ಈ ವಾರ ರಿಲೀಸ್ ಆಗ್ತಿವೆ ಹಲವು ಸಿನಿಮಾಗಳು; ನಿಮ್ಮ ಆಯ್ಕೆ ಯಾವುದು?

ಹೊಸ ಪ್ರಯತ್ನ ಒಂದು ಕಡೆಯಾದರೆ, ಅನುಭವಿ ಕಲಾವಿದರ ಸಿನಿಮಾಗಳು ಮತ್ತೊಂದು ಕಡೆ. ಈ ವಾರ ತೆರೆಗೆ ಬರುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.

ಈ ವಾರ ರಿಲೀಸ್ ಆಗ್ತಿವೆ ಹಲವು ಸಿನಿಮಾಗಳು; ನಿಮ್ಮ ಆಯ್ಕೆ ಯಾವುದು?
Drishyam 2
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 17, 2022 | 3:57 PM

ಶುಕ್ರವಾರ ಬಂತು ಎಂದರೆ ಸಿನಿಪ್ರಿಯರ ಸಂತಸ ಹೆಚ್ಚುತ್ತದೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕು ಎಂದುಕೊಂಡವರು ಈ ವಾರ ಯಾವ ಸಿನಿಮಾ ರಿಲೀಸ್ ಆಗಲಿದೆ ಎಂಬ ಕುತೂಹಲದಲ್ಲಿರುತ್ತಾರೆ. ಈ ವಾರ (ನವೆಂಬರ್ 18) ಕನ್ನಡ, ಹಿಂದಿಯಲ್ಲಿ ಕೆಲ ಪ್ರಮುಖ ಚಿತ್ರಗಳು ರಿಲೀಸ್ ಆಗುತ್ತಿದೆ. ಹೊಸ ಪ್ರಯತ್ನ ಒಂದು ಕಡೆಯಾದರೆ, ಅನುಭವಿ ಕಲಾವಿದರ ಸಿನಿಮಾಗಳು ಮತ್ತೊಂದು ಕಡೆ. ಈ ವಾರ ತೆರೆಗೆ ಬರುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.

ಅಬ್ಬರ:

ಪ್ರತಿ ವರ್ಷ ಪ್ರಜ್ವಲ್​ ದೇವರಾಜ್​ ನಟನೆಯ ಒಂದು ಚಿತ್ರವಾದರೂ ರಿಲೀಸ್ ಆಗೇ ಆಗುತ್ತದೆ. ಅವರು  ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಟನೆಯ ‘ಅಬ್ಬರ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಪ್ರಜ್ವಲ್​ ದೇವರಾಜ್​​ಗೆ ಜೊತೆಯಾಗಿ ನಿಮಿಕಾ ರತ್ನಾಕರ್​, ಲೇಖಾ ಚಂದ್ರ ಹಾಗೂ ರಾಜಶ್ರೀ ನಟಿಸಿದ್ದಾರೆ. ಈ ಚಿತ್ರಕ್ಕೆ ರಾಮ್ ​ನಾರಾಯಣ್ ನಿರ್ದೇಶನ ಮಾಡಿದ್ದಾರೆ. ಬಸವರಾಜ್ ಮಂಚಯ್ಯ ನಿರ್ಮಾಣ ಇರುವ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಮಠ:

2006ರಲ್ಲಿ ತೆರೆಗೆ ಬಂದ ‘ಮಠ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಗುರುಪ್ರಸಾದ್ ನಿರ್ದೇಶನ ಮಾಡಿದ್ದರು. ಜಗ್ಗೇಶ್ ಮೊದಲಾದವರು ನಟಿಸಿದ್ದರು. ಈಗ ಮತ್ತೆ ‘ಮಠ’ ಶೀರ್ಷಿಕೆ ಅಡಿ ಸಿನಿಮಾ ಬರುತ್ತಿದೆ. ಸಂಜನಾ ಬುರ್ಲಿ, ಶರತ್ ಲೋಹಿತಾಶ್ವ, ರಮೇಶ್ ಭಟ್, ಬ್ಯಾಂಕ್ ಜನಾರ್ದನ್, ಸಾಧು ಕೋಕಿಲ, ಗುರುಪ್ರಸಾದ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರವೀಂದ್ರ ವಂಶಿ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಖಾಸಗಿ ಪುಟಗಳು:

ಸಂತೋಷ್ ಶ್ರೀಕಾಂತಪ್ಪ ನಿರ್ದೇಶನದ ಈ ಚಿತ್ರದಲ್ಲಿ ವಿಶ್ವ ಆರ್​.ಎನ್​, ಲಿಯೋನಿಲ್ಲಾ ಡಿಸೋಜಾ, ಚೇತನ್ ದುರ್ಗಾ ಮೊದಲಾದವರು ನಟಿಸಿದ್ದಾರೆ. ಇದು ಹೊಸ ತಂಡದವರ ಪ್ರಯತ್ನ.

ದೃಶ್ಯಂ 2: 

ಮಲಯಾಳಂ ‘ದೃಶ್ಯಂ 2’ ಚಿತ್ರ ಹಲವು ಭಾಷೆಗಳಲ್ಲಿ ರಿಮೇಕ್ ಆಗಿದೆ. ಈಗ ಈ ಚಿತ್ರ ಹಿಂದಿಯಲ್ಲಿ ಅದೇ ಹೆಸರಲ್ಲಿ ರಿಲೀಸ್ ಆಗುತ್ತಿದೆ. ಅಜಯ್ ದೇವಗನ್, ಟಬು, ಅಕ್ಷಯ್ ಖನ್ನಾ, ಶ್ರಿಯಾ ಶರಣ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಭಿಷೇಕ್ ಪಾಠಕ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಮಿಸ್ಟರ್ ಮಮ್ಮಿ: 

ರಿತೇಶ್ ದೇಶ್​ಮುಖ್ ಹಾಗೂ ಜೆನಿಲಿಯಾ ದೇಶ್​ಮುಖ್ ಅಭಿನಯದ ‘ಮಿಸ್ಟರ್ ಮಮ್ಮಿ’ ಈ ವಾರ ರಿಲೀಸ್ ಆಗುತ್ತಿದೆ. ಇದು ಜೆನಿಲಿಯಾ ಅವರ ಕಂಬ್ಯಾಕ್ ಸಿನಿಮಾ. ಪತಿ-ಪತ್ನಿ ಒಂದೇ ಸಿನಿಮಾದಲ್ಲಿ ನಟಿಸಿರೋದು ವಿಶೇಷ.