‘ನೀಲಿಚಿತ್ರ ಕಳಿಸ್ತಾರೆ, ಅದರ ಬಗ್ಗೆಯೇ ಮಾತಾಡ್ತಾರೆ’; ಆಡುಗೋಡಿ ಶ್ರೀನಿವಾಸ್​ ಮೇಲೆ ನಟಿ ಆರೋಪ

Kannada Actress Rani: ‘ಪೋಷಕ ಕಲಾವಿದರ ಸಂಘದ ಮೇಲೆ ನಾನು ಆರೋಪ ಮಾಡುತ್ತಿಲ್ಲ. ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಮೇಲೆ ಮಾತ್ರ ನನ್ನ ಆರೋಪ ಇರುವುದು’ ಎಂದು ನಟಿ ರಾಣಿ ಹೇಳಿದ್ದಾರೆ.

‘ನೀಲಿಚಿತ್ರ ಕಳಿಸ್ತಾರೆ, ಅದರ ಬಗ್ಗೆಯೇ ಮಾತಾಡ್ತಾರೆ’; ಆಡುಗೋಡಿ ಶ್ರೀನಿವಾಸ್​ ಮೇಲೆ ನಟಿ ಆರೋಪ
ಆಡುಗೋಡಿ ಶ್ರೀನಿವಾಸ್
Edited By:

Updated on: Nov 17, 2022 | 12:20 PM

ಸಿನಿಮಾರಂಗದ ಕಿರಿಕ್​ಗಳು ಒಂದೆರಡಲ್ಲ. ಬಣ್ಣದ ಲೋಕದಲ್ಲಿ ಒಂದಿಲ್ಲೊಂದು ವಿವಾದಗಳು ಸೃಷ್ಟಿ ಆಗುತ್ತಲೇ ಇರುತ್ತವೆ. ಈಗ ಕನ್ನಡ ಚಿತ್ರರಂಗದ (Kannada Film Industry) ಪೋಷಕ ಕಲಾವಿದರ ಸಂಘದಲ್ಲಿನ ಕೆಲವು ಪ್ರಮುಖರ ಮೇಲೆ ನಟಿ ರಾಣಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್​ (Dingri Nagaraj) ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್​ ಅವರ ವರ್ತನೆ ಸರಿಯಿಲ್ಲ ಎಂದು ರಾಣಿ (Kannada Actress Rani) ಆರೋಪಿಸಿದ್ದಾರೆ. ಅಲ್ಲದೇ, ಸಂಘದ ಮಹಿಳಾ ಸದಸ್ಯರಿಗೆ ಮುಜುಗರ ಆಗುವ ರೀತಿಯಲ್ಲಿ ಆಡುಗೋಡಿ ಶ್ರೀನಿವಾಸ್ (Adugodi Srinivas) ನಡೆದುಕೊಳ್ಳುತ್ತಾರೆ ಎಂದು ರಾಣಿ ಹೇಳಿದ್ದಾರೆ. ಈ ಕುರಿತು ಅವರು ಸುದ್ದಿಗೋಷ್ಠಿ ನಡೆಸಿ ಇನ್ನಷ್ಟು ಮಾಹಿತಿ ನೀಡಲಿದ್ದಾರೆ.

‘ಪೋಷಕ ಕಲಾವಿದರ ಸಂಘದ ಮೇಲೆ ನಾನು ಆರೋಪ ಮಾಡುತ್ತಿಲ್ಲ. ಸಂಘಕ್ಕೆ ಮಸಿ ಬಳಿಯುವಂತಹ ಕೆಲಸ ನಾನು ಎಂದಿಗೂ ಮಾಡುವುದಿಲ್ಲ. ಸಂಘದಲ್ಲಿ ಇರುವ ಅಧ್ಯಕ್ಷರಾದ ಡಿಂಗ್ರಿ ನಾಗರಾಜ್​ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್​ ಅವರ ಮೇಲೆ ಮಾತ್ರ ನನ್ನ ಆರೋಪ ಇರುವುದು’ ಎಂದು ನಟಿ ರಾಣಿ ಹೇಳಿದ್ದಾರೆ.

‘ಸಂಘದ ಲೆಕ್ಕಾಚಾರ ಅಥವಾ ಯಾವುದೇ ವಿಷಯವನ್ನು ನಾವು ಕೇಳಲು ಹೋದರೆ ನಮಗೆ ನಮಗೆ ಸಂಬಂಧವೇ ಇಲ್ಲ ಎಂಬಂತೆ ಆಗಿದೆ. ನಾನು ಸಂಘದ ಉಪಾಧ್ಯಕ್ಷೆ. ನಾನು ಕೂಡ ಚುನಾವಣೆಯಲ್ಲಿ ಗೆದ್ದ ಮಹಿಳೆ. ನಾನು ಅಲ್ಲಿ ಮೆಂಬರ್​ ಆಗಿ 15 ವರ್ಷ ಆಯ್ತು. ಯಾವುದೇ ವಿಷಯವನ್ನೂ ನಮಗೆ ಬಿಟ್ಟುಕೊಡದೇ ಅವರವರೇ ಸೇರಿಕೊಂಡು ಮಾಡುತ್ತಾರೆ. ಇದನ್ನು ನಾವು ಕೇಳಲು ಹೋದರೆ ಬೇರೆ ಭಾಷೆ ಬಳಸುತ್ತಾರೆ. ಇಷ್ಟ ಇದ್ರೆ ಇರಿ, ಇಲ್ಲ ಅಂದ್ರೆ ರಾಜಿನಾಮೆ ಕೊಟ್ಟು ಹೋಗಿ ಎಂದು ಟೇಬಲ್​ ತಟ್ಟಿ ಹೇಳುತ್ತಾರೆ’ ಎಂದು ರಾಣಿ ಆರೋಪಿಸಿದ್ದಾರೆ.

ಇದನ್ನೂ ಓದಿ
Ashitha: ಕನ್ನಡ ಚಿತ್ರರಂಗದ ಕಹಿ ಸತ್ಯ ಅನಾವರಣ; ಮತ್ತೆ ಮೀಟೂ ಬಿರುಗಾಳಿ ಎಬ್ಬಿಸಿದ ನಟಿ ಆಶಿತಾ
ಕನ್ನಡ ಚಿತ್ರರಂಗ ಉದಾಹರಿಸಿ ಬಾಲಿವುಡ್​ ಕಿವಿಹಿಂಡಿದ ನವಾಜುದ್ದೀನ್ ಸಿದ್ದಿಕಿ; ‘ಸೇಕ್ರೆಡ್ ಗೇಮ್ಸ್’ ನಟ ಹೇಳಿದ್ದೇನು?
‘ಕೆಜಿಎಫ್​ ರೀತಿಯ ಕ್ವಾಲಿಟಿ ಸಿನಿಮಾಗಳ ಸಂಖ್ಯೆ ಹೆಚ್ಚಿಸಿ’: ಕನ್ನಡ ಚಿತ್ರರಂಗಕ್ಕೆ ಸಿಎಂ ಬೊಮ್ಮಾಯಿ ಸಲಹೆ
‘ಕನ್ನಡ ಚಿತ್ರರಂಗ ಅತಿ ಕಳಪೆ’ ಎಂದವರಿಗೆ ಚೇತನ್​ ಬೆಂಬಲ; ಖಡಕ್​ ಎಚ್ಚರಿಕೆ ಕೊಟ್ಟ ರಕ್ಷಿತ್​ ಶೆಟ್ಟಿ

‘ಈ ಹಿಂದೆ ಇದ್ದ ಉಪಾಧ್ಯಕ್ಷೆಗೆ ಆಡುಗೋಡಿ ಶ್ರೀನಿವಾಸ್​ ಅವರು ಬ್ಲ್ಯೂ ಫಿಲ್ಮ್​ ಕಳಿಸುತ್ತಿದ್ದರು. ಕೆಲಸದ ಸಲುವಾಗಿ ನಮ್ಮನ್ನೆಲ್ಲ ಕರೆದುಕೊಂಡು ಹೋದಾಗ ಬರೀ ಅದೇ ವಿಷಯ ಮಾತಾಡೋದು. ಇದರಿಂದ ನಮ್ಮ ಮನಸ್ಸಿಗೆ ತುಂಬ ನೋವಾಗಿದೆ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡುವ ಸಂಘ ಇದು. ನಮ್ಮ ಸಂಘದ ಯಾವುದೇ ಮಹಿಳೆಗೆ ಕಳಿಸಿದರೂ ಅದು ನಮಗೆ ಕಳಿಸಿದಂತೆ’ ಎಂದು ರಾಣಿ ಹೇಳಿದ್ದಾರೆ.

‘ಮೀಟಿಂಗ್​ನಲ್ಲಿ ಈ ವಿಚಾರ ಪ್ರಸ್ತಾಪ ಆದಾಗ ದೊಡ್ಡ ಗಲಾಟೆ ಆಗಿತ್ತು. ಸಂಘದ ಹೆಸರು ಹಾಳಗತ್ತೆ ಎಂದು ಅವರವರೇ ಕಾಂಪ್ರಮೈಸ್​ ಮಾಡಿದ್ದರು. ಆಗ ಕ್ಷಮಿಸಿ ಬಿಡಲಾಗಿತ್ತು. ಪದೇ ಪದೇ ಅದನ್ನೇ ರೂಢಿಸಿಕೊಂಡರೆ ನಾವೇನು ಮಾಡೋದು’ ಎಂದು ರಾಣಿ ಪ್ರಶ್ನಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:43 am, Thu, 17 November 22