‘ಎ ಡೇಟ್’ ಸಿನಿಮಾದ ‘ಬ್ಯಾಡ್ ಗೈ ಆ್ಯಂಥಮ್’ ಹಾಡು ಹೇಗಿದೆ ನೋಡಿ..

ಬಿಡುಗಡೆಗೆ ಸಜ್ಜಾಗುತ್ತಿರುವ ‘ಎ ಡೇಟ್’ ಸಿನಿಮಾವನ್ನು ವಿತರಣೆ ಮಾಡಲು ಪಿವಿಆರ್ ಐನಾಕ್ಸ್ ಸಂಸ್ಥೆ ಮುಂದಾಗಿದೆ. ಬೆಂಗಳೂರಿನ ಐವತ್ತೈದಕ್ಕೂ ಹೆಚ್ಚು ನೈಜ ಸ್ಥಳಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ‘ವೀಕೆಂಡ್ ಶಾರ್ಟ್ಸ್ ಸ್ಟುಡಿಯೋ’ ಮೂಲಕ ಈ ಸಿನಿಮಾ ಸಿದ್ಧವಾಗಿದೆ. ಚಿತ್ರದ ಬಿಡುಗಡೆ ದಿನಾಂಕ ಸದ್ಯದಲ್ಲೇ ತಿಳಿಯಲಿದೆ.

‘ಎ ಡೇಟ್’ ಸಿನಿಮಾದ ‘ಬ್ಯಾಡ್ ಗೈ ಆ್ಯಂಥಮ್’ ಹಾಡು ಹೇಗಿದೆ ನೋಡಿ..
Ashwini Shenoy, Sujanith Shetty

Updated on: Aug 16, 2026 | 12:15 PM

ಹೊಸಬರ ಸಿನಿಮಾದಲ್ಲಿ ಹೊಸತನ ಇದ್ದೇ ಇರುತ್ತದೆ. ಆ ರೀತಿಯ ಮುನ್ಸೂಚನೆ ನೀಡುತ್ತಲೇ ಬರುತ್ತಿದೆ ‘ಎ ಡೇಟ್’ (A Date) ಸಿನಿಮಾ. ಈ ಸಿನಿಮಾದಲ್ಲಿ ಹೊಸ ತಲೆಮಾರಿನ ಯುವಕ-ಯುವತಿಯ ಕಹಾನಿ ಇದೆ. ಅದರ ಝಲಕ್ ತೋರಿಸಲು ಈ ಸಿನಿಮಾದಿಂದ ‘ಬ್ಯಾಡ್ ಗೈ ಆ್ಯಂಥಮ್’ (Bad Guy Anthem) ಹಾಡನ್ನು ರಿಲೀಸ್ ಮಾಡಲಾಗಿದೆ. ಈ ಕಾಲದಲ್ಲಿ ಡೇಟಿಂಗ್ ಎಂಬುದು ಕಾಮನ್. ಅಂಥದ್ದೇ ಒಂದು ಕಥೆಯನ್ನು ಇಟ್ಟುಕೊಂಡು ‘ಎ ಡೇಟ್’ ಸಿನಿಮಾ ಮಾಡಲಾಗಿದೆ. ಈ ಸಿನಿಮಾದಲ್ಲಿ ಸುಜನಿತ್ ಶೆಟ್ಟಿ ಮತ್ತು ಅಶ್ವಿನಿ ಶೆಣೈ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

ಮಹಾನಗರಿ ಬೆಂಗಳೂರಿನಲ್ಲಿ ಒಂದು ದಿನದ ಅವಧಿಯಲ್ಲಿ ನಡೆಯುವ, ಎರಡು ಪ್ರಮುಖ ಪಾತ್ರಗಳ ಸುತ್ತ ಸಾಗುವ ಕಥೆ ‘ಎ ಡೇಟ್’ ಸಿನಿಮಾದಲ್ಲಿದೆ. ವಿಮಲ್ ರಾಜ್ ಎನ್. ಅವರು ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಮತ್ತು ನಂತರದ ತಾಂತ್ರಿಕ ಕಾರ್ಯಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಈಗ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ.

ಚಿತ್ರದ ರಿಲೀಸ್ ಹತ್ತಿರ ಆಗುತ್ತಿರುವ ಈ ಹೊತ್ತಿನಲ್ಲಿ ಪ್ರಚಾರದ ಭಾಗವಾಗಿ ‘ಬ್ಯಾಡ್ ಗೈ ಆಂಥಮ್’ ಹಾಡನ್ನು ‘ಎ ಡೇಟ್’ ಚಿತ್ರತಂಡ ಬಿಡುಗಡೆ ಮಾಡಿದೆ. ಈಗಿನ ಯುವ ಸಮುದಾಯಕ್ಕೆ ನೇರವಾಗಿ ತಲುಪಿಕೊಳ್ಳುವ ರ‍್ಯಾಪ್ ಶೈಲಿಯಲ್ಲಿರುವ ಈ ಹಾಡಿಗೆ ಸುಜನಿತ್ ಶೆಟ್ಟಿ ಹಾಗೂ ವಿಮಲ್ ರಾಜ್ ಎನ್. ಅವರು ಸಾಹಿತ್ಯ ರಚಿಸಿದ್ದಾರೆ. ಮೋಕ್ಷ ಬೀಟ್ಸ್ ಸಂಗೀತ ಸಂಯೋಜನೆ ಮಾಡಿದ್ದಾರೆ.

‘ಬ್ಯಾಡ್ ಗೈ ಆ್ಯಂಥಮ್’ ಹಾಡು:

BAD GUY ANTHEM | A DATE Kannada Movie | Sujanith Shetty, Ashwini Shenoy | Vimal Raj N

ಈ ಹಾಡಿನ ಮೂಲಕ ‘ಎ ಡೇಟ್’ ಸಿನಿಮಾದತ್ತ ಪ್ರೇಕ್ಷಕರು ಕುತೂಹಲದ ದೃಷ್ಟಿ ಹಾಯಿಸುತ್ತಾರೆ ಎಂಬ ಭರವಸೆ ಚಿತ್ರತಂಡಕ್ಕಿದೆ. ಮೂಲತಃ ಐಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ ವಿಮಲ್ ರಾಜ್ ಎನ್. ಅವರು ಯೂಟ್ಯೂಬ್​ನಲ್ಲಿ ಹಲವು ಕಿರುಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸುವ ಮೂಲಕ ತಮ್ಮದೇ ಆದ ಪ್ರೇಕ್ಷಕವರ್ಗವನ್ನು ಹೊಂದಿದ್ದಾರೆ. ಕಿರುಚಿತ್ರಗಳ ಮೂಲಕ ಕಥೆ ಹೇಳುವ ತಮ್ಮದೇ ಶೈಲಿಯನ್ನು ರೂಪಿಸಿಕೊಂಡಿರುವ ಅವರು ಈಗ ‘ಎ ಡೇಟ್’ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ: ‘ಯಶ್ ಮಿಸ್ಟರ್ ಶೋಆಫ್’ ಎಂದಿದ್ದ ರಶ್ಮಿಕಾಗೆ ಈಗ ಪ್ರತಿಕ್ರಿಯೆ ನೀಡಿದ ರಾಕಿ ಭಾಯ್

ಚಿತ್ರದ ಕಥೆಯ ಬಗ್ಗೆ ತಂಡ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಭೇಟಿಯಾಗುವ ಉತ್ತರ ಭಾರತದ ಯುವತಿ ಮತ್ತು ದಕ್ಷಿಣ ಭಾರತದ ಯುವಕನ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಭಯ, ಕುತೂಹಲ, ಹಿಂಜರಿಕೆ, ನಂಬಿಕೆ ಮತ್ತು ಭಾವನಾತ್ಮಕ ಸಂಘರ್ಷಗಳ ನಡುವೆ ಅವರ ಒಂದು ದಿನದ ಪಯಣ ಹೇಗೆ ಹೊಸ ತಿರುವು ಪಡೆದುಕೊಳ್ಳುತ್ತದೆ ಎಂಬುದು ಈ ಸಿನಿಮಾದ ಕಥಾಹಂದರ. ಇಂದಿನ ಸಿಟಿ ಲೈಫ್, ಬದಲಾಗುತ್ತಿರುವ ಸಂಬಂಧಗಳು ಮತ್ತು ವಿಭಿನ್ನ ಭಾಷೆ-ಸಂಸ್ಕೃತಿಗಳಿಗೆ ಸೇರಿದ ಇಬ್ಬರ ನಡುವಿನ ಮಾನವೀಯ ಸಂಪರ್ಕವನ್ನು ರೊಮ್ಯಾಂಟಿಕ್ ಡ್ರಾಮಾ ಶೈಲಿಯಲ್ಲಿ ಈ ಚಿತ್ರ ಕಟ್ಟಿಕೊಡಲಿದೆ ಎಂದು ಚಿತ್ರತಂಡ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us