರಾಮ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯ್ತು. ಶಿವರಾಮ್ ಅವರಿಗೆ ಸರ್ಕಾರಿ ಗೌರವಗಳು ದೊರೆಯಲಿಲ್ಲವೆಂಬ ಬೇಸರದ ನಡುವೆಯೇ ಅಭಿಮಾನಿಗಳು, ಕುಟುಂಬಸ್ಥರು ಶಿವರಾಮ್ ಅವರಿಗೆ ಅಂತಿಮ ವಿದಾಯ ಹೇಳಿದರು.

ಶಿವರಾಮ್ ಅವರು ಫೆಬ್ರವರಿ 29ರಂದು ನಿಧನ ಹೊಂದಿದ್ದರು, ಇಂದು (ಮಾರ್ಚ್ 1) ರ ಮುಂಜಾನೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರುಗಳು, ಶಾಸಕರು, ಬಿಜೆಪಿ ಮುಖಂಡರುಗಳು ಆಗಮಿಸಿ ಶಿವರಾಮ್ ಅವರ ಅಂತಿಮ ದರ್ಶನ ಪಡೆದರು. ಚಿತ್ರರಂಗದ ಹಲವು ಗಣ್ಯರು ಸಹ ಆಗಮಿಸಿ ಅಂತಿಮ ದರ್ಶನ ಪಡೆದರು.

ಶಿವರಾಮ್ ಅವರ ಅಂತ್ಯಸಂಸ್ಕಾರಕ್ಕೆ ಸರ್ಕಾರ ಜಾಗ ನೀಡುತ್ತದೆ, ಅವರಿಗೆ ಸರ್ಕಾರಿ ಗೌರವಗಳು ನೀಡಲಾಗುತ್ತದೆ ಎಂಬ ಭರವಸೆ ದೊರಕಿತ್ತು, ಕುಟುಂಬಸ್ಥರು, ಅಭಿಮಾನಿಗಳು ಸಹ ಸರ್ಕಾರದ ಮಾತನ್ನು ನಂಬಿ ಬೆಳಿಗಿನಿಂದ ಕಾದಿದ್ದೇ ಬಂತು ಆದರೆ ಸರ್ಕಾರದಿಂದ ಗೌರವ ಲಭಿಸಲಿಲ್ಲ. ಛಲವಾದಿ ಮಹಾಸಭಾದ ಜಾಗದಲ್ಲಿಯೇ ಅವರ ಅಂತ್ಯಸಂಸ್ಕಾರ ಮಾಡಲು ಸಹ ಸಂಘದ ಸದಸ್ಯರು ತೀರ್ಮಾನಿಸಿದರು. ಆದರೆ ಕೊನೆಯ ಕ್ಷಣದಲ್ಲಿ ಅದನ್ನೂ ಸಹ ಬದಲಾವಣೆ ಮಾಡಲಾಯ್ತು. ಅಂತಿಮವಾಗಿ ಶಿವರಾಮ್ ಅವರ ಹುಟ್ಟೂರಾದ ಊರಗವಳ್ಳಿಯಲ್ಲಿಯೇ ಶಿವರಾಮ್ ಅವರ ಅಂತ್ಯ ಸಂಸ್ಕಾರ ನೆರವೇರಿತು.

ಇದನ್ನೂ ಓದಿ:K Shivaram: ಕೊಪ್ಪಳದ ಫಸ್ಟ್ ಜಿಲ್ಲಾಧಿಕಾರಿ, ಇತಿಹಾಸದ ಪುಟಗಳಲ್ಲಿ ಅಜರಾಮರಾಗಿ ಉಳಿದ ಕೆ ಶಿವರಾಮ್

ಅಂತ್ಯಸಂಸ್ಕಾರದ ವೇಳೆ ಛಲವಾದಿ ಮಹಾಸಭಾ ಸದಸ್ಯರು ‘ಜೈ ಭೀಮ್’ ಘೋಷಣೆಗಳನ್ನು ಕೂಗಿದರು. ಶಿವರಾಮ್ ಅವರ ಅಳಿಯ, ನಟ ಪ್ರದೀಪ್ ಅವರು ಅಂತ್ಯಸಂಸ್ಕಾರದ ವಿಧಿ-ವಿಧಾನಗಳನ್ನು ನೆರವೇರಿಸಿದರು. ಬಡ ಕುಟುಂಬದಲ್ಲಿ ಜನಿಸಿ ಹೋರಾಟದ ಜೀವನ ನಡೆಸಿ ತಾನು ಕನಸು ಕಂಡಂತೆ ಐಎಎಸ್ ಅಧಿಕಾರಿಯಾಗಿ ಜೊತೆಗೆ ಸಿನಿಮಾ ನಾಯಕರೂ ಅದ ಶಿವರಾಮ್, ಹಲವರಿಗೆ ಸ್ಪೂರ್ತಿಯಾಗಿದ್ದರು.

ಕೆ ಶಿವರಾಮ್ ಅವರಿಗೆ ಫೆಬ್ರವರಿ 3ರಂದು ರಕ್ತದೊತ್ತಡದಲ್ಲಿ ಏರು-ಪೇರಾಗಿತ್ತು. ಹಾಗಾಗಿ ಅವರನ್ನು ಬೆಂಗಳೂರಿನ ಎಚ್​ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಹೃದಯಾಘಾತವಾಯ್ತು, ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು, ಅಂತಿಮವಾಗಿ ಫೆಬ್ರವರಿ 29ರಂದು ಸಹ ಹೃದಯಾಘಾತವಾಗಿ ಅವರು ನಿಧನ ಹೊಂದಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು