ಪರ್ಫೆಕ್ಟ್ ಟೈಮಿಂಗ್: ಕಮಲ್ ಹಾಸನ್​ಗೆ ‘ಕನ್ನಡ’ ಪುಸ್ತಕ ನೀಡಿದ ರಂಜನಿ ರಾಘವನ್

ಕಮಲ್ ಹಾಸನ್ ಅವರ 'ಕನ್ನಡ ತಮಿಳಿನಿಂದ ಹುಟ್ಟಿದೆ' ಎಂಬ ಹೇಳಿಕೆ ವಿವಾದ ಉಂಟಾಗಿದೆ. ನಟಿ ರಂಜನಿ ರಾಘವನ್ ಅವರು ತಮ್ಮ ಕನ್ನಡ ಪುಸ್ತಕವನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಂಜನಿ ಅವರು ಒಂದೇ ಒಂದು ಪೋಟೋ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ಪರ್ಫೆಕ್ಟ್ ಟೈಮಿಂಗ್: ಕಮಲ್ ಹಾಸನ್​ಗೆ ‘ಕನ್ನಡ’ ಪುಸ್ತಕ ನೀಡಿದ ರಂಜನಿ ರಾಘವನ್
ರಂಜನಿ

Updated on: Jun 02, 2025 | 2:29 PM

ಕಮಲ್ ಹಾಸನ್ (Kamal Haasan) ಅವರು ಸದ್ಯ ವಿವಾದದ ಕೇಂದ್ರ ಬಿಂದು ಆಗಿದ್ದಾರೆ. ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂದು ಹೇಳಿರುವುದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಕೆಲ ಕನ್ನಡ ಸೆಲೆಬ್ರಿಟಿಗಳು ನಟನ ವಿರೋಧಿಸಿದರೆ ಇನ್ನೂ ಕೆಲವರು ಈ ಬಗ್ಗೆ ಮೌನ ಕಾಪಾಡಿಕೊಂಡಿದ್ದಾರೆ. ಈಗ ನಟಿ, ನಿರ್ದೇಶಕಿ ಹಾಗೂ ಕಥೆ ಬರಹಗಾರ್ತಿ ರಂಜನಿ ರಾಘವನ್ ಅವರು ಕಮಲ್ ಹಾಸನ್​ಗೆ ಅವರು ಬರೆದ ಪುಸ್ತಕ ನೀಡಿದ್ದಾರೆ. ಅದೂ ಕನ್ನಡದ್ದು ಅನ್ನೋದು ವಿಶೇಷ.

ಕಮಲ್ ಹಾಸನ್ ಅವರು ಆಡಿರುವ ಮಾತಿಗೆ ಕ್ಷಮೆ ಕೇಳಬೇಕು ಎಂದು ಕನ್ನಡಿಗರು ಪಟ್ಟು ಹಿಡಿದಿದ್ದಾರೆ. ಅತ್ತ ಕಮಲ್ ಹಾಸನ್ ಕ್ಷಮೆ ಕೇಳುವ ಮಾತೇ ಇಲ್ಲ ಎಂದಿದ್ದಾರೆ. ಹೀಗಾಗಿ, ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ರಿಲೀಸ್​ಗೆ ಅಡಚಣೆ ಉಂಟಾಗಿದೆ. ಈ ಮಧ್ಯೆ ಅನೇಕ ಸೆಲೆಬ್ರಿಟಿಗಳು ಕಮಲ್ ವಿರುದ್ಧ ಪೋಸ್ಟ್ ಹಾಕುತ್ತಿದ್ದಾರೆ. ಆದರೆ, ರಂಜನಿ ಅವರು ಒಂದೇ ಒಂದು ಪೋಟೋ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ಇದನ್ನೂ ಓದಿ
ತುಲಾಭಾರ ಮಾಡಿಸಿದ ನಟಿ ಶ್ರೀಲೀಲಾ; ಕಾರಣ ಏನು?
‘ಕರ್ಮ ಸರಿ ಮಾಡುತ್ತದೆ’; ಸಮಂತಾ ಜೊತೆ ಡೇಟ್ ಮಾಡ್ತಿರೋ ಪತಿಗೆ ಪತ್ನಿ ಟಾಂಗ್
‘ಥಗ್ ಲೈಫ್’ ಚಿತ್ರಕ್ಕಿಂದು ನಿರ್ಣಾಯಕ ದಿನ; ಸಿನಿಮಾ ಪ್ರದರ್ಶನ ಅನುಮಾನ
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?

ಇದನ್ನೂ ಓದಿ: ಕ್ಷಮೆ ಕೇಳಲು ಕಮಲ್ ಹಾಸನ್​ಗೆ ಮತ್ತೆ  24 ಗಂಟೆ ಟೈಮ್ ಕೊಟ್ಟ ಫಿಲ್ಮ್​ ಚೇಂಬರ್

ಕಮಲ್ ಹಾಸನ್ ಅವರಿಗೆ ರಂಜನಿ ಅವರು ತಾವು ಬರೆದ ‘ಕಥೆ ಡಬ್ಬಿ’ ಹಾಗೂ ‘ಸ್ವೈಪ್ ರೈಟ್’ ಪುಸ್ತಕಗಳನ್ನು ನೀಡಿದ್ದರು. ಇದು ಯಾವ ಸಂದರ್ಭದಲ್ಲಿ ನೀಡಿದ ಪುಸ್ತಕ ಎಂಬುದನ್ನು ರಂಜನಿ ಉಲ್ಲೇಖಿಸಿಲ್ಲ. ಆದರೆ, ‘ಕಮಲ್ ಸರ್​ಗೆ ಕನ್ನಡ ಪುಸ್ತಕ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಹಳದಿ ಹಾಗೂ ಕೆಂಪು ಬಣ್ಣದ ಎಮೋಜಿ ಹಾಕಿದ್ದಾರೆ. ಈ ಫೋಟೋಗಳು ಸದ್ಯ ವೈರಲ್ ಆಗಿ ಗಮನ ಸೆಳೆದಿವೆ. ‘ಸೂಪರ್ ಮೇಡಮ್. ನಮ್ಮ ಕನ್ನಡತಿ ಸರಿಯಾದ ಟೈಮ್​ನಲ್ಲಿ ಕನ್ನಡ ಪುಸ್ತಕ ಕೊಟ್ಟಿದ್ದಾರೆ’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ರಂಜನಿ ಅವರು ‘ಕನ್ನಡತಿ’ ಮೊದಲಾದ ಧಾರಾವಾಹಿಗಳ ಮೂಲಕ ಗಮನ ಸೆಳೆದರು. ಆ ಬಳಿಕ ಸಿನಿಮಾ ಕೂಡ ಮಾಡಿದರು. ಈಗ ಅವರು ನಿರ್ದೇಶನಕ್ಕೆ ಇಳಿದಿದ್ದಾರೆ. ‘ಡಿ ಡಿ ಢಿಕ್ಕಿ’ ಹೆಸರಿನ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.