ಕ್ಷಮೆ ಕೇಳಲು ಕಮಲ್ ಹಾಸನ್ಗೆ ಮತ್ತೆ 24 ಗಂಟೆ ಟೈಮ್ ಕೊಟ್ಟ ಫಿಲ್ಮ್ ಚೇಂಬರ್
ಕಮಲ್ ಹಾಸನ್ ಅವರು ಕ್ಷಮೆ ಕೇಳುವ ರೀತಿ ಕಾಣುತ್ತಿಲ್ಲ. ಆದರೆ, ಕನ್ನಡದವರು ಅವರ ಸಿನಿಮಾ ರಿಲೀಸ್ಗೆ ಅವಕಾಶ ನೀಡಲು ಬಿಡುತ್ತಿಲ್ಲ. ಈಗ ಫಿಲ್ಮ್ ಚೇಂಬರ್ ಮತ್ತೆ ಕಮಲ್ಗೆ 24 ಗಂಟೆ ಟೈಮ್ ಕೊಟ್ಟಿದೆ. ಈ ಬಗ್ಗೆ ಕಮಲ್ ಹಾಸನ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕಮಲ್ ಹಾಸನ್ (Kamal Haasan) ಅವರು ವಿವಾದ ಮಾಡಿಕೊಂಡು ಕ್ಷಮೆ ಕೇಳಲು ರೆಡಿ ಇಲ್ಲ. ಈ ಕಾರಣಕ್ಕೆ ಅವರ ನಟನೆಯ ‘ಥಗ್ ಲೈಫ್’ ಚಿತ್ರದ ರಿಲೀಸ್ಗೆ ಕರ್ನಾಟಕದಲ್ಲಿ ಅವಕಾಶ ನೀಡಬಾರದು ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಈ ಮಧ್ಯೆ ಇಂದು (ಜೂನ್ 2) ಕರ್ನಾಟಕ ಫಿಲ್ಮ್ ಚೇಂಬರ್ನಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಎಲ್ಲರ ಅಭಿಪ್ರಾಯ ಕೇಳಲಾಗಿದೆ. ಅಲ್ಲದೆ, ‘ಥಗ್ ಲೈಫ್’ ಚಿತ್ರದ ಕರ್ನಾಟಕದ ವಿತರಕ ವೆಂಕಟೇಶ್ ಅವರ ಕೋರಿಕೆ ಮೇರೆಗೆ ಕಮಲ್ಗೆ ಮತ್ತೆ 24 ಗಂಟೆ ಟೈಮ್ ಕೊಟ್ಟಿದೆ. ಈ ಬಗ್ಗೆ ಕಮಲ್ ಹಾಸನ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕಮಲ್ ಹಾಸನ್ ಅವರು ಕನ್ನಡದ ವಿಚಾರಕ್ಕೆ ಕ್ಷಮೆ ಕೇಳಿಲ್ಲ. ಈಗ ಅವರಿಗೆ ಮತ್ತೆ 24 ಗಂಟೆ ಟೈಮ್ ಕೊಡಲಾಗಿದೆ. ಈ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾಹಿತಿ ನೀಡಿದ್ದಾರೆ. ‘ಕಮಲ್ ಹಾಸನ್ ಕ್ಷಮೆ ಕೆಳೋ ಚಾನ್ಸೇ ಇಲ್ಲ ಎಂದು ಅನಿಸುತ್ತಿದೆ. ಎಲ್ಲರ ಜೊತೆ ಚರ್ಚೆ ಮಾಡುತ್ತೇವೆ. ಎಲ್ಲರ ಅನಿಸಿಕೆ ಏನಿದೆ ಎಂಬುದನ್ನು ನೋಡುತ್ತೇವೆ. ಕಮಲ್ ಹಾಸನ್ ಸದ್ಯ ದುಬೈನಲ್ಲಿದ್ದಾರೆ. ನಾಳೆ (ಜೂನ್ 3) 11 ಘಂಟೆಗೆ ಚೆನ್ನೈಗೆ ಬರ್ತಾರೆ. ಮಂಗಳವಾರ ಮಧ್ಯಾಹ್ನ 12 ಗಂಟೆ ತನಕ ಟೈಂ ಕೊಡಿ ಅಂತ ವಿತರಕರು ಕೆಳಿದ್ದಾರೆ’ ಎಂದಿದ್ದಾರೆ ನರಸಿಂಹಲು. ಈ ಮೂಲಕ ನಾಳೆವರೆಗೆ ಕಮಲ್ ಹಾಸನ್ಗೆ ಗಡುವು ಕೊಟ್ಟಂತೆ ಆಗಿದೆ.
ವಿವಾದ ಏನು?
‘ಥಗ್ ಲೈಫ್’ ಚೆನ್ನೈ ಈವೆಂಟ್ನಲ್ಲಿ ಮಾತನಾಡಿದ್ದ ಕಮಲ್ ಹಾಸನ್ ಅವರು, ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ವಿಚಾರ ಅಷ್ಟು ಗಂಭೀರವಾಗಿರಲ್ಲಿ. ಆ ಬಳಿಕ ಈ ಕ್ಲಿಪ್ ವೈರಲ್ ಆಗಿ ಇದರ ಬಗ್ಗೆ ಚರ್ಚೆ ಹುಟ್ಟುವಂತೆ ಮಾಡಲಾಯಿತು. ಕಮಲ್ ಹಾಸನ್ ಕ್ಷಮೆ ಕೇಳುವಂತೆ ಒತ್ತಾಯ ಹೇರಲಾಯಿತು. ಆದರೆ, ಕಮಲ್ ಹಾಸನ್ ಅವರು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎನ್ನುವ ನಿರ್ಧಾರ ಮಾಡಿಯಾಗಿದೆ.
ಇದನ್ನೂ ಓದಿ: ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ಗೆ ಕರೆ ಕೊಡ್ತಿವಿ: ವಾಟಾಳ್
ಚೇಂಬರ್ ನಿರ್ಧಾರ ಏನು?
ಸದ್ಯ ಕರ್ನಾಟಕ ಫಿಲ್ಮ್ ಚೇಂಬರ್ ಅವರು ಕಮಲ್ ಹಾಸನ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಸಿನಿಮಾ ರಿಲೀಸ್ ಆಗಬೇಕು ಎಂದರೆ ಕ್ಷಮಾಪಣೆ ಕೇಳೋದು ಕಡ್ಡಾಯ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಅವರು ಸೊಪ್ಪು ಹಾಕುತ್ತಿಲ್ಲ. ಈಗ 24 ಗಂಟೆ ಹೆಚ್ಚುವರಿಯಾಗಿ ಪಡೆಯಲಾಗಿದ್ದು, ಆ ಸಂದರ್ಭದಲ್ಲಿ ಅವರು ಕ್ಷಮೆ ಕೇಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








